G20 Summit: 3 ದಿನ ದೆಹಲಿ ಮೆಟ್ರೋ ರೈಲು ಬೆಳಗ್ಗೆ 4 ಗಂಟೆಯಿಂದ ಸಂಚಾರ, DMRC
ಬೆಂಗಳೂರು, ಸೆಪ್ಟಂಬರ್ 06: ರಾಷ್ಟ್ರ ರಾಜಧಾನಿಯಲ್ಲಿ ಜಿ20 ಶೃಂಗಸಭೆ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಸಮ್ಮೆಳನ ದೃಷ್ಟಿಯಿಂದ ದೆಹಲಿ ಮೆಟ್ರೋ ಸೇವೆಗಳು ಸೆಪ್ಟೆಂಬರ್ 8, 9 ಮತ್ತು 10 ರಂದು ಮೂರು ದಿನ ಟರ್ಮಿನಲ್ ನಿಲ್ದಾಣಗಳಿಂದ ಎಲ್ಲ ಮಾರ್ಗಗಳಲ್ಲಿನ ನಿತ್ಯ ಬೆಳಗ್ಗೆ 4 ಗಂಟೆಯಿಂದಲೇ ಆರಂಭವಾಗಲಿದೆ.
ಇನ್ನೂ ಈ ಮೊದಲೇ ಮಾಹಿತಿ ನೀಡಿದಂತೆ ದೆಹಲಿಯಲ್ಲಿ ಕೆಲವು ಮೆಟ್ರೋ ನಿಲ್ದಾಣಗಳು ಜಿ20 ಶೃಂಗಸಭೆಯ ಭದ್ರತಾ ದೃಷ್ಟಿಯಿಂದ ಮೂರು ದಿನ ಮುಚ್ಚಲಾಗುವುದು. ಅಲ್ಲದೇ ಸುಪ್ರೀಂ ಕೋರ್ಟ್, ಪಟೇಲ್ ಚೌಕ್ ಮತ್ತು ಆರ್‌ಕೆ ಆಶ್ರಮ ಮಾರ್ಗದ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ಸೌಲಭ್ಯಗಳನ್ನು ಸೆಪ್ಟೆಂಬರ್ 8 ರಂದು ಬೆಳಗ್ಗೆ 4 ಗಂಟೆಯಿಂದ ಸೆಪ್ಟೆಂಬರ್ 11ರ ಮಧ್ಯಾಹ್ನವರೆಗೆ ಮುಚ್ಚಲಾಗುವುದು ಎಂದು ದೆಹಲಿ ಮೆಟ್ರೋ ರೈಲು ನಿಗಮ (DMRC)ದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೆಪ್ಟಂಬರ್ 9 ಮತ್ತು 10ರಂದು ಜಿ 20 ಶೃಂಗಸಭೆ ಆರಂಭವಾಗಲಿದೆ. ಅದಕ್ಕಾಗಿ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ ವ್ಯವಸ್ಥೆಗಳನ್ನು ನಿರ್ವಹಿಸಲಾಗುತ್ತಿದೆ. ಅದರ ಭಾಗವಾಗಿ ಇತರ ಸಹಾಯಕ ಏಜೆನ್ಸಿಗಳ ಜನರು ಮತ್ತು ಪೊಲೀಸ್ ಸಿಬ್ಬಂದಿ ಮತ್ತು ಸಿಬ್ಬಂದಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಮೆಟ್ರೋ ಸೇವೆಗಳನ್ನು ಬೆಳಗ್ಗೆ ಬೇಗ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ.
30ನಿಮಿಷಕ್ಕೊಮ್ಮೆ ರೈಲು ಓಡಾಟ
ಸಮ್ಮೇಳನ ಜೊತೆಗೆ ಎರಡು ದಿನ ಪ್ರಗತಿ ಮೈದಾನದಲ್ಲಿ ಹೊಸದಾಗಿ ನಿರ್ಮಿಸಲಾದ ಅಂತಾರಾಷ್ಟ್ರೀಯ ಸಮಾವೇಶ ಮತ್ತು ಪ್ರದರ್ಶನ ಕೇಂದ್ರ-ಭಾರತ್ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಚಾರ ಅನುಕೂಲಕ್ಕಾಗಿ ದೆಹಲಿ ಟರ್ಮಿನಲ್ ಮೆಟ್ರೋ ನಿಲ್ದಾಣಗಳಿಂದ ಮೂರು ದಿನಗಳ ಕಾಲ ಬೆಳಗ್ಗೆ 4 ರಿಂದ ಎಲ್ಲ ಲೈನ್‌ಗಳ ಮೆಟ್ರೋ ಸೇವೆಗಳು ಆರಂಭವಾಗಲಿವೆ. ರೈಲುಗಳು ಎಲ್ಲಾ ಮಾರ್ಗಗಳಲ್ಲಿ ಬೆಳಗ್ಗೆ 6 ಗಂಟೆವರೆಗೆ ಪ್ರತಿ 30 ನಿಮಿಷಗಳ ಅಂತರದೊಂದಿಗೆ ಓಡಾಡಲಿವೆ. ಬೆಳಗ್ಗೆ 6 ಗಂಟೆ ಬಳಿಕ ಎಲ್ಲ ಮಾರ್ಗಗಳ ರೈಲುಗಳು ದೈನಂದಿನ ವೇಳಾಪಟ್ಟಿಯಂತೆ ಸಂಚಾರ ನಡೆಸಲಿವೆ.












Click it and Unblock the Notifications