Get Updates
Get notified of breaking news, exclusive insights, and must-see stories!

ಅಂತರ್ಜಾಲದಲ್ಲಿ ಡೇಟಿಂಗ್: ಅತ್ಯಾಚಾರದಲ್ಲಿ ಅಂತ್ಯ

New Delhi Gurgaon- Online dating results in rape woman lodges FIR
ನವದೆಹಲಿ, ಅ.3: ಮಾಹಿತಿ ತಂತ್ರಜ್ಞಾನದ ಕೊಡುಗೆಯಾದ ಇಂಟರ್ನೆಟ್ ಡೇಟಿಂಗ್ ಗೆ ಮರುಳಾದ ಯುವ ಜೋಡಿ. ಅದು ಮದುವೆವರೆಗೂ ಮುಂದುವರಿದಿದೆ. ಆದರೆ ಸಾರ್ವಜನಿಕವಾಗಿ ಯುವಕ ಆ ಮದುವೆಯನ್ನು ಒಪ್ಪದ ಕಾರಣ ಸದರಿ ಯುವಕನಿಂದ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಬಾಧಿತ ಯುವತಿ ಅಲವತ್ತುಕೊಂಡಿದ್ದಾಳೆ.

ಗುರಗಾಂವ್ ನಲ್ಲಿ ಈ ಪ್ರಕರಣ ನಡೆದಿದೆ. 'ನಾವಿಬ್ಬರೂ online ಪ್ರೇಮದ ಬಲೆಗೆ ಸಿಕ್ಕಿಬಿದ್ದೆವು. ಯುವಕ ನನ್ನನ್ನು ಗುಪ್ತವಾಗಿ ಮದುವೆಯಾದ. ನಾನು ಗರ್ಭವತಿಯೂ ಆದೆ. ಆದರೆ ಯುವಕ ನಮ್ಮ ವಿವಾಹವನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುತ್ತಿಲ್ಲ' ಎಂದು ದೂರು ನೀಡಿರುವ ಯುವತಿ ತನ್ನ online ಗಂಡನ ಮೇಲೆ ಈಗ ಅತ್ಯಾಚಾರ ಆರೋಪ ಹೊರಿಸಿದ್ದಾಳೆ.

ಇಲ್ಲಿನ 'ಉದ್ಯೋಗ್ ವಿಹಾರ್' ನಲ್ಲಿರುವ ಕಂಪನಿಯಲ್ಲಿ ಉದ್ಯೋಗದಲ್ಲಿರುವ 25 ವರ್ಷದ ಯುವತಿ ಪಾಲಂ ವಿಹಾರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾಳೆ.

ತಾನು ಮೂರು ತಿಂಗಳ ಗರ್ಭಿಣಿಯಾಗಿದ್ದು, ಕರಣ್ ಶರ್ಮಾ ಎಂಬ ಯುವಕ ತಾನು ಇಂಜಿನಿಯರ್ ಆಗಿರುವುದಾಗಿ ವಿವಾಹ ಸಂಬಂಧಿ ವೆಬ್ ಸೈಟಿನಲ್ಲಿ ನೋಂದಾಯಿಸಿಕೊಂಡಿದ್ದ. ನಾನೂ ಅದೇ ಸೈಟ್ ಮೂಲಕ ಸೂಕ್ತ ವರನ ತಲಾಶೆಯಲ್ಲಿದ್ದೆ. ಮುಂದೆ ನಾನು, ಶರ್ಮ ಪರಿಚಯಸ್ಥರಾಗಿ ಒಂದಾದೆವು.

ಮುಂದೆ ಅದೊಂದು ದಿನ ನನ್ನನ್ನು ಶೀತಲ್ ಮಾತಾ ಮಂದಿರಕ್ಕೆ ಕರೆದುಕೊಂಡು ಹೋಗಿ, ಮದುವೆಯಾದ. ಅದಾದ ಬಹಿರಂಗವಾಗಿ ಹಿರಿಯ ಸಮ್ಮುಖದಲ್ಲಿ ಮದುವೆಯಾಗುವುದಾಗಿ ಹೇಳಿದ್ದ. ಆದರೆ ಅವನು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ನಾನು ಗರ್ಭಿಣಿಯಾಗಿದ್ದೇನೆ ಎಂದು ಹೇಳಿದಾಗ ನನ್ನಿಂದ ದೂರವಾಗಿದ್ದಾನೆ ಎಂದು ಬಾಧಿತ ಯುವತಿ ದೂರತು ನೀಡಿದ್ದಾಳೆ.

ದೂರಿನನ್ವಯ ಕರಣ್ ಶರ್ಮಾ ವಿರುದ್ಧ FIR ದಾಖಲಿಸಿದ್ದೇವೆ ಎಂದು ಪಾಲಂ ವಿಹಾರ್ ಪೊಲೀಸ್ ಠಾಣೆ SHO ನರೇಶ್ ಕುಮಾರ್ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+