ನೋಟು ಅಮಾನ್ಯೀಕರಣ: ಆರ್‌ಬಿಐ ಸಭೆಯಲ್ಲಿ ಚರ್ಚೆ ಆಗಿರಲಿಲ್ಲ: RBI
ಬೆಂಗಳೂರು, ಜನವರಿ 03: ಕೇಂದ್ರ ಸರ್ಕಾರ ಆರು ವರ್ಷಗಳ ಹಿಂದೆ 2016ರಲ್ಲಿ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಸೋಮವಾರ 4:1 ಬಹುಮತದಿಂದ ಎತ್ತಿ ಹಿಡಿದಿದೆ. ಈ ನೋಟುಗಳ ಹಿಂಪಡೆಯುವಿಕೆ ಬಗ್ಗೆ ಆರ್‌ಬಿಐನ ಸಭೆಗಳಲ್ಲಿ ಚರ್ಚೆ ನಡೆದಿರಲಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರೀಯ ಮಂಡಳಿ ಸೋಮವಾರ ತಿಳಿಸಿದೆ.
ಕೇಂದ್ರ ಸರ್ಕಾರವು ಆರ್‌ಬಿಐ ಜೊತೆ ಆರು ತಿಂಗಳ ಕಾಲ ಸಮಾಲೋಚನೆ ನಡೆಸಿದೆ ಎಂದು ಹೇಳಲಾಗಿದೆ. ಆದರೆ ಆರ್‌ಬಿಐ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿಲ್ಲ. ಬಹುಶಃ ಆರ್‌ಬಿಐನ ಇಬ್ಬರಿಂದ ಮೂರು ಜನ ಅಧಿಕಾರಿಗಳಿಗೆ ಈ ವಿಚಾರ ಗೊತ್ತಿರಬಹುದೇ ಹೊರತಾಗಿ, ಚರ್ಚೆ ನಡೆದಿರಲಿಲ್ಲ. ಒಂದು ಗಂಟೆಗು ಮೊದಲು ನೀವು ಅಜೆಂಡಾದ ಬಗ್ಗೆಯೂ ತಿಳಿಸದೆ ಸಭೆ ಕರೆದಿರಬಹುದು, ಆದರೆ ಚರ್ಚೆ ಆಗಿರಲಿಲ್ಲ ಎಂದು ನೋಟು ಅಮಾನ್ಯೀಕರಣ ಬಗ್ಗೆ ಆರ್‌ಬಿಐ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
2016ರ ಮೇ ತಿಂಗಳಲ್ಲಿ ನೋಟು ಅಮಾನ್ಯೀಕರಣಕ್ಕೆ ಆರು ತಿಂಗಳ ಮೊದಲು ಆರ್‌ಬಿಐ ಮಂಡಳಿಯು 1,000 ರೂ. ನೋಟುಗಳ ಪ್ರಿಂಟಿಂಗ್ ಸ್ಥಗಿತಗೊಳಿಸಿತ್ತು. ಆದರೆ 2016 ರಲ್ಲಿ ಜುಲೈ ಮತ್ತು ಆಗಸ್ಟ್ ಮಂಡಳಿ ಸಭೆಗಳಲ್ಲಿ 500 ಮತ್ತು 1000 ನೋಟುಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆದಿಲ್ಲ. ಆರ್‌ಬಿಐ ಕೇಂದ್ರೀಯ ಮಂಡಳಿಯು ಮೇ 19, 2016 ರಂದು ರೂ.2000 ಮುಖಬೆಲೆ ನೋಟುಗಳನ್ನು ಪರಿಚಯಿಸುವ ಪ್ರಸ್ತಾವನೆಗೆ ಅನುಮೋದಿಸಲಾಗಿದೆ. ಆದರೆ ಮುಂದಿನ ನಿರ್ಧಾರಗಳ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಹೇಳಿತ್ತು. ಆಗ ರಘುರಾಮ್ ರಾಜನ್ ಅವರು ಆರ್‌ಬಿಐ ಗವರ್ನರ್ ಆಗಿದ್ದರು.

