ಸ್ಮಾರ್ಟ್‌ಫೋನ್ ಅನ್ನೇ ತರಗತಿಯನ್ನಾಗಿಸಿದ ಶಿಕ್ಷಕ ಕೌಲೂರಿ ರಾಜೇಶ್‌ಗೆ 2026ರ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಗರಿ

ಇಂದು ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್‌ಫೋನ್ ಇದೆ. ಆದರೆ, ಇದೇ ಸ್ಮಾರ್ಟ್‌ಫೋನ್ ಒಂದು ಗ್ರಾಮೀಣ ಭಾಗದ ಮಗುವಿನ ಪಾಲಿನ ಶಾಲೆಯಾದರೆ ಹೇಗಿರುತ್ತದೆ? ಹೌದು, ತಂತ್ರಜ್ಞಾನದ ಬಳಕೆಯೆಂದರೆ ಅದು ಶಿಕ್ಷಕರನ್ನ ಬದಲಾಯಿಸುವುದಲ್ಲ, ಬದಲಾಗಿ ಶಿಕ್ಷಣವನ್ನ ಶಾಲೆಯ ನಾಲ್ಕು ಗೋಡೆಗಳಿಂದ ಆಚೆಗೂ ಕೊಂಡೊಯ್ಯುವುದು ಎಂದು ದೃಢವಾಗಿ ನಂಬಿರುವವರು ಶಿಕ್ಷಕ ಕೌಲೂರಿ ರಾಜೇಶ್.

ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ರಾಜೇಶ್ ಅವರ ನಿಸ್ವಾರ್ಥ ಸೇವೆಗೆ ಇದೀಗ ಮನ್ನಣೆ ದೊರೆತಿದ್ದು , ಇವರನ್ನು ಭಾರತ ಸರ್ಕಾರವು 2026ನೇ ಸಾಲಿನ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ' ನೀಡಿ ಗೌರವಿಸಿದೆ. ತಂತ್ರಜ್ಞಾನವನ್ನ ಬಳಸಿಕೊಂಡು ಇವರು ಶಿಕ್ಷಣ ಕ್ಷೇತ್ರದಲ್ಲಿ ಮಾಡುತ್ತಿರುವ ಕ್ರಾಂತಿ ನಿಜಕ್ಕೂ ಅದ್ಭುತವಾಗಿದೆ.

National Best Teacher Award 2026 Kouluri Rajesh Empowers Rural Education With AI App Hello Dhriti

ಎಐ ಆಧಾರಿತ ಹಲೋ ಧೃತಿ ಆ್ಯಪ್

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ದುಬಾರಿ ಟ್ಯೂಷನ್ ಅಥವಾ ಕೋಚಿಂಗ್ ತರಗತಿಗಳಿಗೆ ಹೋಗುವುದು ಕಷ್ಟ. ಹಾಗಾಗಿ ಇಂತಹ ಮಕ್ಕಳಿಗಾಗಿಯೇ ಕೌಲೂರಿ ರಾಜೇಶ್ ಅವರು ವಿಶೇಷವಾದ ಶೈಕ್ಷಣಿಕ ವೆಬ್‌ಸೈಟ್ ಒಂದನ್ನ ರೂಪಿಸಿದ್ದಾರೆ. ಇದರಲ್ಲಿ 80 ಪಾಠಗಳು, 50 ಮಾಹಿತಿಪೂರ್ಣ ವಿಡಿಯೋಗಳು ಹಾಗೂ 20 ಶೈಕ್ಷಣಿಕ ಗೇಮ್‌ಗಳನ್ನ ಅಳವಡಿಸಲಾಗಿದೆ.

ಇದರ ಜೊತೆಗೆ ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನ ಆಧಾರಿತ 'ಹಲೋ ಧೃತಿ' ಎಂಬ ವಿನೂತನ ಮೊಬೈಲ್ ಆ್ಯಪ್ ಕೂಡ ಅಭಿವೃದ್ಧಿಪಡಿಸಿದ್ದಾರೆ. ಈ ಆ್ಯಪ್ ಮೂಲಕ ಹಳ್ಳಿಯ ಮಕ್ಕಳು ತಮ್ಮದೇ ವೇಗದಲ್ಲಿ, ಅತ್ಯಂತ ಸರಳವಾಗಿ, ಯಾವುದೇ ಆರ್ಥಿಕ ಹೊರೆಯಿಲ್ಲದೆ ಗುಣಮಟ್ಟದ ಶಿಕ್ಷಣವನ್ನ ಪಡೆಯಲು ಸಾಧ್ಯವಾಗುತ್ತಿದೆ.

