ಹಿಮಾಚಲದ ಸಿಎಂ ರೇಸ್: ಪ್ರೇಮ್ ಕುಮಾರ್ ಈಗಲೂ ನೆಚ್ಚಿನ ಆಯ್ಕೆ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಶಿಮ್ಲಾ, ಡಿಸೆಂಬರ್ 21:ಹಿಮಾಚಲ ಪ್ರದೇಶಕ್ಕೆ ಹೊಸ ಸಿಎಂ ಆಯ್ಕೆಯಲ್ಲಿ ಬಿಜೆಪಿ ನಿರತವಾಗಿದೆ. ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪ್ರೇಮ್ ಕುಮಾರ್ ಧುಮಾಲ್ ಅವರು ಸೋಲು ಕಂಡಿದ್ದು, ಬಿಜೆಪಿಗೆ ಕೊಂಚ ಹಿನ್ನಡೆಯಾಗಿದೆ. ಹೀಗಾಗಿ, ಮುಖ್ಯಮಂತ್ರಿ ಆಯ್ಕೆ ಸ್ವಲ್ಪ ವಿಳಂಬವಾಗಿದೆ. ಈಗ ಲಭ್ಯವಿರುವ ಮಾಹಿತಿಯಂತೆ ಸಿಎಂ ಕುರ್ಚಿಗಾಗಿ ರೇಸಿನಿಂದ ಪ್ರೇಮ್ ಕುಮಾರ್ ಅವರು ಹಿಂದೆ ಸರಿದಿಲ್ಲ ಎಂದು ತಿಳಿದು ಬಂದಿದೆ.

ಹಿಮಾಚಲದ ಸಿಎಂ ಅಭ್ಯರ್ಥಿ ಪ್ರೇಮ್ ಸೋಲಲು ಏನು ಕಾರಣ?

ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಪ್ರೇಮ್ ಕುಮಾರ್ ಧುಮಾಲ್ ಅವರನ್ನು ಮತದಾನಕ್ಕೂ ಸ್ವಲ್ಪ ವಾರದ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿತ್ತು. ಧುಮಾಲ್‌ಗೂ ಮೊದಲು ಜೆಪಿ ನಡ್ಡಾ ಹೆಸರು ಸಿಎಂ ರೇಸ್‌ನಲ್ಲಿ ಕೇಳಿಬಂದಿತ್ತು. ಕೊನೆ ಕ್ಷಣದಲ್ಲಿ ಸಿಎಂ ಅಭ್ಯರ್ಥಿ ಘೋಷಣೆ ಮಾಡಲಾಯಿತು. ಸುಜಾನ್‌ಪುರ್ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ರಾಜೇಂದ್ರ ಸಿಂಗ್ ರಾಣಾ ಗೆಲುವು ಸಾಧಿಸಿದ್ದು ಈಗ ಇತಿಹಾಸ.

Next CM of Himachal Pradesh: Is Dhumal still in the race?

ಈಗ ಹೊಸ ಸಿಎಂ ಆಯ್ಕೆಯಲ್ಲಿ ತೊಡಗಿರುವ ಬಿಜೆಪಿಗೆ ಆಯ್ಕೆ ಕಗ್ಗಂಟಾಗಲು ಮುಖ್ಯ ಕಾರಣ ಪ್ರೇಮ್ ಕುಮಾರ್ ಅವರ ವಯಸ್ಸು. 73 ವರ್ಷ ವಯಸ್ಸಿನ ಪ್ರೇಮ್ ಕುಮಾರ್ ಅವರಿಗೆ ಸಿಎಂ ಕುರ್ಚಿ ಕೊಟ್ಟರೂ ಇನ್ನೆರಡು ವರ್ಷಗಳಿಗೆ ಕುರ್ಚಿಯನ್ನು ಹಿಂಪಡೆಯಬೇಕಾಗುತ್ತದೆ.

ಹಿಮಾಚಲದಲ್ಲಿ ಸೋತ ಕಾಂಗ್ರೆಸ್, ರಾಜೀನಾಮೆ ನೀಡಿದ ವೀರಭದ್ರ ಸಿಂಗ್

2019ರ ಚುನಾವಣೆ ದೃಷ್ಟಿಯಿಂದ ಎಲ್ಲಾ ರಾಜಕೀಯ ನಡೆ ಇಡುತ್ತಿರುವ ಅಮಿತ್ ಶಾ ಅವರು ಪ್ರೇಮ್ ಅವರನ್ನು ಮುಖ್ಯಮಂತ್ರಿಯಾಗಿ ತಾತ್ಕಾಲಿಕವಾಗಿ ನೇಮಿಸುವುದರ ಬಗ್ಗೆ ಅಷ್ಟು ಆಸಕ್ತಿ ವಹಿಸಿಲ್ಲ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ನರೇಂದ್ರ ತೋಮಾರ್ ಅವರು ಮುಂದಿನ ಮಂಗಳವಾರದ ವೇಳೆಗೆ ಹಿಮಾಚಲಕ್ಕೆ ಬರಲಿದ್ದು, ಸಿಎಂ ಆಯ್ಕೆಯ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸುವ ನಿರೀಕ್ಷೆಯಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: Next CM of Himachal Pradesh
English summary
As Himachal Pradesh awaits its next Chief Minister, sources say that Prem Kumar Dhumal who lost the election is still in the race. There is a catch-22 situation where the candidature of Dhumal is concerned as the BJP had won the polls under his leadership.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