ಸಾಧಕ-ಬಾಧಕಗಳ ಚರ್ಚೆ ಬಗ್ಗೆ ಸ್ಪಷ್ಟತೆ ಇಲ್ಲ
ಆರ್‌ಬಿಐ ಕೇಂದ್ರೀಯ ಮಂಡಳಿಯು ಸರ್ಕಾರದಿಂದ 500, 1000 ರೂಪಾಯಿ ನೋಟುಗಳ ಅಮಾನ್ಯಗೊಳಿಸುವ ಯಾವುದೇ ಪ್ರಸ್ತಾವನೆಯನ್ನು ಸ್ವೀಕರಿಸಿರಲಿಲ್ಲ. ಬದಲಾಗಿ ಸೆಂಟ್ರಲ್ ಬೋರ್ಡ್ ಆಫ್ ಇಂಡಿಯಾ ರಿಸರ್ವ್ ಬ್ಯಾಂಕ್ ತನ್ನ ಸಭೆಯಲ್ಲಿ 2016ರಲ್ಲಿ 500 ಮತ್ತು 1000 ರೂಪಾಯಿ ನೋಟುಗಳ ಕಾನೂನುಬದ್ಧ ಟೆಂಡರ್ ಕ್ಯಾರೆಕ್ಟರ್ ಅನ್ನು ಹಿಂತೆಗೆದುಕೊಳ್ಳುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ ಆಬಿಐ ಮಂಡಳಿಯ ಸಭೆಯ ತೀರ್ಮಾನ ನಿರಾಕರಿಸಿತ್ತು ಎನ್ನಲಾಗಿದೆ.
ನೋಟು ಹಿಂಡೆಯುವುದರ ಸಾಧಕ- ಬಾಧಕಗಳು ಚರ್ಚಿಸಲಾಗಿದೆಯೇ ಎಂಬುದರ ಬಗ್ಗೆ ಸ್ಪಷ್ಟತೆ ದೊರೆತಿಲ್ಲ. ಈ ಕುರಿತು ಯೋಚಿಸಬೇಕಾದ ಸ್ವಾಯತ್ತ ಮತ್ತು ಪರಿಣಿತ ಸಂಸ್ಥೆ ಇರುವಾಗ ಅದರ ದೃಷ್ಟಿಕೋನಗಳಿಗೂ ಮೌಲ್ಯ ನೀಡಬೇಕಿದೆ.

ನೋಟು ಅಮಾನ್ಯೀಕರಣ ವಿಚಾರದಲ್ಲಿ ಆರ್‌ಬಿಐ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದ ಮಾತ್ರಕ್ಕೆ ಅದು ಸರ್ಕಾರವನ್ನು ಸಮಾಲೋಚಿಸಬಾರದು ಎಂದು ಅರ್ಥವಲ್ಲ. ಏಕೆಂದರೆ ಇಲ್ಲಿ ಆರ್‌ಬಿಐ ಸ್ವಾಯತ್ತತೆಗೆ ಸಂಬಂಧಿಸಿದ ಯಾವುದೇ ಮೂಲಭೂತ ಪ್ರಶ್ನೆಗಳು ಉದ್ಭವಿಸಲ್ಲ. ಸಾರ್ವಜನಿಕ ನೀತಿಯು ಯಾವಾಗಲೂ ವಿವಿಧ ಮಧ್ಯಸ್ಥಗಾರರೊಂದಿಗೆ ಚರ್ಚೆಯ ಮೂಲಕ ನಡೆಯುತ್ತದೆ, ಆದರಲ್ಲಿ ಸರ್ಕಾರವೂ ಸೇರಿದೆ. ಹೀಗೆಂದು ನೋಟು ಅಮಾನ್ಯೀಕರಣ ಪ್ರಕ್ರಿಯೆಯು ಆರ್‌ಬಿಐ ಸ್ವಾಯತ್ತತೆಗೆ ಧಕ್ಕೆ ತಂದಿದೆಯೇ ಎಂಬ ಪ್ರಶ್ನೆಗೆ ಆರ್‌ಬಿಐನ ಮಾಜಿ ಉಪ ಗವರ್ನರ್ ಆರ್ ಗಾಂಧಿ ಉತ್ತರಿಸಿದರು.












Click it and Unblock the Notifications