ಭೂಮಿಯತ್ತ ಅಪ್ಪಳಿಸುತ್ತಿದೆ 1.5 ಟನ್ ತೂಕದ ನಾಸಾದ ಬೃಹತ್ ಟೆಲಿಸ್ಕೋಪ್: ಮುಂಬೈ, ಬೆಂಗಳೂರಿಗೂ ಕಾದಿದ್ಯಾ ಆಪತ್ತು?

ಬಾಹ್ಯಾಕಾಶದಲ್ಲಿ ಬರೋಬ್ಬರಿ 22 ವರ್ಷಗಳ ಕಾಲ ಅದ್ಭುತ ಸೇವೆ ಸಲ್ಲಿಸಿದ ನಾಸಾದ ಪ್ರಮುಖ ಉಪಗ್ರಹವೊಂದು ಇದೀಗ ತನ್ನ ಜೀವಿತಾವಧಿ ಮುಗಿಸಿ ಭೂಮಿಯತ್ತ ವಾಪಸ್ಸಾಗುತ್ತಿದೆ. ಕೇವಲ ಎರಡು ವರ್ಷಗಳ ಕಾರ್ಯಾಚರಣೆಗಾಗಿ ಉಡಾವಣೆಗೊಂಡಿದ್ದ ನಾಸಾದ ನೀಲ್ ಗೆಹ್ರೆಲ್ಸ್ ಸ್ವಿಫ್ಟ್ ಅಬ್ಸರ್ವೇಟರಿ (Neil Gehrels Swift Observatory) ಟೆಲಿಸ್ಕೋಪ್ ಇದೀಗ ಭೂಮಿಗೆ ಅಪ್ಪಳಿಸಲಿದೆ.

ಈ ಬೃಹತ್ ಟೆಲಿಸ್ಕೋಪ್‌ನ ಕೆಲವು ಅವಶೇಷಗಳು ಬೀಳಬಹುದಾದ ಸಂಭಾವ್ಯ ಪ್ರದೇಶಗಳ ಪಟ್ಟಿಯಲ್ಲಿ ಭಾರತದ ಮುಂಬೈ, ಹೈದರಾಬಾದ್ ಹಾಗೂ ಬೆಂಗಳೂರು ನಗರಗಳು ಸೇರಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

NASA Swift Telescope Falling To Earth Mumbai Bengaluru amp amp Hyderabad Are In Potential Debris Zone

ಭೂಮಿಗೆ ಬೀಳುತ್ತಿರುವ ನಾಸಾ ಸ್ವಿಫ್ಟ್ ಟೆಲಿಸ್ಕೋಪ್

ನವೆಂಬರ್ 20, 2004ರಂದು ಉಡಾವಣೆಯಾಗಿದ್ದ ಈ ಟೆಲಿಸ್ಕೋಪ್ ಸುಮಾರು 1.5 ಟನ್ ತೂಕವನ್ನ ಹೊಂದಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನೀಡಿರುವ ಮಾಹಿತಿಯ ಪ್ರಕಾರ, ನವೆಂಬರ್ 4ರಂದು ಭಾರತೀಯ ಕಾಲಮಾನ ಮಧ್ಯಾಹ್ನ 2ಗಂಟೆ ಸುಮಾರಿಗೆ ಇದು ಭೂಮಿಯ ವಾತಾವರಣವನ್ನ ಪ್ರವೇಶಿಸುವ ನಿರೀಕ್ಷೆಯಿದೆ. ಆದರೆ ಇದರ ಮರುಪ್ರವೇಶಕ್ಕೆ 11 ಗಂಟೆಗಳ ಕಾಲಾವಕಾಶ ಇದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಭೂಮಿಯ ವಾತಾವರಣವನ್ನ ಪ್ರವೇಶಿಸುತ್ತಿದ್ದಂತೆಯೇ ಘರ್ಷಣೆಯಿಂದಾಗಿ ಈ ಟೆಲಿಸ್ಕೋಪ್‌ನ ಬಹುಪಾಲು ಭಾಗ ಸುಟ್ಟು ಕರಕಲಾಗಲಿದೆ. ಆದರೆ, ಕೆಲವು ಸಣ್ಣಪುಟ್ಟ ಬಿಡಿಭಾಗಗಳು ಸುಟ್ಟುಹೋಗದೆ ಭೂಮಿಯನ್ನ ತಲುಪಬಹುದು.

