Metro Station Collapse: ಕುಸಿದು ಬಿತ್ತು ಮೆಟ್ರೋ ನಿಲ್ದಾಣ ಕಟ್ಟಡದ ಭಾಗ, ವಿವರ
ನವದೆಹಲಿ, ಫೆಬ್ರವರಿ 08: ದೆಹಲಿಯ ಗೋಕುಲಪುರಿ ಮೆಟ್ರೋ ನಿಲ್ದಾಣದ ಒಂದು ಭಾಗವು ಕುಸಿದು ಬಿದ್ದ ಘಟನೆ ಗುರುವಾರ ಜರುಗಿದೆ. ಕಟ್ಟಡದ ಕೆಳಗೆ ಪಾರ್ಕಿಂಗ್ ಮಾಡಲಾಗಿದ್ದ ಕೆಲವು ಬೈಕ್‌ಗಳು ಅವಶೇಷಗಳಡಿ ಸಿಲುಕಿ ನುಜ್ಜುಗುಜ್ಜಾಗಿವೆ ಎಂದು ತಿಳಿದು ಬಂದಿದೆ.
ಘಟನೆ ನಡೆಯುತ್ತಿದ್ದಂತೆ ಇಂದು ಬೆಳಗ್ಗೆ 10 ಗಂಟೆ ಹೊತ್ತಿಗೆ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಸ್ಥಳೀಯರು ಕರೆ ಮಾಡಿ ಮಾಹಿತಿ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಸಿಬ್ಬಂದಿ ದೌಡಾಯಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಸ್ಥಳದಲ್ಲಿ ಏನಾಯಿತೆಂದು ಜನ ಜಮಾಯಿಸಿದ್ದು ಕಂಡ ಬಂತು.

ರಾಷ್ಟ್ರ ರಾಜಧಾನಿ ದೆಹಲಿ ಗೋಕುಲಪುರಿ ಮೆಟ್ರೋ ನಿಲ್ದಾಣವು ಗುಲಾಬಿ ಮಾರ್ಗವಾಗಿದೆ (ಪಿಂಕ್ ಲೈನ್). ಈ ಮಾರ್ಗವು ಮಜ್ಲಿಸ್ ಪಾರ್ಕ್‌ನಿಂದ ಶಿವ ವಿಹಾರ್‌ವರೆಗೆ ಇದ್ದು, ಇದರ ವ್ಯಾಪ್ತಿಯಲ್ಲಿ ಒಟ್ಟು 38 ನಿಲ್ದಾಣಗಳು ಬರುತ್ತವೆ. ಅದರ ವ್ಯಾಪ್ತಿಯಲ್ಲಿ ಒಂದು ನಿಲ್ದಾಣದ ಭಾಗವು ಕುಸಿದು ಬಿದ್ದಿದೆ. ಇದು ಸ್ಥಳೀಯರು ಹಾಗೂ ಪ್ರಯಾಣಿಕರಲ್ಲಿ ಆತಂಕ ಹುಟ್ಟಿದೆ. ಪ್ರಾಣ ಹಾನಿ ಆಗಿದೆಯೇ? ಎಂಬ ಬಗ್ಗೆ ಅಪ್ಡೇಟ್ ಮಾಹಿತಿ ಸಿಗಬೇಕಿದೆ.
ಈ ಮೆಟ್ರೋ ನಿಲ್ದಾಣದ ಮೇಲಿನ ಮಹಡಿ ತಡೆಗೋಡೆಯೊಂದು ಕುಸಿದು ಬಿದ್ದಿದೆ. ಈ ವೇಳೆ ವಾಹನಗಳಿಗೆ ತೊಂದರೆ ಆಗಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ವರದಿ ಆಗಿದೆ.












Click it and Unblock the Notifications