ಪ್ಲಾಸ್ಟಿಕ್ ಕಸದ ಸಮಸ್ಯೆಗೆ ಬ್ರೇಕ್: ಹಾಲಿನ ಕವರ್‌ಗೆ ಹೊಸ ಜೀವ ನೀಡಿದ ವಿಜ್ಞಾನಿಗಳು

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಮತ್ತು ಸರ್ಕ್ಯೂಲರ್‌ ಇಕಾನಮಿಗೆ ಮೈಲಿಗಲ್ಲಾಗುವ ದೊಡ್ಡ ಸಾಧನೆಯನ್ನು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಮಾಡಿದ್ದಾರೆ. ಪ್ರಯೋಜನಕ್ಕೆ ಬಾರದ ಹಾಲಿನ ಕವರ್‌ಗಳನ್ನು ಮತ್ತೆ ಮತ್ತೆ ಬಳಸಬಹುದಾದ ಹೈ ಪರ್ಫಾಮೆನ್ಸ್‌ ಎಂಜಿನಿಯರಿಂಗ್ ಪ್ಲಾಸ್ಟಿಕ್ ಆಗಿ ಪರಿವರ್ತಿಸುವ ಹೊಸತಂತ್ರಜ್ಞಾನವನ್ನು ಕಂಡು ಹಿಡಿದಿದ್ದಾರೆ. ಅಲ್ಲದೆ ಇದಕ್ಕೆ ಪೇಟೆಂಟ್ ಕೂಡಾ ಪಡೆದಿದ್ದಾರೆ.

ಪ್ಯಾಕೇಟ್‌ ಹಾಲನ್ನು ನಮ್ಮಲ್ಲಿ ಬಹುತೇಕ ಜನ ಬಳಸ್ತಾರೆ. ಹಾಲು ಬಳಸಿದ ನಂತರ ಅದರ ಖಾಲಿ ಕವರ್‌ ಕಸದ ಬುಟ್ಟಿ ಸೇರುತ್ತದೆ. ನಮ್ಮಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಹೆಚ್ಚಾಗುವುದರಲ್ಲಿ ಈ ಹಾಲಿನ ಕವರ್‌ನ ಪಾತ್ರವೂ ಇದೆ. ಇದೀಗ
IISc ವಿಜ್ಞಾನಿಗಳು ಕಂಡು ಹಿಡಿದಿರುವ ತಂತ್ರಜ್ಞಾನ ಹಾಲಿನ ಕವರ್‌ನಿಂದ ಉಂಟಾಗುವ ತ್ಯಾಜ್ಯದ ಸಮಸ್ಯೆಗೆ ಪರಿಹಾರವಾಗಲಿದೆ. ಚಿಂತನ್ ಎನ್ವಿರಾನ್ಮೆಂಟಲ್ ರಿಸರ್ಚ್ ಅಂಡ್ ಆಕ್ಷನ್ ಗ್ರೂಪ್‌ನ 2025 ರ ವರದಿಯ ಪ್ರಕಾರ, ನಮ್ಮ ದೇಶದಲ್ಲಿ ದಿನಾಲೂ ಅಂದಾಜು 100-120 ಮಿಲಿಯನ್ ಹಾಲಿನ ಕವರ್‌ಗಳನ್ನು ಎಸೆಯುತ್ತೇವೆ. ಒಂದು ವರ್ಷಕ್ಕೆ ಇದನ್ನು ಲೆಕ್ಕ ಹಾಕಿದರೆ 36.5-43.8 ಬಿಲಿಯನ್ ಕವರ್.‌

new technology to Convert Waste Milk bag into high performance engineering plastic

ಈ ಹಾಲಿನ ಕವರಗಳನ್ನು ಪ್ರಾಥಮಿಕವಾಗಿ ಪಾಲಿಥಿಲೀನ್‌ನಿಂದ ತಯಾರಿಸಲಾಗುತ್ತದೆ. ಇದು ಮರುಬಳಕೆ ಮಾಡಬಹುದಾದ ವಸ್ತು. ಆದರೆ ಸಂಗ್ರಹಣಾ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಇದು ಹೆಚ್ಚಾಗಿ ಮಣ್ಣಿನ ಒಳಗೆ, ಚರಂಡಿ ಮತ್ತು ಜಲಮೂಲಗಳಲ್ಲಿ ಸೇರಿಕೊಳ್ಳುತ್ತದೆ. ಸಾಂಪ್ರದಾಯಿಕ ಮರುಬಳಕೆಯು ಪ್ರತಿ ಸೈಕಲ್‌ ನಂತರ ಪ್ಲಾಸ್ಟಿಕ್ ತನ್ನ ಯಾಂತ್ರಿಕ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಇದನ್ನು ಮತ್ತೆ ತುಂಬಾ ಸಮಯದವರೆಗೆ ಬಳಸುವುದು ಸಾಧ್ಯವಾಗುವುದಿಲ್ಲ.

