New Highway Guidelines: ಹೊಸ 4, 6 ಲೈನ್‌ ಹೆದ್ದಾರಿಗಳಿಗೆ NHAI ಹೊರಡಿಸಿದ ಮಾರ್ಗಸೂಚಿಗಳಲ್ಲಿ ಏನೇನಿದೆ?

National Highway Guidelines: ದೇಶದಲ್ಲಿ ಎಕ್ಸ್‌ಪ್ರೆಸ್ ಕಾರಿಡಾರ್ ಹೊರತುಪಡಿಸಿ ಇನ್ನು ಮುಂದೆ ನಿರ್ಮಾಣವಾಗುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಿಗೆ (National Highway) ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ. ಹೈವೇ ಸುರಕ್ಷತೆ, ಯೋಜನೆಯಲ್ಲಿ ರಾಷ್ಟ್ರೀಯ ಮಾನದಂಡಗಳ ಅನುಸರಣೆ, ವೇಗ ನಿಯಂತ್ರಣ ಸೇರಿದಂತೆ ಮಹತ್ವದ ಉದ್ದೇಶದೊಂದಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಈ ಗೈಡ್‌ಲೈನ್ಸ್ ಹೊರಡಿಸಿದೆ. ಇದು ಕರ್ನಾಟಕದಲ್ಲಿ ಭವಿಷ್ಯದಲ್ಲಿ ಸ್ಥಾಪನೆಯಾಗಲಿರುವ ರಾಷ್ಟ್ರೀಯ 4 ಮತ್ತು 6 ಪಥದ ಹೆದ್ದಾರಿಗಳಿಗೆ ಅನ್ವಯಿಸುತ್ತದೆ.

ಕೇಂದ್ರ ಸರ್ಕಾರವು ದೇಶವ್ಯಾಪಿ ಸಾರಿಗೆ ವ್ಯವಸ್ಥೆ, ಪ್ರಯಾಣಕ್ಕೆ ವೇಗ ಮತ್ತು ಸುರಕ್ಷಿತ ರಸ್ತೆ ಕಾರಿಡಾರ್‌ಗಳ ದೊಡ್ಡ ಜಾಲ ನಿರ್ಮಿಸುತ್ತಿದೆ. ಈ ಯೋಜನೆಯಲ್ಲಿ ಕಾಲ ಕಾಲಕ್ಕೆ ಬದಲಾವರಣೆ ತರುತ್ತದೆ. ಆ ಪ್ರಯತ್ನದ ಭಾಗವಾಗಿ ಎಕ್ಸ್‌ಪ್ರೆಸ್‌ವೇಗಳನ್ನು ಬಿಟ್ಟು ಉಳಿದಂತೆ ಅಧಿಕ ವೇಗದ ಮತ್ತು ನಿಯಂತ್ರಿತ ಪ್ರವೇಶ ವ್ಯವಸ್ಥೆಯುಳ್ಳ (access-controlled) ರಾಷ್ಟ್ರೀಯ ಹೆದ್ದಾರಿಗಳ ಯೋಜನೆ ಮತ್ತು ವಿನ್ಯಾಸ ಏಕರೂಪಗೊಳಿಸಲು ಈ ಮಾರ್ಗಸೂಚಿಗಳು ಸಹಕಾರಿಯಾಗಲಿವೆ ಎಂದು ಪ್ರಾಧಿಕಾರ ತಿಳಿಸಿದೆ.

New Highway Guidelines

ಹೊಸದಾಗಿ ನಾಲ್ಕು ಮತ್ತು ಆರು ಪಥದ 'ಗ್ರೀನ್‌ಫೀಲ್ಡ್' ಹೆದ್ದಾರಿ ನಿರ್ಮಾಣಕ್ಕೂ ಮುನ್ನ ತಯಾರಿಸುವ ವಿವರವಾದ ಯೋಜನಾ ವರದಿಗಳ (DPR) ತಯಾರಿಕೆಯಲ್ಲಿ ಏಕರೂಪ ತರಲು ಹಾಗೂ ಅಸ್ತಿತ್ವದಲ್ಲಿರುವ ರಸ್ತೆಯ ವಿಸ್ತರಣೆ/ಸುಧಾರಣೆಗೂ ಪೂರಕವಾಗಿದೆ. ಯಾವೆಲ್ಲ ಹೆದ್ದಾರಿಗಳಲ್ಲಿ ಅತೀ ವೇಗದ ಚಾಲನೆ ಇದೆಯೋ ಅಲ್ಲಿ ಈ ಹೊಸ ನಿಯಮಗಳ ಜಾರಿಗೆ ತೀರ್ಮಾನಿಸಲಾಗಿದೆ. ಈ ಮಾರ್ಗಸೂಚಿಗಳಲ್ಲಿ ತಾಂತ್ರಿಕ ಮಾನದಂಡಗಳು ಪ್ರಮುಖವಾಗಿವೆ.

