ನವದೆಹಲಿ: ಆತ್ಮಹತ್ಯೆಗೆ ಶರಣಾದ ಜೆಎನ್‌ಯು ವಿದ್ಯಾರ್ಥಿ

Subscribe to Oneindia Kannada

ನವದೆಹಲಿ, ಮಾರ್ಚ್. 10: ವಿವಾದ, ಗೊಂದಲಗಳ ಗೂಡಾಗಿರುವ ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸ್ಕಾಲರ್ ಶಿಪ್ ವಿದ್ಯಾರ್ಥಿಯೊಬ್ಬ ದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ದಕ್ಷಿಣ ದೆಹಲಿಯ ಬೇರ್ ಸರೈನ ಖಾಸಗಿ ಪೇಯಿಂಗ್ ಗೆಸ್ಟ್ ಗಾರ್ಡಿಯಾನ್ ಹಾಸ್ಟೆಲ್ ರೂಂ ನಂಬರ್ 602ರಲ್ಲಿ ತಂಗಿದ್ದ ಜೆಎನ್ ಯು ವಿದ್ಯಾರ್ಥಿ 28 ವರ್ಷದ ದುಶ್ಯಂತ್ ದಿಕ್ಷಿತ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.[ಕನ್ನಯ್ಯಾ ತಲೆಗೆ ಇನಾಮು ಘೋಷಿಸಿದ್ದವ ಪೊಲೀಸ್ ಅತಿಥಿ]

jnu

ಈತ ಉತ್ತರಪ್ರದೇಶದ ಬರೇಲಿ ಜಿಲ್ಲೆಯ ದಾನೆಟ ಗ್ರಾಮದವನಾಗಿದ್ದು, ಕೌಟುಂಬಿಕ ಸಮಸ್ಯೆ ಗೊಂದಲಕ್ಕೀಡಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆ.[ಕನ್ಹಯ್ಯನಿಗೆ ಸವಾಲೆಸೆದ 15 ವರ್ಷದ ಬಾಲಕಿ ಝಾನ್ವಿ]

ಬೆಳಗ್ಗೆ 9 ಗಂಟೆ ಸುಮಾರಿಗೆ ದುಶ್ಯಂತ್ ದೀಕ್ಷಿತ್ ಸ್ನೇಹಿತನೊಬ್ಬ ರೂಂ ಬಾಗಿಲು ಬಡಿದಿದ್ದಾನೆ. ಆದರೆ ಯಾವುದೇ ಪ್ರತಿಕ್ರಿಯೆ ಬರದಿದ್ದರಿಂದ ಕಿಟಕಿಯಿಂದ ಒಳಗೆ ನೋಡಿದಾಗ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ದುಶ್ಯಂತ. ಜೆಎನ್ ಯುದಲ್ಲಿ ಪಿಎಚ್ ಡಿ ಮಾಡುತ್ತಿದ್ದ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 26-year-old PhD scholar from JNU today allegedly committed suicide by hanging himself from a ceiling fan of his room at his rented accommodation in south Delhi's Ber Sarai area this morning. The deceased, Dushyant, a native of Bareily in UP, left a suicide note in which he mentioned about some personal problems, including family issues and his relationship with a woman, police said.
Please Wait while comments are loading...