2,472 ಶಾಲೆಗಳ ಗ್ರಾಮೀಣ ವಿದ್ಯಾರ್ಥಿಗಳಿಗೆ ತಲುಪಿದ ಜ್ಞಾನದ ಬೆಳಕು

ರಾಜೇಶ್ ಅವರ ಈ ತಂತ್ರಜ್ಞಾನ ಆಧಾರಿತ ಶಿಕ್ಷಣ ವ್ಯವಸ್ಥೆ ಕೇವಲ ಒಂದು ಅಥವಾ ಎರಡು ಶಾಲೆಗಳಿಗೆ ಸೀಮಿತವಾಗಿಲ್ಲ. ಬದಲಾಗಿ, ಬರೋಬ್ಬರಿ 2,472 ಶಾಲೆಗಳ 15,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ವ್ಯವಸ್ಥೆ ತಲುಪಿದೆ. ಇವರ 'ಹಲೋ ಧೃತಿ' ಆ್ಯಪ್ ಮತ್ತು ವೆಬ್‌ಸೈಟ್ ಮೂಲಕ ಗ್ರಾಮೀಣ ವಿದ್ಯಾರ್ಥಿಗಳು ನಿರಂತರವಾಗಿ ಕಲಿಯುತ್ತಿದ್ದಾರೆ.

ಅಷ್ಟೇ ಅಲ್ಲದೆ, ಅವರು ರೂಪಿಸಿರುವ ಸಾಮರ್ಥ್ಯಾಧಾರಿತ ಮೌಲ್ಯಮಾಪನ (competency based assessments) ವ್ಯವಸ್ಥೆಯನ್ನ ಈಗಾಗಲೇ 22,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಳಸಿ ತಮ್ಮ ಕಲಿಕೆಯ ಮಟ್ಟವನ್ನ ಪರೀಕ್ಷಿಸಿಕೊಂಡು ಪ್ರಯೋಜನ ಪಡೆದುಕೊಂಡಿದ್ದಾರೆ. ಇದು ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ ಹೇಗೆ ಸಕಾರಾತ್ಮಕ ಬದಲಾವಣೆ ತರಬಲ್ಲದು ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.

ರಾಷ್ಟ್ರಪತಿಗಳಿಂದ 2026ರ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ

ಗ್ರಾಮೀಣ ಶಿಕ್ಷಣದಲ್ಲಿ ಕೌಲೂರಿ ರಾಜೇಶ್ ಅವರು ತಂದಿರುವ ಈ ಮಹತ್ತರ ಬದಲಾವಣೆಯನ್ನು ಹಾಗೂ ಅವರ ದೂರದೃಷ್ಟಿಯನ್ನು ಗುರುತಿಸಿರುವ ಕೇಂದ್ರ ಸರ್ಕಾರ, ಈ ಬಾರಿಯ ಶಿಕ್ಷಕರ ದಿನಾಚರಣೆಯಂದು ಅವರನ್ನು 'ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ 2026' ನೀಡಿ ಪುರಸ್ಕರಿಸಿದೆ. ದೇಶಾದ್ಯಂತ ಆಯ್ಕೆಯಾದ ಒಟ್ಟು 48 ಶ್ರೇಷ್ಠ ಶಿಕ್ಷಕರಲ್ಲಿ ರಾಜೇಶ್ ಕೂಡ ಒಬ್ಬರಾಗಿದ್ದು, ಭಾರತದ ರಾಷ್ಟ್ರಪತಿಗಳಿಂದ ಅವರು ಈ ಅತ್ಯುನ್ನತ ಗೌರವವನ್ನ ಸ್ವೀಕರಿಸಿದ್ದಾರೆ.

ಒಬ್ಬ ಶಿಕ್ಷಕ ನವೀನತೆಯತ್ತ ಮುಖಮಾಡಿದರೆ, ಆತ ಸಾವಿರಾರು ಮಕ್ಕಳ ಬದುಕನ್ನು ಬೆಳಗಬಲ್ಲದು ಎಂಬುದಕ್ಕೆ ಕೌಲೂರಿ ರಾಜೇಶ್ ಅವರ ಈ ಯಶೋಗಾಥೆಯೇ ಎಲ್ರಿಗೂ ಒಳ್ಳೆಯ ಉದಾಹರಣೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಗುಣಮಟ್ಟದ ಶಿಕ್ಷಣ ನೀಡುವ ಅವರ ಈ ಕಾರ್ಯ ಹೀಗೆಯೇ ಮುಂದುವರಿಯಲಿ, ಇನ್ನಷ್ಟು ಶಿಕ್ಷಕರಿಗೆ ಇದು ಪ್ರೇರಣೆಯಾಗಲಿ ಎಂಬುದು ನಮ್ಮೆಲ್ಲರ ಆಶಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+