50,000 ಕಿ.ಮೀ ನಿಯಂತ್ರಿತ ಜಾಲ

ಕೇಂದ್ರ ಸರ್ಕಾರ ದೇಶದಲ್ಲಿ 'ವಿಕಸಿತ ಭಾರತ 2047'ರ ಯೋಜನೆ ಅಡಿಯಲ್ಲಿ 50,000 ಕಿಲೋ ಮಿಟರ್ ಉದ್ದದ ನಿಯಂತ್ರಿತ ಪ್ರವೇಶ ವ್ಯವಸ್ಥೆಯ ವೇಗದ ಕಾರಿಡಾರ್‌ಗಳನ್ನು ನಿರ್ಮಿಸುವ ಗುರಿ ಹಾಕಿಕೊಂಡಿದೆ. ಈ ಮೊದಲು ಇಂತಹ ಯೋಜನೆಗಳು ಜಾರಿಯಾಗುವಾಗ ಸ್ಥಳೀಯ ಮಾನದಂಡಗಳನ್ನು ಅಳವಡಿಕೊಳ್ಳಲಾಗುತ್ತಿತ್ತು. ಅಂತಾರಾಷ್ಟ್ರೀಯ ಹೆದ್ದಾರಿ ಮಾನದಂಡಗಳ ಅಳವಡಿಕೆ ಆಗದ್ದರಿಂದ ಉಂಟಾಗುತ್ತಿದ್ದ ಸಮಸ್ಯೆಗಳನ್ನು ಹೊಸ ನಿಯಮಗಳು ಪರಿಹರಿಸಲಿವೆ. ವಾಹನಗಳ ದಟ್ಟಣೆಗೆ ಅನುಗುಣವಾಗಿ ನಿರ್ಮಾಣವಾಗುವ ಹೆದ್ದಾರಿಗಳ ಸ್ವರೂಪವು ನಿರ್ಧಾರ ಮಾಡಲು ಇದ ಸಹಕಾರಿ ಎಂದು ಪ್ರಾಧಿಕಾರ ವಿಶ್ವಾಸ ವ್ಯಕ್ತಪಡಿಸಿದೆ.

ಹೇಗಿವೆ ಹೊಸ ಮಾರ್ಗಸೂಚಿಗಳು?

ಹೊಸ ಮಾರ್ಗಸೂಚಿಗಳ ಪ್ರಕಾರ, 15,000 ರಿಂದ 25,000 ವಾಹನಗಳ ಸಂಚರಿಸುವ ಹೈವೇಯಲ್ಲಿ 4 ಮತ್ತು 6 ಲೈನ್ ಬರುತ್ತವೆ. 70 ಮೀ ಅಗಲದಲ್ಲಿ ಹೈವೇಯಲ್ಲಿ 6 ಲೈನ್, ಅಂತೇಯೇ 25,000 ರಿಂದ 40,000 ವಾಹನಗಳ ದಟ್ಟಣೆಯ ಬೃಹತ್ ಕಾರಿಡಾರ್‌ಗಳಲ್ಲಿ 6 ಲೈನ್‌ಗಳು ಬರುತ್ತವೆ. ಇನ್ನೂ ಎಕ್ಸ್‌ಪ್ರೆಸ್‌ವೇಗಳು, ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಮತ್ತು ಹೆಚ್ಚಿನ ದಟ್ಟಣೆಯ ಪ್ರಮುಖ ರಸ್ತೆಗಳು ಸಂಧಿಸುವ ಪ್ರದೇಶದಲ್ಲಿ (ರಾಂಪ್‌) ಪ್ರವೇಶ-ನಿರ್ಗಮನ ಮಾರ್ಗ, ಇಂಟರ್‌ಚೇಂಜ್‌ ಗಳನ್ನು ನಿರ್ಮಿಸುವಂತೆ ನಿಯಮ ರೂಪಿಸಲಾಗಿದೆ. ಇದರಿಂದ ಸಂಚಾರ, ಹೆದ್ದಾರಿ ಮೂಲಸೌಕರ್ಯ ಮತ್ತಷ್ಟು ಸುಧಾರಣೆಯಾಗಲಿದೆ.

