ಪತ್ನಿ ಮಿಷೆಲ್‌ರೊಂದಿಗೆ ಅಮೆರಿಕ ಅಧ್ಯಕ್ಷರ ಸರಸ ಸಲ್ಲಾಪ

Written By:
Subscribe to Oneindia Kannada

ನವದೆಹಲಿ, ಮೇ. 17: ನಲ್ಲನೆ ಸವಿಮಾತೊಂದಾ.. ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು...ಹಾ ಇದೇನು ಹಾಡು ಶುರುವಾಯಿತು ಅಂದುಕೊಂಡ್ರಾ, ಹಾಗೇನಿಲ್ಲ. ಅಮೇರಿಕದ ಅಧ್ಯಕ್ಷ ದಂಪತಿ ಒಟ್ಟಿಗೆ ಕಾಣಿಸಿಕೊಂಡಾಗ ಸಿಕ್ಕ ಫೋಟೋ ಈ ಹಾಡು ಹೇಳುತ್ತಿತ್ತು.

ದೇಶದಲ್ಲಿ ಬರಗಾಲ, ನೀರು ಉಳಿತಾಯದ ಜಾಗೃತಿ ಮೂಡಿಸಲು ಮುಂಬೈನಲ್ಲಿ ಮೆರವಣಿಗೆ ಹೊರಟ ಮಹಿಳೆಯರು, ನವದೆಹಲಿಯಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ...

ಮಾನ್ಸೂನ್ ಮಾರುತಗಳು ಅಪ್ಪಳಿಸುವ ಮುನ್ನವೇ ಎಚ್ಚೆತ್ತುಕೊಂಡ ಮುಂಬೈ ಆಡಳಿತ. ಕಡಲು ಕೊರೆತ ತಡೆಯಲು ಮರಳು ಸಂಗ್ರಹಣೆಯಲ್ಲಿ ತೊಡಗಿರುವ ಕಾರ್ಮಿಕರು.

ಗಾಂಧಿನಗರದಿಂದ ಸುಮಾರು 330 ಕಿಲೋ ಮೀಟರ್ ದೂರದ ಜಾಮ್ ನಗರದ ಕೊಳಗೇರಿ ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಮಾಡುತ್ತಿದ್ದ ಬಿಜೆಪಿ ಸಂಸದೆ ಪೂನಮ್ ಬೆನ್ ಅವರು ಆಕಸ್ಮಿಕವಾಗಿ ಸುಮಾರು 10 ಅಡಿ ಆಳವಾದ ಒಳಚರಂಡಿಗೆ ಬಿದ್ದು ಗಾಯಗೊಂಡ ಘಟನಾವಳಿ ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ,...(ಪಿಟಿಐ ಚಿತ್ರಗಳು)

ಮೋದಿ ಸಭೆ

ಮೋದಿ ಸಭೆ

ಬರ ಪರಿಹಾರದ ಕುರಿತು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿದರು.

ಜೀವ ಜಲ

ಜೀವ ಜಲ

ದೇಶದಲ್ಲಿ ಬರಗಾಲ ತಾಂಡವವಾಡುತ್ತಿದೆ. ನೀರು ಉಳಿತಾಯದ ಜಾಗೃತಿ ಮೂಡಿಸಲು ಮುಂಬೈನಲ್ಲಿ ತಲೆ ಮೇಲೆ ಬಿಂದಿಗೆ ಹೊತ್ತು ಮೆರವಣಿಗೆ ಹೊರಟ ಮಹಿಳೆಯರು.

ಚಂದ್ರಬಾಬು ನಾಯ್ಡು ಅಹವಾಲು

ಚಂದ್ರಬಾಬು ನಾಯ್ಡು ಅಹವಾಲು

ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರಾಜ್ಯದಲ್ಲಿನ ಬರ ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದರು.

ಸೆಕೆ ತಾಳಲಾರೆ!

ಸೆಕೆ ತಾಳಲಾರೆ!

ಬಿಸಿ ವಾತಾವರಣಕ್ಕೆ ಬಳಲಿದ ಸಿಂಹಗಳು ಮಂಜುಗಡ್ಡೆಯ ತುಂಡನ್ನು ನೆಕ್ಕಿ ದಣಿವಾರಿಸಿಕೊಳ್ಳುತ್ತಿರುವ ದೃಶ್ಯ ಲಾಹೋರ್ ನದ್ದು.

 ಸೋನಂ ಕಪೂರ್ ಝಲಕ್

ಸೋನಂ ಕಪೂರ್ ಝಲಕ್

ಕ್ಯಾನಾಸ್ ನ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಭೇಟಿ ನೀಡಿದ್ದ ಬಾಲಿವುಡ್ ಬೆಡಗಿ ಸೋನಂ ಕಪೂರ್ ಕಾಣಿಸಿಕೊಂಡಿದ್ದು ಹೀಗೆ.

ಏನೆಂದು ಹೆಸರಿಡಲಿ!

ಏನೆಂದು ಹೆಸರಿಡಲಿ!

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಪತ್ನಿ ಮಿಷೆಲ್ ಒಬಾಮಾ ಜತೆಯಾಗಿ ಕಾಣಿಸಿಕೊಂಡ ಬಗೆ.

ಅಡಿಪಾಯ

ಅಡಿಪಾಯ

ಅಹಮದಾಬಾದ್ ನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ.

ಓಟ್ ಮಾಡಿದೆ

ಓಟ್ ಮಾಡಿದೆ

ತಮಿಳುನಾಡು ಚುನಾವಣೆಗೆ ಮತದಾನ ಮಾಡಿ ಹೊರಕ್ಕೆ ಬಂದ ನಟಿ ಸ್ನೇಹಾ ಮತ್ತು ಪತಿ ಪ್ರಸನ್ನ.

ಕುಸಿದು ಬಿದ್ದ ಸಂಸದೆ

ಕುಸಿದು ಬಿದ್ದ ಸಂಸದೆ

ಗುಜರಾತ್ ಗಾಂಧಿನಗರದಿಂದ ಸುಮಾರು 330 ಕಿಲೋ ಮೀಟರ್ ದೂರದ ಜಾಮ್ ನಗರದ ಕೊಳಗೇರಿ ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಮಾಡುತ್ತಿದ್ದ ಬಿಜೆಪಿ ಸಂಸದೆ ಪೂನಮ್ ಬೆನ್ ಅವರು ಆಕಸ್ಮಿಕವಾಗಿ ಸುಮಾರು 10 ಅಡಿ ಆಳವಾದ ಒಳಚರಂಡಿಗೆ ಬಿದ್ದು ಗಾಯಗೊಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
News In Pics: Prime Minister Narendra Modi in a high level meeting with Chief Minister of Chhattisgarh, Raman Singh on drought and water scarcity in New Delhi on Tuesday. People from the drought affected areas of Shahpu take part in a rally to spread awarenes to save water in Mumbai.
Please Wait while comments are loading...