ತಂಬಾಕು ವಿರೋಧಿ ಎಚ್ಚರಿಕೆ ಜಾರಿಗೆ ತರಲು ಅಸಾಧ್ಯ ಎಂದ ನೆಟ್‌ಫ್ಲಿಕ್ಸ್, ಅಮೆಜಾನ್, ಡಿಸ್ನಿ!
ನವದೆಹಲಿ, ಜೂನ್. 11: ನೆಟ್‌ಫ್ಲಿಕ್ಸ್, ಅಮೆಜಾನ್ ಮತ್ತು ಡಿಸ್ನಿಯನ್ನು ಪ್ರತಿನಿಧಿಸುವ ಭಾರತೀಯ ಗುಂಪುಗಳು ದೇಶದಲ್ಲಿ ಹೊಸ ತಂಬಾಕು ಎಚ್ಚರಿಕೆ ನಿಯಮಗಳನ್ನು ಜಾರಿಗೆ ತರಲು ಅಸಾಧ್ಯ ಎಂದು ಹೇಳಿದೆ. ಜೊತೆಗೆ ಇದು ವಿಷಯ ರಚನೆಕಾರರ (content creators) ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ಸರ್ಕಾರಕ್ಕೆ ತಿಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಭಾರತದ ತಂಬಾಕು ವಿರೋಧಿ ಅಭಿಯಾನದ ಭಾಗವಾಗಿ, ಆರೋಗ್ಯ ಸಚಿವಾಲಯವು ಕಳೆದ ತಿಂಗಳು ಮೂರು ತಿಂಗಳೊಳಗೆ ಧೂಮಪಾನದ ದೃಶ್ಯಗಳಲ್ಲಿ ಸ್ಥಿರ ಆರೋಗ್ಯ ಎಚ್ಚರಿಕೆಗಳನ್ನು ಸೇರಿಸಲು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಆದೇಶಿಸಿದೆ. ಅಲ್ಲದೆ, ಭಾರತವು ಕಾರ್ಯಕ್ರಮದ ಪ್ರಾರಂಭದಲ್ಲಿ ಮತ್ತು ಮಧ್ಯದಲ್ಲಿ ಆಡಿಯೋ, ದೃಶ್ಯ ಸೇರಿದಂತೆ ಕನಿಷ್ಠ 50 ಸೆಕೆಂಡುಗಳ ತಂಬಾಕು ವಿರೋಧಿ ಎಚ್ಚರಿಕರಗಳನ್ನು ಹಾಕಬೇಕು ಎಂದು ತಿಳಿಸಿದೆ.

ಮೂರು ಕಂಪನಿಗಳು ಮತ್ತು ಭಾರತೀಯ ಬಿಲಿಯನೇರ್ ಮುಖೇಶ್ ಅಂಬಾನಿ ಅವರ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜಿಯೋ ಸಿನಿಮಾ (JioCinema) ಇತ್ತೀಚೆಗೆ ಖಾಸಗಿಯಾಗಿ ನಡೆದ ಚರ್ಚೆಯಲ್ಲಿ ಭಾಗವಹಿಸಿತ್ತು. ಈ ಬಗ್ಗೆ ಕಾನೂನು ಸವಾಲು ಸೇರಿದಂತೆ ಪುಶ್‌ಬ್ಯಾಕ್ ಆಯ್ಕೆಗಳನ್ನು ಪರಿಗಣಿಸಲು ಮತ್ತು ಲಕ್ಷಾಂತರ ಗಂಟೆಗಳ ಭಾರತೀಯ ಮತ್ತು ಹಾಲಿವುಡ್ ಕಂಟೆಂಟ್‌ಗಳ ಅಗತ್ಯವಿರುತ್ತದೆ ಎಂಬ ಬಗ್ಗೆಯೂ ಅಧಿಕಾರಿಗಳು ಚಿಂತಿಸಿದ್ದಾರೆ.
ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಹುಭಾಷಾ ವಿಷಯದ ಪ್ರಮಾಣವು ಬಹಳ ಹೆಚ್ಚಿದೆ. ವಿಷಯದಾದ್ಯಂತ ಅಂತಹ ಎಚ್ಚರಿಕೆಗಳನ್ನು ಸೇರಿಸಲು ಪ್ರಾಯೋಗಿಕ ಅಸಾಧ್ಯತೆ ಇದೆ ಎಂದು ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (IAMAI) ಪತ್ರದಲ್ಲಿ ಹೇಳಿದೆ. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಧೂಮಪಾನದ ಚಿತ್ರಣಗಳ ಬಗ್ಗೆ ವೀಕ್ಷಕರು ಅಸಡ್ಡೆ ಹೊಂದಿದ್ದಾರೆ ಎಂದು ಸಮೀಕ್ಷೆಯೊಂದು ತೋರಿಸಿದೆ ಎಂದಿರುವ IAMAI ಆರೋಗ್ಯ ಸಚಿವಾಲಯವನ್ನು ಈ ನಿಯಮಗಳನ್ನು ಮರುಪರಿಶೀಲಿಸುವಂತೆ ಕೇಳಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಹಾಲಿವುಡ್ ವಿಷಯವನ್ನು ಮೀರಿ, ಸ್ಟ್ರೀಮಿಂಗ್ ಕಂಪನಿಗಳಾದ Netflix, Amazon, Disney ಮತ್ತು JioCinema ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿವೆ. ಅಂತಹ ವೇದಿಕೆಗಳಲ್ಲಿ ಬಾಲಿವುಡ್ ನಟರು ನಟಿಸಿದ ಜನಪ್ರಿಯ ಹಿಂದಿ ಸಿನಿಮಾ, ಸೀರಿಸ್‌ಗಳಲ್ಲಿ ಅನೇಕ ಧೂಮಪಾನದ ದೃಶ್ಯಗಳನ್ನು ಹೊಂದಿದೆ. ತಂಬಾಕು ಪ್ರತಿ ವರ್ಷ 1.3 ಮಿಲಿಯನ್ ಜನರನ್ನು ಕೊಲ್ಲುವ ದೇಶದಲ್ಲಿ ಧೂಮಪಾನದ ಎಚ್ಚರಿಕೆಗಳನ್ನು ಹೇಳಬೇಕು ಎಂದು ಹಲವು ಸಾಮಾಜಿಕ ಕಾರ್ಯಕರ್ಯರು ಭಾರತದ ಹೊಸ ನಿಯಮಗಳನ್ನು ಸ್ವಾಗತಿಸಿದ್ದಾರೆ.

