ಉದ್ಯೋಗ, ಇಂಕ್ರಿಮೆಂಟ್: ನವ ವರುಷಕೆ ಹರುಷದ ಸುದ್ದಿ

ಅಂದರೆ ಕಂಪನಿಗಳು ಸುಮಾರು 8 ಲಕ್ಷ ನೌಕರರನ್ನು ಹೊಸದಾಗಿ ನೇಮಿಸಿಕೊಳ್ಳಲಿದೆ. ಹಾಗೆಯೇ ಈಗಾಗಲೇ ಪೇ ರೋಲ್ ನಲ್ಲಿರುವ ಹಾಲಿ ಉದ್ಯೋಗಿಗಳಿಗೆ ಶೇ. 20ರಷ್ಟು ಇಂಕ್ರಿಮೆಂಟು ಲಭಿಸಲಿದೆ. (ಒನ್ಇಂಡಿಯಾದಿಂದ ಉದ್ಯೋಗ ಹುಡುಕಾಟ ಸೇವೆ)
ನಾನಾ ಮಾನವ ಸಂಪನ್ಮೂಲ ಸಂಸ್ಥೆಗಳ ಅಂದಾಜುಗಳನ್ನು ಆಧರಿಸಿ ಹೇಳುವುದಾದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದೇಶೀಯ ಉದ್ಯೋಗ ಮಾರುಕಟ್ಟೆ ಹೆಚ್ಚು ಆಶಾದಾಯಕವಾಗಿದೆ. 2013ರಲ್ಲಿ ನೇಮಕಾತಿಗಳು ನಿಧಾನಗತಿಯಲ್ಲಿದ್ದವು. ಆಯಕಟ್ಟಿನ ಜಾಗಗಳಲ್ಲಿ ಮಾತ್ರವೇ ಸ್ಥಾನಗಳನ್ನು ತುಂಬಲಾಗಿತ್ತು.
ಆದರೆ 2014ರಲ್ಲಿ ಉದ್ಯೋಗಾರ್ಥಿಗಳಿಗೆ ಉತ್ತಮ ಅವಕಾಶಗಳಿವೆ. ಕಾರ್ಪೊರೇಟ್ ಕಂಪನಿಗಳು ಉದ್ಯಮ ವಿಸ್ತರಣೆಯಲ್ಲಿ ಹೆಚ್ಚು ಹೆಚ್ಚು ಬಂಡವಾಳ ಹೂಡಲಿವೆ. ಜಾಗತಿಕ ಮಟ್ಟದಲ್ಲಿಯೂ ಕಂಪನಿಗಳು ಅಭಿವರ್ಧಿಸುತ್ತಿವೆ ಎಂದು GlobalHunt ಮಾನವ ಸಂಸಪನ್ಮೂಲ ಸಂಸ್ಥೆಯ ಎಂಡಿ ಸುನಿಲ್ ಗೋಯೆಲ್ ತಿಳಿಸಿದ್ದಾರೆ.
ಔದ್ಯಮಿಕ ಅಂದಾಜುಗಳ ಪ್ರಕಾರ 2014ರಲ್ಲಿ 8.5 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಹೊಸ ಬ್ಯಾಂಕುಗಳ ಸ್ಥಾಪನೆಗೆ ಅನುಮತಿ ನೀಡಿರುವುದು ಈ ಉದ್ಯೋಗ ಮಾರುಕಟ್ಟೆಯನ್ನು ಬಲಪಡಿಸಿದೆ. ಇದರ ಜತೆಗೆ ಐಟಿ, ಆರೋಗ್ಯ ಸೇವೆ, ಕೃಷಿ ವಹಿವಾಟು, ಮೂಲಸೌಕರ್ಯ ಮತ್ತು ಶಿಕ್ಷಣ ಕ್ಷೇತ್ರಗಳೂ ಸಹ ಉತ್ತಮ ಕೊಡುಗೆ ನೀಡಲಿವೆ ಎನ್ನುತ್ತಾರೆ MyHiringClub.com ಮತ್ತು FlikJobs.com ಮುಖ್ಯಸ್ಥ ರಾಜೇಶ್ ಕುಮಾರ್.
ಇನ್ನು, ಸಂಬಳಗಳ ವಿಷಯಕ್ಕೆ ಬಂದರೆ ಬಹುತೇಕ ಕ್ಷೇತ್ರಗಳಲ್ಲಿ ಸರಾಸರಿ ಹೈಕ್ ಸಿಂಗಲ್ ಡಿಜಿಟ್ ನದ್ದಾಗಿರುತ್ತದೆ. ಆದರೆ ಉತ್ತಮ ಸಾಧಕರಿಗೆ ಶೇ . 15-20 ರಷ್ಟು ಸಂಬಳ ಹೆಚ್ಚಳಗಳನ್ನು ನಿರೀಕ್ಷಿಸಬಹುದಾಗಿದೆ.












Click it and Unblock the Notifications