ಇನ್ನು ಹೆದ್ದಾರಿಗಳ ಸಮೀಪವೇನಾದರೂ ಏರ್ ಪೋರ್ಟ್ಸ್, ಕೈಗಾರಿಕೆ ಪ್ರದೇಶಗಳು, ಬಂದರುಗಳು, ಬಹು-ಮಾದರಿಯ ಲಾಜಿಸ್ಟಿಕ್ಸ್ ಪಾರ್ಕ್‌ಗಳು, ಪ್ರಸಿದ್ಧ ಪ್ರವಾಸಿ ಸ್ಥಳಗಳಿದ್ದಲ್ಲಿ, ಹೆದ್ದಾರಿಯಿಂದ ನೇರವಾಗಿ ಆಯಾ ಪ್ರಮುಖ ಸ್ಥಳಗಳವರೆಗೂ ಸಂಪರ್ಕ ಕಲ್ಪಿಸಬೇಕೆಂದು ಈ ಹೊಸ ಮಾರ್ಗಸೂಚಿಗಳು ತಿಳಿಸುತ್ತವೆ. ದೇಶದ ಯಾವುದೇ ಭಾಗದಲ್ಲಿ ಹೈವೇ ನಿರ್ಮಾಣವೇಳೆ ಈ ಎಲ್ಲ ನಿಯಮಗಳು (ಏಕರೂಪ) ಒಂದೇ ಆಗಿರುತ್ತವೆ.

ಸುರಕ್ಷತೆಗೆ ಹೆಚ್ಚಿನ ಆಧ್ಯತೆ

ಮಾತ್ರವಲ್ಲದೇ ವಾಹನ ಸವಾರರು/ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಅಧಿಕ ವೇಗದಲ್ಲಿ ಪ್ರಯಾಣಿಸಬಹುದಾದ ಹೆದ್ದಾರಿ ಕಾರಿಡಾರ್‌ಗಳಲ್ಲಿ ಪ್ರವೇಶ ಮತ್ತು ನಿರ್ಗಮನದ ಸ್ಥಳಗಳನ್ನು ಸರಳ ಮತ್ತು ಮತ್ತಷ್ಟು ಪರಿಣಾಮಕಾರಿಯಾಗಿ ಗುರುತಿಸುವ ವ್ಯವಸ್ಥೆ ತರಲಾಗುತ್ತದೆ. ಸವಾರರು ನಿಗರ್ಮನ, ಪ್ರವೇಶ ಸ್ಥಳಕ್ಕೂ ಮುನ್ನವೇ ಸೈನ್ ಬೋರ್ಡ್ (ಸೂಚನಾ ಫಲಕಗಳ) ಅಳವಡಿಕೆಯು ಈ ಹೊಸ ನಿಯಮಗಳಲ್ಲಿ ಸೇರಿದೆ. ಹೆದ್ದಾರಿ ವೇಳೆ ಜಾನುವಾರುಗಳ ಪ್ರವೇಶ, ಓಡಾಟದಿಂದ ಅಪಘಾತಗಳ ವರದಿ ಹಿನ್ನೆಲೆ ಹೈವೇ ಅಂಚಿನಲ್ಲಿ ಎತ್ತರದ ತಡೆಗೆ ನಿರ್ಮಾಣ ಮಾಡಲಾಗುತ್ತದೆ. ಒಟ್ಟಾರೆ ಹೇಳುವುದಾದರೆ ಭವಿಷ್ಯದ 4, 6 ಲೈನ್ ಹೈವೇಗಳಲ್ಲಿ ಏಕ ರೂಪ ವ್ಯವಸ್ಥೆ ಜಾರಿ ತರುವ ಮೂಲಕ ಮತ್ತಷ್ಟು ಸುರಕ್ಷಿತ ಹೆದ್ದಾರಿ ಮೂಲಸೌಕರ್ಯ ಜನರಿಗೆ ಧಕ್ಕುವಂತೆ ಮಾಡಲು ಕೇಂದ್ರ ಸರ್ಕಾರ ಪ್ಲ್ಯಾನ್ ಮಾಡಿಕೊಂಡಿದೆ. ಈ ಸಂಬಂಧ ಮಾರ್ಗಸೂಚಿಗಳನ್ನು ಹೊರಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+