Vandeh Bharat Express: ಐತಿಹಾಸಿಕ ಮಾರ್ಗದಲ್ಲಿ ವಿಶೇಷ ವಂದೇ ಭಾರತ್ ರೈಲು ಸಂಚಾರ: PM ಮೋದಿ ಚಾಲನೆ
Vandeh Bharat Express: ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಐಶಾರಾಮಿ ಮತ್ತು ಆರಾಮದಾಯಕ ಪ್ರಯಾಣದ ಅನುಭವ ನೀಡುವ ನಿಟ್ಟಿನಲ್ಲಿ ಪ್ರಮುಖ ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪರಿಚಯಿಸುತ್ತಿದೆ. ಇದೀಗ ಐತಿಹಾಸಿ ಮಾರ್ಗವೊಂದರಲ್ಲಿ ಯೋಜನೆ ಪೂರ್ಣಗೊಳಿಸಿ ಮೈಲಿಗಲ್ಲು ಸಾಧಿಸಿದೆ. ಅದೇ ಮಾರ್ಗದಲ್ಲಿ ಹೊಸ ವಿಶೇಷ ವಿನ್ಯಾಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲು ಸಜ್ಜಾಗಿದೆ.
ಈ ಹೊಸ ವಂದೇ ಭಾರತ್ ರೈಲಿನ ಚಾಲನೆಗೆ ಪ್ರಧಾನಿ ನರೇಂದ್ರ ಮೋದಿಯವರು ಇದೇ ಫೆಬ್ರವರಿ 17ರಂದು ಗ್ರೀನ್ ಸಿಗ್ನಲ್ ನೀಡಲಿದ್ದಾರೆ. ಅಂದು ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಮಾರ್ಗದಲ್ಲಿ ಪ್ರಪ್ರಥಮ ಬಾರಿಗೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (USBRL) ಯೋಜನೆಯ ಪೂರ್ಣಗೊಳಿಸಿ ಕೇಂದ್ರ ಸರ್ಕಾರ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಈ ಐತಿಹಾಸಿಕ ಮಾರ್ಗದಲ್ಲಿ ರೈಲು ಬಿಡುವುದರಿಂದ ಕಣಿವೆ ಪ್ರದೇಶ ಕಾಶ್ಮೀರಕ್ಕೆ ಹೊಸದೊಂದು ಐಶಾರಾಮಿ ರೈಲು ಸಿಕ್ಕಂತಾಗುತ್ತದೆ.
ಜಮ್ಮು ರೈಲ್ವೆ ವಿಭಾಗ ವ್ಯಾಪ್ತಿಯಲ್ಲಿ ಈ ರೈಲು ಓಡಾಡಲಿದೆ. ವಿಶೇಷವಾಗಿ ವಿನ್ಯಾಸಗೊಳಿಸಿದ ವಂದೇ ಭಾರತ್ ರೈಲು ಇದಾಗಿದೆ. ಅವಿರತ ಪ್ರಯತ್ನ, ಅಧಿಕಾರಿ ಸಿಬ್ಬಂದಿಗಳ ವರ್ಷಗಳ ಸಮರ್ಪಣೆ ಭಾವ, ಪ್ರತಿಭಾನ್ವಿತ ಇಂಜಿನಿಯರ್, ಕಾಶ್ಮೀರದ ರೈಲು ಸಂಪರ್ಕದ ಬಹುಕಾಲದ ಕನಸು ಅಂತಿಮವಾಗಿ ನನಸಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಭಾರತೀಯ ರೈಲ್ವೆ ಇಲಾಖೆಯು ಅನೇಕ ರೈಲ್ವೆ ಬ್ರಿಡ್ಜ್‌ಗಳನ್ನು ಯಶಸ್ವಿಯಾಗಿ ನಿರ್ಮಿಸಿ ರೈಲುಗಳನ್ನು ಪೂರ್ಣಗೊಳಿಸಿದೆ. ಅದೇ ರೀತಿ ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (USBRL) ಯೋಜನೆ ಭಾಗವಾಗಿ ಐತಿಹಾಸಿ ಸೇತುವೆಯ ನಿರ್ಮಾಣವು ಯಶಸ್ವಿಯಾಗಿದೆ. ಈಗಾಗಲೇ ಪ್ರಾಯೋಗಿಕ ರೈಲ್ವೆ ಸಂಚಾರ ನಡೆಸಲಾಗಿದ್ದು, ಇದೀಗ ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಪ್ರಯಾಣಿಕರನ್ನು ಹೊತ್ತು ಓಡಾಡಲಿದೆ.

