Lifetime Toll Fee Pass: ಸರ್ಕಾರದಿಂದ ಗುಡ್‌ನ್ಯೂಸ್, ಒಮ್ಮೆ ಟೋಲ್ ಶುಲ್ಕ ಕಟ್ಟಿ ವರ್ಷಗಳ ಕಾಲ ಓಡಾಡಿ!

ಬೆಂಗಳೂರು, ಫೆಬ್ರವರಿ 07: ಪ್ರತಿ ಬಾರಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರ ಮಾಡುವಾಗಲೂ ಮಾಲೀಕರು ಟೋಲ್ ಶುಲ್ಕ ಪಾವತಿಸಬೇಕು. ಇದರಿಂದ ಉಂಟಾಗುವ ಆರ್ಥಿಕ ಹೊರೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ಮಹತ್ವದ ಪ್ಲಾನ್ ಹಾಕಿಕೊಂಡಿದೆ. ಒಂದು ಭಾರಿ ಶುಲ್ಕ ಪಾವತಿಸುವ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪ್ರಸ್ತಾವನೆ ಸಿದ್ಧಪಡಿಸಿದೆ ಎಂದು ವರದಿ ಆಗಿದೆ.

ಹೈವೇಗಳಲ್ಲಿ ಓಡಾಡುವ ವಾಹನ ಸವಾರರಿಗೆ ವಾರ್ಷಿಕ ಇಲ್ಲವೇ ಲೈಪ್‌ಟೈಮ್ ಟೋಲ್ ಪಾಸ್ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಹೈವೇಗಳಲ್ಲಿ ಸಂಚಾರ ಮಾಡುವಾಗಿ ಶುಲ್ಕ ಪಾವತಿ ಅಡಚರಣೆ, ಸಮಯ ಉಳಿತಾಯ, ಮುಖ್ಯವಾಗಿ ಪ್ರಯಾಣಿಕರ ಆರ್ಥಿಕ ಹೊರೆ ತಪ್ಪಿಸುವ ಗುರಿಯಿಂದಾಗಿ ಈ ಚಿಂತನೆ ನಡೆಯುತ್ತರಿದೆ. ಸುಗಮ ಪ್ರಯಾಣಕ್ಕೆ ಅನುಕೂಲವಾಗಲಿದೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

NHAI and Union Government Plans to Introduce Annual and Lifetime Toll Pass System Pass Benefits

ಒಂದು ಬಾರಿಯಷ್ಟೇ ಟೋಲ್ ಶುಲ್ಕ ಪಾವತಿಸಿ

ಖಾಸಗಿ ಕಾರುಗಳ ಮಾಲೀಖರು, ವಿವಿಧ ರೀತಿಯ ವಾಹನಗಳ ಮಧ್ಯಮ ವರ್ಗದ ವ್ಯಕ್ತಿಗಳು ಹಾಗೂ ನಿಯಮಿತವಾಗಿ ಓಡಾಡುವ ಪ್ರಯಾಣಿಕರಿಗೆ ಈ ವಾರ್ಷಿಕ ಮತ್ತು ಲೈಪ್‌ಟೈಮ್ ಟೋಲ್ ಶುಲ್ಕ ಪಾವತಿಯ ಆಯ್ಕೆ ನೀಡಲಾಗುತ್ತಿದೆ. ಅವರು ವಾರ್ಷಿಕವಾಗಿ ಟೋಲ್ ಪಾಸ್ ಬೇಕಾದರೆ ಒಮ್ಮೆ 3,000 ರೂಪಾಯಿ ಕಟ್ಟಿದರೆ ಮುಗಿಯಿತು. ಇನ್ನೂ ಲೈಪ್‌ಟೈಮ್ ಟೋಲ್ ಪಾಸ್‌ ಬೇಕಾದಲ್ಲಿ ರೂ. 30,000 ಅನ್ನು ಒಮ್ಮೆ ಪಾವತಿಸಬೇಕು. ಗಮನಿಸಬೇಕಾದ ವಿಷಯವೆಂದರೆ ಈ ಲೈಪ್‌ಟೈಮ್ ಟೋಲ್ ಪಾಸ್‌ 15 ವರ್ಷಗಳವರೆಗೆ ಮಾನ್ಯವಾಗಿರುತ್ತದೆ.

