ಬಿಹಾರ ಮತ್ತೊಂದು ಚುನಾವಣಾಪೂರ್ವ ಸಮೀಕ್ಷೆ: ಸಮಬಲದ ಹೋರಾಟ
ಪಾಟ್ನಾ, ನವದೆಹಲಿ ಸೆ 25: ಅಸೆಂಬ್ಲಿ ಚುನಾವಣೆಯ ಹೊಸ್ತಿಲಲ್ಲಿರುವ ಬಿಹಾರದಲ್ಲಿ ವಿವಿಧ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಪ್ರಕಟಿಸಿದೆ.
ಎಲ್ಲಾ ಕಡೆ ಇರುವಂತೆ ಟಿಕೆಟ್ ಹಂಚಿಕೆಯಲ್ಲಿನ ಗೊಂದಲ, ಭಿನ್ನಾಭಿಪ್ರಾಯ ಬಿಹಾರದ ಎರಡೂ ಮೈತ್ರಿಕೂಟಕ್ಕೆ ತಲೆನೋವಾಗಿ ಪರಿಣಮಿಸಿದೆ. (ಸಮೀಕ್ಷೆ: ನಿತೀಶ್ ಗೆ ಮುಖಭಂಗ)
ಬಿಹಾರದ ಚನ್ ಪಾಟಿಯಾ ಕ್ಷೇತ್ರದಿಂದ ಸ್ಪರ್ಧಿಸ ಬಯಸಿದ್ದ ಬಿಜೆಪಿ ಮುಖಂಡ ವಿಜಯ್ ನಾಥ್ ತ್ರಿಪಾಠಿಗೆ ಟಿಕೆಟ್ ನಿರಾಕರಿಸಿದ್ದರಿಂದ, ತ್ರಿಪಾಠಿ ಆಕ್ರೋಶಗೊಂಡು ಬಿಜೆಪಿ ಕಚೇರಿಗೆ ಕತ್ತೆಗಳನ್ನು ನುಗ್ಗಿಸಿದ ಘಟನೆ ವರದಿಯಾಗಿದೆ.

ಈ ನಡುವೆ ಟೈಮ್ಸ್ ನೌ ಮತ್ತು ಸಿವೋಟರ್ ಜಂಟಿಯಾಗಿ ನಡೆಸಿದ ಚುನಾವಣಾಪೂರ್ವ ಸಮೀಕ್ಷೆ ಹೊರಬಿದ್ದಿದ್ದು, ಇದರನ್ವಯ ಯಾವ ಮೈತ್ರಿಕೂಟಕ್ಕೂ ಸ್ಪಷ್ಟ ಬಹುಮತ ಸಿಗುವ ಸಾಧ್ಯತೆ ಇಲ್ಲ ಎಂದಿದೆ.
243 ಶಾಸಕರ ಬಿಹಾರ ಅಸೆಂಬ್ಲಿ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ 117, ನಿತೀಶ್ ನೇತೃತ್ವದ ಮಹಾಮೈತ್ರಿಕೂಟಕ್ಕೆ 112 ಮತ್ತು ಇತರರು 14 ಸ್ಥಾನ ಗೆಲ್ಲುವ ಸಾಧ್ಯತೆಯಿದೆ ಎಂದು ಸಮೀಕ್ಷೆಯಲ್ಲಿ ಪ್ರಕಟವಾಗಿದೆ.
ಮತಗಳಿಗೆ ಪ್ರಮಾಣದಲ್ಲೂ ಎರಡು ಮೈತ್ರಿಕೂಟದ ನಡುವೆ ಹೆಚ್ಚಿನ ಅಂತರವಿಲ್ಲ. ಎನ್ಡಿಎಗೆ ಶೇ. 43 ಮತ್ತು ಮಹಾಮೈತ್ರಿಕೂಟಕ್ಕೆ ಶೇ. 42 ಮತಲಭಿಸಲಿದೆ.
ಆದರೆ ಸೂಕ್ತ ಮುಖ್ಯಮಂತ್ರಿ ಯಾರು ಎನ್ನುವ ಸಮೀಕ್ಷೆಯಲ್ಲಿ ಮಾತ್ರ ನಿತೀಶ್ ಕುಮಾರ್ ಮಾತ್ರ ಬಹಳ ಮುಂದಿದ್ದಾರೆ. ಉತ್ತಮ ಸಿಎಂ ಯಾರು ಎನ್ನುವ ಪ್ರಶ್ನೆಗೆ ಶೇ. 47 ನಿತೀಶ್ ಮತ್ತು ಶೇ. 16ರಷ್ಟು ಮಂದಿ ಸುಶೀಲ್ ಕುಮಾರ್ ಮೋದಿ ಎಂದಿದ್ದಾರೆ.












Click it and Unblock the Notifications