ಈ ಸವಾಲನ್ನು ನಿವಾರಿಸಲು, IISc ಸಂಶೋಧನಾ ತಂಡವು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಹಾಲಿನ ಕವರ್‌ಗಳ ಪಾಲಿಥಿಲೀನ್ ಅನ್ನು ಶಾಂಪೂ, ಅಡುಗೆ ಎಣ್ಣೆ ಬಾಟಲಿ ಮತ್ತು ಇತರ ಮನೆಯ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮರುಬಳಕೆಯ ಪಾಲಿಪ್ರೊಪಿಲೀನ್‌ ವಿಟ್ರಿಮರ್‌ನೊಂದಿಗೆ ಬೆರೆಸುವ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದೆ .

ಈ ಪ್ರಕ್ರಿಯೆಯ ಮೂಲಕ ಬೇರೆ ಬೇರೆ ಪ್ಲಾಸ್ಟಿಕ್‌ಗಳನ್ನು ಒಂದಕ್ಕೊಂದು ಜೋಡಿಸಲಾಗುತ್ತದೆ. ಇದು ಪ್ಲಾಸ್ಟಿಕ್‌ಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವ ಏಜೆಂಟ್ ಆಗಿಯೂ ಕೆಲಸ ಮಾಡುತ್ತದೆ. ಅಲ್ಲದೆ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ರೀತಿಯ ಪ್ಲಾಸ್ಟಿಕ್‌ ಅನ್ನು ಹೆಚ್ಚು ಬಾಳಿಕೆ ಬರುವ ಎಂಜಿನಿಯರಿಂಗ್ ದರ್ಜೆಯ ವಸ್ತುವಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ.

ಈ ಸಂಶೋಧನೆಯ ನೇತೃತ್ವವನ್ನು ಸೂರ್ಯಸಾರಥಿ ಬೋಸ್ ಮತ್ತು ಸಂಶೋಧಕರಾದ ಭಾಷ್ಕರ್ ಬೋಹ್ರಾ ಮತ್ತು ದೇಬಾಶ್ರಿತಾ ಕುಂದು ವಹಿಸಿದ್ದಾರೆ.

ಸಂಶೋಧನಾ ತಂಡದ ಪ್ರಕಾರ, ಅತ್ಯುತ್ತಮ ಪ್ಲಾಸ್ಟಿಕ್ ಮಿಶ್ರಣ:

೧.ಸಾಂಪ್ರದಾಯಿಕವಾಗಿ ಮರುಬಳಕೆ ಮಾಡಲಾದ ಪಾಲಿಥಿಲೀನ್‌ಗೆ ಹೋಲಿಸಿದರೆ ಇದರ Tensile Strength ಎರಡು ಪಟ್ಟಿನಷ್ಟಿರುತ್ತದೆ,

೨.ಸತತ ಮೂರು ಮರುಬಳಕೆ ಸೈಕಲ್‌ ನಂತರವೂ ಅದರ ಯಾಂತ್ರಿಕ ಗುಣಲಕ್ಷಣಗಳು ಹಾಗೆಯೇ ಉಳಿಯುವುದು.

೩. ಇದನ್ನು ಮತ್ತೆ ಮತ್ತೆ ಎಷ್ಟು ಸಾರಿ ಬಳಸಿದರೂ ಅದರ ಗುಣಮಟ್ಟದಲ್ಲಿ ಕಡಿಮೆಯಾಗುವುದಿಲ್ಲ.

೪. ಪುನರಾವರ್ತಿತ ಮರುಬಳಕೆಯ ಮೂಲಕ ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳುವ ಪ್ಲಾಸ್ಟಿಕ್ ವಸ್ತುಗಳನ್ನು ರಚಿಸುವಲ್ಲಿ ಈ ತಂತ್ರಜ್ಞಾನವು ಒಂದು ಪ್ರಮುಖ ಹೆಜ್ಜೆಯಾಗಿದೆ.