ಕಂಪನಿಗಳು ಕಂಟೆಂಟ್ ಡಿಸ್ಕ್ರಿಪ್ಟರ್‌ಗಳನ್ನು ನಂಬುತ್ತವೆ. ಕಂಟೆಂಟ್‌ಗಳ ಪ್ರಾರಂಭದಲ್ಲಿ ಅದರ ಶೀರ್ಷಿಕೆಯೊಂದಿಗೆ ವಿಡಿಯೋದಲ್ಲಿ "ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ" ಎಂಬ ಲೇಬಲ್ ಅನ್ನು ಹೊಂದಿರುವ ಎಚ್ಚರಿಕೆಯನ್ನು ತೋರಿಸುತ್ತದೆ.ಇದು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಐಎಎಂಎಐ ಹೇಳಿದೆ. ಭಾರತದ ಚಿತ್ರಮಂದಿರಗಳಲ್ಲಿ ಮತ್ತು ಟಿವಿಯಲ್ಲಿನ ಚಲನಚಿತ್ರಗಳಲ್ಲಿನ ಎಲ್ಲಾ ಧೂಮಪಾನ ಮತ್ತು ಮದ್ಯಪಾನದ ದೃಶ್ಯಗಳು, ಕಾನೂನಿನ ಅಡಿಯಲ್ಲಿ, ಆರೋಗ್ಯ ಎಚ್ಚರಿಕೆಗಳ ಅಗತ್ಯವಿರುತ್ತದೆ. ಆದರೆ ಆನ್‌ಲೈನ್ ಸ್ಟ್ರೀಮಿಂಗ್ ಕಂಪನಿಗಳಿಗೆ ಇದುವರೆಗೆ ಯಾವುದೇ ನಿಯಮಗಳಿಲ್ಲ.
2013 ರಲ್ಲಿ, ವುಡಿ ಅಲೆನ್ ಅವರು ತಮ್ಮ ಚಲನಚಿತ್ರವಾದ ಬ್ಲೂ ಜಾಸ್ಮಿನ್ ಅನ್ನು ಭಾರತದಲ್ಲಿ ಪ್ರದರ್ಶಿಸುವುದನ್ನು ನಿಲ್ಲಿಸಿದ್ದರು. ಇದಕ್ಕೆ ಕಾರಣ ಧೂಮಪಾನದ ದೃಶ್ಯಗಳಲ್ಲಿ ಕಡ್ಡಾಯವಾಗಿ ತಂಬಾಕು ವಿರೋಧಿ ಎಚ್ಚರಿಕೆಗಳನ್ನು ಸೇರಿಸಲಾಗುವುದು ಎಂದು ಹೇಳಲಾಗಿತ್ತು.












Click it and Unblock the Notifications