ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಗಣತಿ ವೇಳೆ ಒಬಿಸಿ ಸಂಖ್ಯೆ ದಾಖಲಿಸಲು ಆಯೋಗ ಮನವಿ

|
Google Oneindia Kannada News

ನವದೆಹಲಿ, ಏಪ್ರಿಲ್ 2: ಜನಗಣತಿ 2021ರ ಭಾಗವಾಗಿ ದೇಶದಲ್ಲಿನ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಜನಸಂಖ್ಯೆಯ ದಾಖಲೆಗಳನ್ನು ಸಂಗ್ರಹಿಸುವಂತೆ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವು (ಎನ್‌ಸಿಬಿಸಿ) ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ಮನವಿ ಮಾಡಿದೆ.

ಎನ್‌ಸಿಬಿಸಿ ಕಾರ್ಯದರ್ಶಿ ಆನಂದ್ ಕುಮಾರ್ ಅವರು ಸಾಮಾಜಿಕ ನ್ಯಾಯ ಸಚಿವಾಲಯದ ಕಾರ್ಯದರ್ಶಿಗೆ ಗುರುವಾರ ಈ ಶಿಫಾರಸು ಸಲ್ಲಿಸಿದ್ದಾರೆ.

ದೇಶದಲ್ಲಿ ಮೊದಲ ಡಿಜಿಟಲ್ ಗಣತಿಗಾಗಿ 3,700 ಕೋಟಿ ರೂ. ಘೋಷಣೆದೇಶದಲ್ಲಿ ಮೊದಲ ಡಿಜಿಟಲ್ ಗಣತಿಗಾಗಿ 3,700 ಕೋಟಿ ರೂ. ಘೋಷಣೆ

ಜನಗಣತಿಯಲ್ಲಿ ಒಬಿಸಿ ಜನಸಂಖ್ಯೆಯ ಪ್ರತ್ಯೇಕ ಗಣತಿ ವಿವರಕ್ಕಾಗಿ ಮಲ್ಲೇಶ್ ಯಾದವ್ ಎಂಬುವವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವಾಗಲೇ ಈ ಮನವಿ ಮಾಡಲಾಗಿದೆ. ಈ ರಿಟ್ ಅರ್ಜಿಯನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಸಮರ್ಥಿಸಿಕೊಳ್ಳಲಿದೆ ಎಂಬ ಭರವಸೆ ಇರುವುದಾಗಿ ಪತ್ರದಲ್ಲಿ ತಿಳಿಸಲಾಗಿದೆ.

NCBC Urges Government To Collect Data On OBC Population During Census

ಇತ್ತೀಚೆಗಷ್ಟೇ ಎನ್‌ಸಿಬಿಸಿ ನಡೆಸಿದ್ದ ಪೂರ್ಣ ಪ್ರಮಾಣದ ಆಯೋಗ ಸಭೆಯಲ್ಲಿ ಚರ್ಚೆ ನಡೆಸಿ, ಅವಿರೋಧ ನಿರ್ಣಯ ತೆಗೆದುಕೊಳ್ಳಲಾಗಿದೆ. ಎನ್‌ಸಿಬಿಸಿಗೆ ನರೇಂದ್ರ ಮೋದಿ ಸರ್ಕಾರದ ಮೊದಲನೇ ಅವಧಿಯಲ್ಲಿ ಸಾಂವಿಧಾನಿಕ ಮಾನ್ಯತೆ ನೀಡಲಾಗಿತ್ತು.

ದೆಹಲಿ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಜಿ ರೋಹಿಣಿ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿತ್ತು. ಒಬಿಸಿಯಲ್ಲಿನ ದುರ್ಬಲ ವರ್ಗಗಳನ್ನು ಗುರುತಿಸಿ ಅವರಿಗೆ ಹೆಚ್ಚಿನ ಪ್ರಯೋಜನಗಳನ್ನು ನೀಡಲು ಉಪ ವಿಭಾಗಗಳನ್ನು ರಚಿಸುವ ಹೊಣೆ ನೀಡಲಾಗಿತ್ತು. ಆದರೆ ರೋಹಿಣಿ ಆಯೋಗ ಕೂಡ ಒಬಿಸಿ ಅಡಿಯಲ್ಲಿ ವರ್ಗೀಕರಿಸಲಾದ ವಿವಿಧ ಸಮುದಾಯಗಳ ಕುರಿತು ಸೂಕ್ತ ದತ್ತಾಂಶದ ಕೊರತೆ ಇರುವುದರಿಂದ ಇದು ಕಷ್ಟಕರವಾಗಿದೆ ಎಂದು ಹೇಳಿತ್ತು.

English summary
National Commission for Backward Classes (NCBC) urged the ministry of social justice and empowerment to collect data on the population of OBC's as part of Census.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X