ಬಹು ಅಪ್ಲಿಕೇಶನ್‌ಗಳಿಗೆ ಸೂಕ್ತ :

ಈ ತಂತ್ರಜ್ಞಾನವು ಪ್ಲಾಸ್ಟಿಕ್‌ನ ಮೂಲ ಅಥವಾ ಬ್ರಾಂಡ್‌ಗೆ ಸೀಮಿತವಾಗಿಲ್ಲ. ಎಲ್ಲಾ ಬ್ರಾಂಡ್‌ನ ಹಾಲಿನ ಲಕೋಟೆಗಳನ್ನು ಒಂದೇ ಪ್ರಕ್ರಿಯೆಯನ್ನು ಬಳಸಿಕೊಂಡು ಮರುಬಳಕೆ ಮಾಡಬಹುದಾಗಿದೆ. ಮರುಬಳಕೆಯ ವಸ್ತುವನ್ನು 3D ಮುದ್ರಣ ಮಾಡಿ ವ್ಯಾಪಕ ಶ್ರೇಣಿಯ ಬಾಳಿಕೆ ಬರುವ ಉತ್ಪನ್ನಗಳಾಗಿ ತಯಾರಿಸಬಹುದು.
ಅವುಗಳೆಂದರೆ:

೧.ರಸ್ತೆ ವಿಭಾಜಕಗಳು
೨. ಬಸ್ ಶೆಲ್ಟರ್‌ಗಳು
೩. ಲಾಜಿಸ್ಟಿಕ್ಸ್ ಕಂಟೇನರ್‌ಗಳು
೪. ಕೆಲವು ಕಾಂಕ್ರೀಟ್ ಉತ್ಪನ್ನಗಳನ್ನು ಸಂಭಾವ್ಯವಾಗಿ ಬದಲಾಯಿಸಬಹುದಾದ ನಿರ್ಮಾಣ ಘಟಕಗಳು

ತ್ಯಾಜ್ಯ ವಿಂಗಡಣೆಯ ಮಹತ್ವ :

ವಿಜ್ಞಾನಿಗಳು ಈ ತಂತ್ರಜ್ಞಾನವನ್ನು ಕಂಡು ಹಿಡಿದಾಗಿದೆ. ಇನ್ನು ಪ್ಲಾಸ್ಟಿಕ್‌ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಅಂದುಕೊಂಡರೆ ಮೂರ್ಖತನ. ಇದರ ಸರಿಯಾದ ಪ್ರಯೋಜನ ಸಿಗಬೇಕಾದರೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಪರೇಟ್‌ ಆಗಿ ಇಡುವುದು ಬಹಳ ಮುಖ್ಯ. ಹಸಿ ಕಸ ಮತ್ತು ಜೈವಿಕ ವೈದ್ಯಕೀಯ ತ್ಯಾಜ್ಯದೊಂದಿಗೆ ಇದನ್ನು ಬೆರೆಸಬಾರದು ಎನ್ನುವುದನ್ನು ಸಂಶೋಧಕರು ಒತ್ತಿ ಹೇಳಿದ್ದಾರೆ. ಹಾಗಾಗಿ ಮನೆಯಲ್ಲಿಯೇ ಹಾಲಿನ ಕವರ್‌ಗಳನ್ನು ಬೇರೆಯೇ ಚೀಲದಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಿ.

ಭಾರತದಲ್ಲಿ ಪ್ರತಿವರ್ಷ ಶತಕೋಟಿ ಪ್ರಮಾಣದಲ್ಲಿ ಹಾಲಿನ ಚೀಲಗಳನ್ನು ಉತ್ಪಾದಿಸಲಾಗುತ್ತದೆ. ಪೇಟೆಂಟ್ ಪಡೆದ IISc ತಂತ್ರಜ್ಞಾನವು ಇದೀಗ ಈ ಸಮಸ್ಯೆಯನ್ನು ಕೈಗಾರಿಕಾ ಸಂಪನ್ಮೂಲವಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ಲಾಸ್ಟಿಕ್ ಮಾಲಿನ್ಯ ಮತ್ತು ವರ್ಜಿನ್ ಪಾಲಿಮರ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಲ್ಲಿ ಸಹಾಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+