ಸದ್ಯ ಪ್ರಸ್ತಾವನೆ ಹಂತದಲ್ಲಿರುವ ಈ ಪ್ಲಾನ್ ಅನ್ನು ಕೇಂದ್ರ ಸರ್ಕಾರ, ಹೆದ್ದಾರಿ ಪ್ರಾಧಿಕಾರ ಮತ್ತು ಹೆದ್ದಾರಿ ಸಚಿವಾಲಯವು ಶೀಘ್ರವೇ ಅಂತಿಮಗೊಳಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಣವನ್ನು ನೀವು ಫಾಸ್ಟ್‌ ಟ್ಯಾಗ್ ಮೂಲಕವೇ ಕಟ್ಟುವಂತೆ ವ್ಯವಸ್ಥೆ ಜಾರಿಗೆ ತರುವ ಸಾಧ್ಯತೆ ಇದೆ. ಸದ್ಯ ತಿಂಗಳಿಗೆ ಸುಮಾರು 340 ರೂ. ಬೆಲೆಯ ಮಾಸಿಕ ಪಾಸ್ ವ್ಯವಸ್ಥೆ ಇದೆ. ಇದು ಒಂದು ವರ್ಷಕ್ಕೆ 4,080 ರೂಪಾಯಿ ಆಗುತ್ತಿದೆ. ಇಷ್ಟು ಹಣದ ಬದಲಾಗಿ ಕೇವಲ 3000 ರೂಪಾಯಿ ಒಮ್ಮೆ ಪಾವತಿಸಿ ವರ್ಷಪೂರ್ತಿ ಅಡಚಣೆ ಇಲ್ಲದೇ ಓಡಾಡಬಹುದಾಗಿದೆ.

ಹೆದ್ದಾರಿ ಪ್ರಾಧಿಕಾರದಿಂದ ಈಗಾಗಲೇ ಅಸ್ತಿತ್ವದಲ್ಲಿರುವ ಮಾಸಿಕ ಪಾಸ್‌ಗಳಿಗಿಂತ ಈ ವಾರ್ಷಿಕ ಮತ್ತು ಲೈಪ್‌ಟೈಮ್ ಟೋಲ್ ಪಾಸ್ ಪರಿಣಾಮಕಾರಿ ವಿಧಾನವಾಗಿದೆ. ವಾಹನ ಸವಾರರನ್ನು ಈ ಕೊಡುಗೆ ಆಕರ್ಷಿಸಬಹುದು ಎಂದು ಪ್ರಾಧಿಕಾರ ನಿರೀಕ್ಷೆ ಹೊಂದಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಆದೇಶ ಹೊರ ಬಿದ್ದಲ್ಲಿ, ವಾಹನ ಸವಾರರು, ಮಾಲೀಕರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

NHAI and Union Government Plans to Introduce Annual and Lifetime Toll Pass System Pass Benefits

ಕೇಂದ್ರ ಹೆದ್ದಾರಿ ಸಚಿವರು ಹೇಳಿದ್ದೇನು?

ಇತ್ತೀಚೆಗೆ ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ, ಶೀಘ್ರವೇ ರಸ್ತೆ ಟೋಲ್ ತೆರಿಗೆಯಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಇದು ಪ್ರಯಾಣಿಕ ಸ್ನೇಹಿ ಆಗಿರಲಿದೆ ಎಂದು ಸಂತಸದ ವಿಷಯ ಹಂಚಿಕೊಂಡಿದ್ದರು. ಟೋಲ್ ಶುಲ್ಕ ಪಾಸ್ ಅಧ್ಯಯನ ಮಾಡಲಾಗುವುದು. ಟೋಲ್ ತೆರಿಗೆ ಬಗೆಗಿನ ದೂರು ನಿವಾರಣೆಗೆ, ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲವೇ ಯೋಜನೆ ಜಾರಿಗೊಳಿಸಲಾಗುವುದು ಎಂದು ಖಾಸಗಿ ವಾಹಿನಿ ಸಂದರ್ಶನದಲ್ಲಿ ಸಚಿವರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+