ಹೊಸ ವಂದೇ ಭಾರತ್ ರೈಲಿನ ವಿಶೇಷತೆ, ವಿನ್ಯಾಸಗಳು, ಅಂಶಗಳು
ಫೆಬ್ರವರಿ 17ರಿಂದ ಕತ್ರಾ-ಶ್ರೀನಗರ ರೈಲು ಮಾರ್ಗದಲ್ಲಿ ಹೊಸ ವಂದೇ ಭಾರತ್ ರೈಲು ಸಂಚಾರ ಆರಂಭಿಸಲಿದೆ. ಈ ಜಮ್ಮು ಮತ್ತು ಕಾಶ್ಮೀರದ ಕಠಿಣ ಚಳಿಗಾಲದಲ್ಲೂ ಸುರಕ್ಷಿತವಾಗಿ ಸಂಚಾರ ಸೇವೆ ನೀಡುವಂತೆ ವಿಶೇಷ ವಿನ್ಯಾಸದಲ್ಲಿ ರೈಲು ತಯಾರಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿಕೊಂಡಿದೆ.
ಈ ರೈಲು ನೀರು ಮತ್ತು ಜೈವಿಕ-ಶೌಚಾಲಯ ಟ್ಯಾಂಕ್‌ಗಳು ಘನೀಕರಿಸುವುದನ್ನು ತಡೆಯುವ ತಾಪನ ವ್ಯವಸ್ಥೆ ಹೊಂದಿದೆ. ಅತ್ಯಾಧುನಿಕ ಹವಾಮಾನ-ನಿರೋಧಕ ತಂತ್ರಜ್ಞಾನವನ್ನು ಒಳಗೊಂಡಿದೆ. ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲೂ ಈ ರೈಲಿನಲ್ಲಿ ಆರಾಮದಾಯಕ ಪ್ರಯಾಣ ಮಾಡಬಹುದು. ಏರ್-ಬ್ರೇಕ್ ವ್ಯವಸ್ಥೆ ಹೊಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ರೈಲಿನ ಮುಂಭಾಗದ ಲುಕ್‌ಔಟ್ ಗ್ಲಾಸ್ ಸ್ವಯಂಚಾಲಿತ ಡಿಫ್ರಾಸ್ಟ್ ಮಾಡಲು ವಿಂಡ್‌ಶೀಲ್ಡ್‌ನಲ್ಲಿ ಎಂಬೆಡೆಡ್ ತಾಪನ ವ್ಯವಸ್ಥೆ ಹೊಂದಿದೆ. ಇದರಿಂದ ಚಳಿಗಾಲದಲ್ಲಿ ಸ್ಪಷ್ಟ ಗೋಚರತೆ ಸಿಗುತ್ತದೆ. ಸಂಪೂರ್ಣ ಹವಾನಿಯಂತ್ರಿತ ರೈಲ್ವೆ ಬೋಗಿಗಳ ಇದರಲ್ಲಿವೆ. ಸ್ವಯಂಚಾಲಿತ ಪ್ಲಗ್ ಬಾಗಿಲು, ಚಾರ್ಜಿಂಗ್ ಪೋರ್ಟ್, ಇನ್ನಿತರ ಮೂಲ ಸೌಲಭ್ಯಗಳನ್ನು ಒಳಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ
ಒಟ್ಟು 331 ಮೀಟರ್ ಎತ್ತರದ ಪೈಲಾನ್ ಹೊಂದಿರುವ ಅಂಜಿ ಖಾದ್ ಸೇತುವೆಗೆ ಎಂಜಿನಿಯರಿಂಗ್ ಕೊಡುಗೆ ಅಪಾರವಾಗಿದೆ. ಇದೇ ಅತೀ ಎತ್ತರದ ಉದ್ದದ ಸೇತುವೆ ಎನ್ನಲಾಗಿತ್ತು. ಅದನ್ನು ಮೀರಿಸುವಂತೆ ವಿಶ್ವದಲ್ಲೇ 359 ಮೀಟರ್ ಅತೀ ಎತ್ತರದ ಚೆನಾಬ್ ಸೇತುವೆ ನಿರ್ಮಿಸಲಾಗಿದೆ. ಈ ಹೆಗ್ಗಳಿಕೆ ಭಾರತೀಯ ರೈಲ್ವೆಯದ್ದಾಗಿದೆ. ಐಫೆಲ್ ಟವರ್ ಅನ್ನು ಮೀರಿಸುವಂತ ರೈಲ್ವೆ ಸೇತುವೆ ಇದಾಗಿದೆ. ಜಮ್ಮು ಮತ್ತು ಕಾಶ್ಮೀರ ಭಾಗದಲ್ಲಿ ನಿರ್ಮಿಸಿದ್ದು, ಇದು ಪ್ರಾದೇಶಿಕ ಸಾರಿಗೆ ಸಂಪಿರ್ಕ ಸುಧಾರಣೆಗೆ ಮಹತ್ವದ ಪಾತ್ರ ನಿರ್ವಹಿಸಿದೆ.












Click it and Unblock the Notifications