Navratri celebration: ರಾಮ ಮಂದಿರ, ಪ್ರಧಾನಿ ಮೋದಿ ಬಿಂಬಿಸುವ 3 ಕೆಜಿ ಪೇಟ- ವೀಡಿಯೊ
ಭಾರತದ ಅತಿ ದೊಡ್ಡ ಹಬ್ಬಗಳಲ್ಲಿ ಒಂದಾದ ನವರಾತ್ರಿ ಸಮೀಪಿಸುತ್ತಿದ್ದಂತೆ, ವಿಶೇಷವಾಗಿ ದೇಶದ ಪಶ್ಚಿಮ ಭಾಗದಲ್ಲಿ ಜನರು ಅದ್ಧೂರಿಯಾಗಿ ಆಚರಣೆಗೆ ತಯಾರಿ ನಡೆಸಿದ್ದಾರೆ. ನವರಾತ್ರಿ ಸಂಘಟಕರು ತಮ್ಮ ನೃತ್ಯ ಕಾರ್ಯಕ್ರಮಗಳಿಗೆ ಅತ್ಯುತ್ತಮ ಮತ್ತು ವಿಶಿಷ್ಟವಾದ ಥೀಮ್ ನೀಡುವ ಸಲುವಾಗಿ ಕೆಲಸ ಪ್ರಾರಂಭಿಸಿದ್ದಾರೆ.
ಆ ನಿಟ್ಟಿನಲ್ಲಿ ಗುಜರಾತಿನ ಗಾಂಧಿನಗರದಲ್ಲಿ ವ್ಯಕ್ತಿಯೊಬ್ಬರು 'ರಾಮ ರಾಜ್ಯ', 'ರಾಮ ಮಂದಿರ', 'ಚಂದ್ರಯಾನ-3 ಯಶಸ್ಸು' ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರದರ್ಶಿಸುವ ವಿಶಿಷ್ಟ ಪೇಟವನ್ನು ತಯಾರಿಸಿದ್ದಾರೆ.
#WATCH | Gujarat: A turban of 3 kg, 'Ram Rajya', made on the theme of Ram temple, Chandrayaan-3 and PM Modi for the upcoming Navratri celebration, in Gandhinagar. (09.10) pic.twitter.com/Qqw6p469ny
— ANI (@ANI) October 9, 2023
ಈ 3 ಕೆಜಿಯ ಪೇಟವನ್ನು ಅಯೋಧ್ಯೆಯ ರಾಮ ಮಂದಿರದ ಆಕಾರದಿಂದ ಅಲಂಕರಿಸಲಾಗಿದೆ. 'ಫಿರ್ ಏಕ್ ಬಾರ್ ಮೋದಿ ಸರ್ಕಾರ್ (ಮತ್ತೊಮ್ಮೆ ಮೋದಿ ಸರ್ಕಾರ), ಎರಡು ನವಿಲು ಆಟಿಕೆಗಳು, ಚಂದ್ರಯಾನ-3 ಎಂಬ ಸಾಲಿನಿಂದ ಪಿಎಂ ಮೋದಿಯ ಸಣ್ಣ ವಿಗ್ರಹವನ್ನು ಅಲಂಕರಿಸಲಾಗಿದೆ. ಜೊತೆಗೆ ಈ ಪೇಟದಲ್ಲಿ ದಾಂಡಿಯಾ ವೇಷಭೂಷಣದಲ್ಲಿ ಪುರುಷ ಮತ್ತು ಮಹಿಳೆಯರ ಗೊಂಬೆಗಳಿವೆ.

ನವರಾತ್ರಿ ವಾರ್ಷಿಕವಾಗಿ ಆಚರಿಸುವ 10 ದಿನಗಳ ಹಿಂದೂ ಹಬ್ಬವಾಗಿದೆ. ಈ ವರ್ಷ ಅಕ್ಟೋಬರ್ 15 ರಿಂದ ಅಕ್ಟೋಬರ್ 24 ರವರೆಗೆ ನವರಾತ್ರಿಯನ್ನು ಆಚರಿಸಲಾಗುತ್ತದೆ. ಈ ಹತ್ತು ದಿನಗಳಲ್ಲಿ ದೇಶಾದ್ಯಂತ ಆಯೋಜಿಸಲಾಗುತ್ತಿರುವ ನವರಾತ್ರಿ ಕಾರ್ಯಕ್ರಮಗಳಲ್ಲಿ ಜನರು ದಾಂಡಿಯಾ ಮತ್ತು ಗರ್ಬಾ ನೃತ್ಯದಲ್ಲಿ ಭಾಗವಹಿಸುತ್ತಾರೆ. ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ದೆಹಲಿ-ಎನ್‌ಸಿಆರ್‌ನಲ್ಲಿ ಸಂಘಟಕರು ಹಬ್ಬವನ್ನು ಆಚರಿಸಲು ದೊಡ್ಡ ಕಾರ್ಯಕ್ರಮಗಳನ್ನು ನಡೆಸುತ್ತಾರೆ.












Click it and Unblock the Notifications