Bengaluru-Tumakuru Metro: ಹೆದ್ದಾರಿ ಮೇಲೆ ಗ್ರೀನ್ ಮೆಟ್ರೋ ಲೈನ್, ಹೂಡಿಕೆ ಕಂಪನಿಗಳಿಗೆ ಹೈವೇ ಪಕ್ಕ ಜಾಗ!
ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ತುಮಕೂರುವರೆಗೆ ರಾಷ್ಟ್ರೀಯ ಹೆದ್ದಾರಿ-4 (NH 4) ಉದ್ದಕ್ಕೂ ನಮ್ಮ ಮೆಟ್ರೋ ಹಸಿರು ಮಾರ್ಗದ ಕಾರಿಡಾರ್ ನಿರ್ಮಿಸಲು ಪ್ಲ್ಯಾನ್ ಮಾಡಲಾಗಿದೆ. ಈ ಸಂಬಂಧ ಕೇಂದ್ರದ ಅನುಮತಿ ಅಗತ್ಯವಾಗಿದ್ದು, ರಾಜ್ಯ ಸರ್ಕಾರ ಯೋಜನೆ ಸಮಗ್ರ ವರದಿ (DPR) ಸಹಿತ ಕೇಂದ್ರಕ್ಕೆ ಅಧಿಕೃತ ಪತ್ರ ಬರೆದಿದ್ದೇವೆ. ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಡಿಪಿಆರ್ ಪ್ರಕಾರ, ಬೆಂಗಳೂರು-ತುಮಕೂರು ಮೆಟ್ರೋ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಮಧ್ಯ ಭಾಗದಲ್ಲಿ ಪಿಲ್ಲರ್ ನಿರ್ಮಿಸಿ ಅದರ ಮೇಲೆ ಮಾರ್ಗ ನಿರ್ಮಿಸಲಾಗುವುದು. ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಬೇಕಿದೆ. ಜೊತೆಗೆ ಈ ಯೋಜನೆಯನ್ನು ಕೇಂದ್ರದ ಅನುದಾನದ ಮೇಲೆ ಅವಲಂಬಿಸದೇ ಸಾರ್ವಜನಿಕ ಸಹಭಾಗಿತ್ವದ (ಪಿಪಿಪಿ) ಅಡಿಯಲ್ಲಿ ನಿರ್ಮಿಸುವುದಾಗಿ ಇತ್ತಿಚೆಗೆ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ತಿಳಿಸಿದ್ದರು.

ಹೂಡಿಕೆ ಕಂಪನಿಗಳಿಗೆ ವಾಣಿಜ್ಯ ಕೆಲಸಕ್ಕೆ ಭೂಮಿ!
ಮಾದಾವರದಿಂದ ತುಮಕೂರುವರೆಗಿನ 59 ಕಿಲೋ ಮೀಟರ್ ಉದ್ದದ ಮೆಟ್ರೋ ಯೋಜನೆ ಕನಸು ನನಸಾಗುವತ್ತ, ಯೋಜನೆಗೆ ವೇಗ ನೀಡುವತ್ತ ರಾಜ್ಯ ಸರ್ಕಾರ ಆದ್ಯತೆ ನೀಡುತ್ತಿದೆ. ಹೆದ್ದಾರಿ ಉದ್ದಕ್ಕೂ ಯೋಜನೆ ಅನುಷ್ಠಾನಗೊಳ್ಳಲಿದೆ. ಮೆಟ್ರೋ ವಿಸ್ತರಣೆಗೆ ಹೂಡಿಕೆ ಮಾಡುವ ಕಂಪನಿಗಳಿಗೆ ನಿಲ್ದಾಣದಲ್ಲಿ ಅಕ್ಕಪಕ್ಕ ಸ್ಥಳಾವಕಾಶ ನೀಡಲಾಗುವುದು. ಇನ್ನೂ ಖಾಸಗಿ ಕಂಪನಿಗಳಿಗೆ ಮೆಟ್ರೋ ನಿಲ್ದಾಣ ಮತ್ತು ಹೆದ್ದಾರಿ ಪಕ್ಕದಲ್ಲೇ ಭೂಮಿ ನೀಡುವ ಮೂಲಕ ವಾಣಿಜ್ಯ ಚಟುವಟಿಕೆಗಳು ಪ್ರಾರಂಭಿಸಲು ಸಹಕಾರ ನೀಡಲು ತೀರ್ಮಾನಿಸಲಾಗಿದೆ ಎಂದರು.
ಅನುಮೋದನೆ ಸಿಗುತ್ತಿದ್ದಂತೆ ಟೆಂಡರ್, ಕಾಮಗಾರಿ..
ಮೆಟ್ರೋ ಹೊಸ ಲೈನ್‌ಗಾಗಿ ಹೂಡಿಕೆ ಮಾಡುವವರು ದಾಬಾಸಪೇಟೆ, ನೆಲಮಂಗಲ, ತುಮಕೂರು ಬಳಿ ವಾಣಿಜ್ಯ ಚಟುವಟಿಕೆ ಆರಂಭಿಸಬಹುದು. ಹೂಡಕೆಗೆ ಸಂಬಂಧಿಸಿದಂತೆ ಖಾಸಗಿ ಕಂಪನಿಗಳು ಆಸಕ್ತಿ ವಹಿಸಿವೆ. ಆದರೆ ಹೆದ್ದಾರಿಯಲ್ಲಿ ನಿರ್ಮಿಸಲು ಮತ್ತು ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನಿಡುತ್ತಿದ್ದಂತೆ ಕಾಮಗಾರಿ ಅರಂಭಕ್ಕೆ ಟೆಂಡರ್ ಕರೆಯಲಾಗುವುದು.
ಟೆಂಡರ್ ಫೈನಲ್ ಆಗುತ್ತಿದ್ದಂತೆ ಬಹುನಿರೀಕ್ಷೆಯ ಬೆಂಗಳೂರು-ತುಮಕೂರು ಮೆಟ್ರೋ ಅಂತರ್ ನಗರ ವಿಸ್ತರಣೆ ಕಾಮಗಾರಿ ಶುರುವಾಗಲಿದೆ ಎಂದು ಡಾ.ಜಿ.ಪರಮೇಶ್ವರ್ ಅವರು ತಿಳಿಸಿದ್ದಾರೆ. ಈ ಮೆಟ್ರೋ ವಿಸ್ತರಣೆ ಯೋಜನೆಗೆ ಈ ಹಿಂದೆ ಕೆಲವು ನಾಯಕರು ಆಕ್ಷೇಪ ಸಹ ವ್ಯಕ್ತಪಡಿಸಿದ್ದಾರೆ. ಮೆಟ್ರೋ ಬದಲಾಗಿ ನಗರ ಕ್ಷಿಪ್ತ ರೈಲು ಸಾರಿಗೆ ವ್ಯವಸ್ಥೆ (RRTS) ಗೆ ಸರ್ಕಾರ ಆದ್ಯತೆ ನೀಡಬೇಕು ಎಂಬ ಆಗ್ರಹ ಜೋರಾಗಿತ್ತು. ಇದರ ಬೆನ್ನಲ್ಲೆ ಸರ್ಕಾರ ಡಿಪಿಆರ್ ನಲ್ಲಿದ್ದ ನಿಲ್ದಾಣಗಳ ಸಂಖ್ಯೆಯನ್ನು ಕಡಿಮೆ ಮಾಡಿತು.


Click it and Unblock the Notifications
