NEET PG 2026 ಪರೀಕ್ಷೆ ಯಶಸ್ವಿ: 2.65 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರು, ಜೈಪುರದಲ್ಲಿ ಸೆ.5ಕ್ಕೆ ಮರುಪರೀಕ್ಷೆ
ನವದೆಹಲಿ: ದೇಶಾದ್ಯಂತ ರಾಜ್ಯ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ NEET PG 2026 ಅತ್ಯಂತ ಭದ್ರತೆ ಮತ್ತು ನೈಜ ಸಮಯದ ಮೇಲ್ವಿಚಾರಣೆಯೊಂದಿಗೆ ದೇಶಾದ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. 339 ನಗರಗಳ 1,111 ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ 2.73 ಲಕ್ಷ ಅಭ್ಯರ್ಥಿಗಳು ನೋಂದಣಿಯಾಗಿದ್ದು, ಒಟ್ಟು 2.65 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು ಎಂದು ಕೇಂದ್ರ ಸಚಿವಾಲಯ ಭಾನುವಾರ ಮಾಹಿತಿ ನೀಡಿದೆ.
ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ (ಎನ್ ಬಿ ಇ ಎಂ ಎಸ್) ನೀಟ್ ಪರೀಕ್ಷೆ ನಡೆದಿದೆ. ಆದರೆ ಜೈಪುರದ ಎರಡು ಕೇಂದ್ರಗಳಲ್ಲಿ ತಾಂತ್ರಿಕ ಅಡಚಣೆಯಿಂದ ನೀಟ್ ಪಿಜಿ ಪರೀಕ್ಷೆಗೆ ತೊಂದರೆ ಉಂಟಾಯಿತು. ಹೀಗಾಗಿ 2,445 ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 5 ರಂದು ಮಂಡಳಿಯು ಮರುಪರೀಕ್ಷೆ ನಡೆಸಲು ತೀರ್ಮಾನಿಸಿದೆ.

ಭದ್ರತೆಯೊಂದಿಗೆ ಪರೀಕ್ಷೆ ಯಶಸ್ವಿ
ಈ ಬಾರಿ ವ್ಯಾಪಕ ಭದ್ರತೆಯೊಂದಿಗೆ ಪರೀಕ್ಷೆ ನಡೆಸಿದ್ದು ವಿಶೇಷವಾಗಿತ್ತು. ಪರೀಕ್ಷೆ ಮೇಲ್ವಿಚಾರಣೆ ಮಾಡಲು ಒಟ್ಟು 2,527 ಅಧ್ಯಾಪಕರನ್ನು ಸ್ವತಂತ್ರ ಮೌಲ್ಯಮಾಪಕರಾಗಿ ನೇಮಿಸಲಾಗಿತ್ತು. ಡೀನ್‌ಗಳು, ನಿರ್ದೇಶಕರು, ಮೆಡಿಕಲ್ ಸೂಪರಿಂಟೆಂಡೆಂಟ್ ಹಾಗೂ ಹಿರಿಯ ಪ್ರಾಧ್ಯಾಪಕರು ಸೇರಿದಂತೆ 700 ಕ್ಕೂ ಹೆಚ್ಚು ಹಿರಿಯ ಅಧ್ಯಾಪಕರನ್ನು ಫ್ಲೈಯಿಂಗ್ ಸ್ಕ್ವಾಡ್ ಸದಸ್ಯರಾಗಿದ್ದರು. ಮಂಡಳಿಯಿಂದ 16 ಪ್ರಾದೇಶಿಕ ಕಮಾಂಡ್ ಸೆಂಟರ್ ಸ್ಥಾಪಿಸಲಾಗಿತ್ತು. ನಿರಂತರವಾಗಿ ಅಧಿಕಾರಿಗಳು, ತಂಡದ ಸದಸ್ಯರು ಮೇಲ್ವಿಚಾರಣೆ ನಡೆಸುತ್ತಲೇ ಇದ್ದರು, ಯಾವೊಂದು ಲೋಪ ಆಗದಂತೆ ಎಚ್ಚರಿಕೆ ವಹಿಸಲಾಗಿತ್ತು.
ನಕಲಿ ಅಭ್ಯರ್ಥಿಗಳಿಗೆ ಕಡಿವಾಣ
ನಕಲಿ ಅಭ್ಯರ್ಥಿಗಳ ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ಆಧಾರ್ ಆಧಾರಿತ ದೃಢೀಕರಣ ನಡೆಸುವ ಮೂಲಕ ಪರೀಕ್ಷೆಯನ್ನು ಸುರಕ್ಷಿತ, ಶಿಸ್ತುಬದ್ಧವಾಗಿ ನಡೆಸಲಾಯಿತು. ರಾಜಸ್ಥಾನದ ಜೈಪುರದ ಸೀತಾಪುರದ ಐಒಎನ್ ಡಿಜಿಟಲ್ ವಲಯ ಐಡಿಝಡ್ ಕೇಂದ್ರಗಳಲ್ಲಿ (ಟಿಸಿ ಸಂಖ್ಯೆ 41682 ಮತ್ತು 41683) ಅನಿರೀಕ್ಷಿತ ತಾಂತ್ರಿಕ ಅಡಚಣೆ ಉಂಟಾಯಿತು.
ಇನ್ನೂ ಪರೀಕ್ಷಾ ಏಜೆನ್ಸಿಯಾದ ಟಿಸಿಎಸ್ ಲಿಮಿಟೆಡ್ ನ ಆಂತರಿಕ ವಿದ್ಯುತ್ ಸರಬರಾಜು ಸಮಸ್ಯೆಯಿಂದಾಗಿ ಅಲ್ಲಿನ 2,445 ಅಭ್ಯರ್ಥಿಗಳಿಗೆ ಪರೀಕ್ಷೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಮರುಪರೀಕ್ಷೆ ಸೆಪ್ಟೆಂಬರ್ 5 ರಂದು ಶನಿವಾರ ಮಧ್ಯಾಹ್ನ 3:00 ಗಂಟೆಗೆ ನಡೆಯಲಿದೆ. ಅಂದು ಸಹ ಸೂಕ್ತ ಭದ್ರತೆ ಒದಗಿಸಲಾಗುತ್ತದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಎನ್ ಬಿ ಇ ಎಂ ಎಸ್ ಅಭ್ಯರ್ಥಿಗಳ ಸಹಕಾರ, ತಾಳ್ಮೆ ಮತ್ತು ನಂಬಿಕೆಯನ್ನು ಶ್ಲಾಘಿಸಿದೆ. ನೀಟ್ ಪಿಜಿ-2026 ರ ನಿರ್ವಹಣೆಯೊಂದಿಗೆ ಸಂಬಂಧಿಸಿದ ಎಲ್ಲಾ ಸಿಬ್ಬಂದಿ ಮತ್ತು ಸಂಸ್ಥೆಗಳ ಸಮರ್ಪಿತ ಶ್ರಮಕ್ಕೆ ಅಭಿನಂದನೆ ತಿಳಿಸಲಾಗಿದೆ.


Click it and Unblock the Notifications
