ಕಿಸ್ ಆಫ್ ಲವ್ ಹಿಂದೆ ನಕ್ಸಲೀಯರು ಇದ್ದಾರಾ..?
ತಿರುವನಂತಪುರ, ಡಿ. 13: ವಿವಾದಿತ ಕಿಸ್ ಆಫ್ ಲವ್ ಪ್ರತಿಭಟನೆಯ ಹಿಂದೆ ನಕ್ಸಲರ ಕೈವಾಡ ಇದೆಯೇ? ಕೇರಳ ಪೊಲೀಸರು ಈ ಅನುಮಾನ ವ್ಯಕ್ತಪಡಿಸಿದ್ದಾರೆ.
ಕಿಸ್ ಆಫ್ ಲವ್ ಮತ್ತು ಕಿಸ್ ಇನ್ ದಿ ಸ್ಟ್ರೀಟ್ ಕಾರ್ಯಕ್ರಮಗಳಿಗೆ ಫೇಸ್ ಬುಕ್‌ನಲ್ಲಿ ಬೆಂಬಲ ನೀಡಿದವರಲ್ಲಿ ಹೆಚ್ಚಿನವರು ನಕ್ಸಲೀಯರ ಕುರಿತು ಅನುಕಂಪ ಹೊಂದಿರುವವರು. ಆದ್ದರಿಂದ ಪೊಲೀಸರು ಈ ನಿಟ್ಟಿನಲ್ಲಿಯೂ ತನಿಖೆ ಆರಂಭಿಸಿದ್ದಾರೆ. [ಕಿಸ್ ಆಫ್ ಲವ್ ವಿರುದ್ಧ ಒನಕೆ ಚಳವಳಿ]

ಕಲ್ಲಿಕೋಟೆ ಬಸ್ ನಿಲ್ದಾಣದಲ್ಲಿ ಕೆಲವು ದಿನಗಳ ಹಿಂದಷ್ಟೇ ನಡೆದ 'ಕಿಸ್ ಇನ್ ದ ಸ್ಟ್ರೀಟ್' ಆಯೋಜನೆಯು ಪಕ್ಕಾ ನಕ್ಸಲ್ ಮಾದರಿಯಲ್ಲಿತ್ತು. ಪ್ರತಿಭಟನಾಕಾರರು ಮೂರು ಗುಂಪುಗಳಾಗಿ ವಿಂಗಡಣೆಯಾಗಿದ್ದರು. ಫೇಸ್ ಬುಕ್‌ನಲ್ಲಿ ಮೊದಲೇ ಘೋಷಿಸಿದ್ದಂತೆ ಸರಿಯಾಗಿ ಮಧ್ಯಾಹ್ನ 3 ಗಂಟೆಗೆ ಬಸ್ ನಿಲ್ದಾಣ ತಲುಪಿದರು. [ಇದು ಕಿಸ್ ಇನ್ ದಿ ಸ್ಟ್ರೀಟ್]
ಅಲ್ಲಿಗೆ ಬಂದ ಪೊಲೀಸರು ಕಿಸ್ ಇನ್ ದಿ ಸ್ಟ್ರೀಟ್ ಕಾರ್ಯಕರ್ತರು ಹಾಗೂ ಹನುಮಾನ್ ಸೇನೆ ಸದಸ್ಯರನ್ನು ಬಂಧಿಸಿ ಒಯ್ದರು. ಆದರೆ, ಮತ್ತೆ ಅರ್ಧ ಗಂಟೆ ಬಿಟ್ಟು ಮತ್ತೊಂದು ಗುಂಪು ಬಂದು ಕಿಸ್ ಇನ್ ದಿ ಸ್ಟ್ರೀಟ್ ಆರಂಭಿಸಿತು. ಹೀಗೆ ಪೊಲೀಸರನ್ನು ದಾರಿತಪ್ಪಿಸಿ ಕೆಲಸ ಸಾಧಿಸುವುದು ಪಕ್ಕಾ ನಕ್ಸಲರ ತಂತ್ರ ಎಂದು ಪೊಲೀಸರು ತಿಳಿಸಿದ್ದಾರೆ. [ಕಿಸ್ ಬಗ್ಗೆ ಒಂದು ವ್ಯಾಖ್ಯಾನ]
ಪ್ರತಿಭಟನೆಯನ್ನು ರಣತಂತ್ರದ ಮಾದರಿಯಲ್ಲಿ ನಡೆಸಿರುವ ಕಾರಣ ಇದರ ಹಿಂದೆ ದೊಡ್ಡ ಜಾಲವೇ ಇರಬಹುದು ಎಂದೂ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications