ಸದ್ಯದಲ್ಲೇ 20ರೂಪಾಯಿಯ ಹೊಸ ನೋಟು, ಹಳೆ ನೋಟಿಗಿಲ್ಲ ತೊಂದರೆ
ನವದೆಹಲಿ, ಜುಲೈ 20: ಸದ್ಯದಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ 20 ರುಪಾಯಿ ಮುಖಬೆಲೆಯ ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ನೋಟುಗಳು ಹಾಲಿ ಚಾಲ್ತಿಯಲ್ಲಿರುವ ನೋಟಿನಂತೆಯೇ ಇರಲಿದೆ.
ಹೊಸ ನೋಟುಗಳ ಸಂಖ್ಯೆ ಆಂಗ್ಲ ಭಾಷೆಯ 'S' ಅಕ್ಷರದಿಂದ ಆರಂಭವಾಗಲಿದೆ. ಈ ನೋಟುಗಳು ಈಗಿನ ಗವರ್ನರ್ ಉರ್ಜಿತ್ ಪಟೇಲ್ ಸಹಿಯನ್ನೂ ಒಳಗೊಂಡಿರುತ್ತದೆ ಎಂದು ಆರ್.ಬಿ.ಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು ಹೊಸ ನೋಟಿನ ವಿನ್ಯಾಸಗಳು ಹಾಲಿ ಚಾಲ್ತಿಯಲ್ಲಿರುವ ನೋಟುಗಳಂತೆಯೇ ಇರಲಿದೆ ಎಂದು ಆರ್.ಬಿ.ಐ ಹೇಳಿದೆ. ಮತ್ತು ಎಲ್ಲಾ ಹಳೆಯ ನೋಟುಗಳು ಚಾಲ್ತಿಯಲ್ಲಿರುತ್ತವೆ. ಅದರಲ್ಲೇನೂ ವ್ಯತ್ಯಾಸವಿಲ್ಲ ಎಂದು ಆರ್.ಬಿ.ಐ ಸ್ಪಷ್ಟಪಡಿಸಿದೆ












Click it and Unblock the Notifications