ಆಯುಷ್ಮಾನ್ ಭಾರತ್ ಫಲಾನುಭವಿಗಳಿಗೆ ಸಹಾಯವಾಣಿ

ನವದೆಹಲಿ, ಸೆಪ್ಟೆಂಬರ್ 17: ಹುಟ್ಟುಹಬ್ಬದ ಸಂಭ್ರಮದಲ್ಲಿರ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಆಯುಷ್ಮಾನ್ ಭಾರತ್. ರಾಷ್ಟ್ರೀಯ ಆರೋಗ್ಯ ಸುರಕ್ಷಾ ಮಿಷನ್ ಅಡಿಯಲ್ಲಿ ಜಾರಿಗೊಳ್ಳಲಿರುವ ಈ ಯೋಜನೆಯ ಫಲಾನುಭವಿಗಳ ನೆರವಿಗಾಗಿ ವೆಬ್ ಸೈಟ್ ಹಾಗೂ ಸಹಾಯವಾಣಿಯನ್ನು ಪ್ರಕಟಿಸಲಾಗಿದೆ.

ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ(PMJAY) ಮೂಲಕ ವಾರ್ಷಿಕವಾಗಿ ಫಲಾನುಭವಿ ಕುಟುಂಬಕ್ಕೆ 5 ಲಕ್ಷ ರು ತನಕ ಸಿಗಲಿದೆ. ಸುಮಾರು 10 ಕೋಟಿ ಬಡ ಕುಟುಂಬಗಳಿಗೆ ಇದರಿಂದ ನೆರವಾಗಲಿದೆ. ಸೆಪ್ಟೆಂಬರ್ 23ರಂದು ಪ್ರಧಾನಿ ಮೋದಿ ಅವರು ಜಾರ್ಖಂಡ್ ನಲ್ಲಿ ಈ ಮಹತ್ವದ ಆರೋಗ್ಯ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಅಧಿಕೃತ ವೆಬ್ ತಾಣ: ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್ ಎಚ್ಎ) ಯು ಆಯುಷ್ಮಾನ್ ಭಾರತ್ ಯೋಜನೆ ಅಥವಾ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗಾಗಿ ವೆಬ್ ಸೈಟ್ ರೂಪಿಸಿದೆ. ಈ ವೆಬ್ ಸೈಟ್ ಮೂಲಕ ಫಲಾನುಭವಿಗಳು ವಿವರ ಪಡೆಯಬಹುದು. ತಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿದೆಯೆ ಎಂದು ಪರಿಶೀಲಿಸಬಹುದು.

NHA launches website, helpline number for Ayushman Bharat beneficiaries

ಹೆಸರು ಪರಿಶೀಲನೆ: ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಅಧಿಕೃತ ತಾಣ mera.pmjay.gov.in ಗೆ ಭೇಟಿ ನೀಡಿ ಅಥವಾ 14555 ಸಹಾಯವಾಣಿಗೆ ಕರೆ ಮಾಡಿ ನಿಮ್ಮ ಹೆಸರು ನೋಂದಣಿಯಾಗಿದೆಯೆ ಎಂದು ಪರಿಶೀಲಿಸಿ. ಈ ಯೋಜನೆಗೆ ಸಂಬಂಧಿಸಿದಂತೆ ಇದು ಅಧಿಕೃತ ವೆಬ್ ಸೈಟ್ ಹಾಗೂ ಸಹಾಯವಾಣಿಯಾಗಿದ್ದು, ಬೇರೆ ಯಾವುದೆ ವೆಬ್ ಸೈಟ್ ಹಾಗೂ ಸಹಾಯವಾಣಿಯನ್ನು ಬಳಸದಂತೆ ಸೂಚಿಸಲಾಗಿದೆ.

ವೆಬ್ ಸೈಟಿನಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ದಾಖಲಿಸಿದ್ರೆ, ಎಸ್ಎಂಎಸ್ ಬರಲಿದ್ದು, ಒಟಿಪಿ ದಾಖಲಿಸಿ ನಂತರ ನಿಮ್ಮ ಕೆ ವೈ ಸಿ ಪೂರ್ಣಗೊಳಿಸಬೇಕು. ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಸಹಾಯಕೇಂದ್ರಗಳನ್ನು ಕೂಡಾ ಸ್ಥಾಪಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+