ಸಂಭಾವ್ಯ ವಲಯದಲ್ಲಿ ಮುಂಬೈ, ಹೈದರಾಬಾದ್, ಬೆಂಗಳೂರು

ನಾಸಾ ಮಿಷನ್‌ನ ಮುಖ್ಯ ವಿಜ್ಞಾನಿ ಬ್ರಾಡ್ ಸೆಂಕೊ ಅವರ ಪ್ರಕಾರ, ಆಫ್ರಿಕಾ, ಆಸ್ಟ್ರೇಲಿಯಾ, ಆಗ್ನೇಯ ಏಷ್ಯಾ, ದಕ್ಷಿಣ ಅಮೆರಿಕ ಹಾಗೂ ಭಾರತದ ಕೆಲವು ಭಾಗಗಳು ಈ ಟೆಲಿಸ್ಕೋಪ್‌ನ ಮರುಪ್ರವೇಶದ ವಲಯದಲ್ಲಿವೆ. ಭೂಮಿಯ 20.6 ಡಿಗ್ರಿ ದಕ್ಷಿಣ ಅಕ್ಷಾಂಶ ಮತ್ತು 20.6 ಡಿಗ್ರಿ ಉತ್ತರ ಅಕ್ಷಾಂಶದ ನಡುವೆ ಇದು ಅಪ್ಪಳಿಸಲಿದೆ.

ಭಾರತದ ವಿಚಾರಕ್ಕೆ ಬಂದರೆ, ಪಶ್ಚಿಮ ಕರಾವಳಿಯ ದಮನ್‌ನಿಂದ ಪೂರ್ವ ಕರಾವಳಿಯ ಒಡಿಶಾದ ಕಟಕ್ ವರೆಗೆ ಎಳೆಯಬಹುದಾದ ಕಾಲ್ಪನಿಕ ರೇಖೆಯ ದಕ್ಷಿಣ ಭಾಗವು ಈ ವಲಯದಲ್ಲಿ ಬರುತ್ತದೆ. ಹೀಗಾಗಿ, ಮುಂಬೈ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈ ನಗರಗಳು ಈ ವ್ಯಾಪ್ತಿಯಲ್ಲಿ ಬರುತ್ತವೆ.

ದೆಹಲಿ, ಕೋಲ್ಕತ್ತಾ ಸೇರಿದಂತೆ ಉತ್ತರ ಭಾರತವು ಇದರಿಂದ ಹೊರಗಿದೆ. ಆದರೆ, ಈ ಅಕ್ಷಾಂಶ ವಲಯದಲ್ಲಿದ್ದ ಮಾತ್ರಕ್ಕೆ ಟೆಲಿಸ್ಕೋಪ್ ಅವಶೇಷಗಳು ನೇರವಾಗಿ ಈ ನಗರಗಳ ಮೇಲೆಯೇ ಬೀಳುತ್ತವೆ ಎಂದು ಭಯಪಡುವ ಅಗತ್ಯವಿಲ್ಲ.

ಬಾಹ್ಯಾಕಾಶ ಕಸ ಮತ್ತು ಇಸ್ರೋದ ನಿಗಾ

ಭೂಮಿಯತ್ತ ಧಾವಿಸುತ್ತಿರುವ ಇಂತಹ ಬಾಹ್ಯಾಕಾಶ ವಸ್ತುಗಳ ಮೇಲೆ ನಿಗಾ ಇಡಲು ಭಾರತವು ತನ್ನದೇ ಆದ ವ್ಯವಸ್ಥೆಯನ್ನ ಹೊಂದಿದೆ. ಶ್ರೀಹರಿಕೋಟಾದಲ್ಲಿರುವ ಇಸ್ರೋದ ಮಲ್ಟಿ-ಆಬ್ಜೆಕ್ಟ್ ಟ್ರ್ಯಾಕಿಂಗ್ ರಾಡಾರ್ ಇಂತಹ ಉಪಗ್ರಹಗಳು ಹಾಗೂ ಬಾಹ್ಯಾಕಾಶ ಕಸದ ಅಂತಿಮ ಚಲನವಲನಗಳನ್ನ ಟ್ರ್ಯಾಕ್ ಮಾಡುತ್ತದೆ. ಆದರೆ, ನಾಸಾದ ಈ ಟೆಲಿಸ್ಕೋಪ್ ಕುರಿತು ಇಸ್ರೋ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಡರ್ಹಾಮ್ ವಿಶ್ವವಿದ್ಯಾಲಯದ ಖಗೋಳ ಭೌತಶಾಸ್ತ್ರಜ್ಞ ಜೊನಾಥನ್ ಮೆಕ್‌ಡೊವೆಲ್ ಅವರ ಪ್ರಕಾರ, 1,500 ಕೆಜಿ ತೂಕದ ಈ ಉಪಗ್ರಹದಲ್ಲಿ ಕೇವಲ 100 ಕೆಜಿಯಷ್ಟು ಭಾಗ ಮಾತ್ರ ಭೂಮಿಗೆ ತಲುಪಬಹುದು. ಭೂಮಿಯ ಮೇಲ್ಮೈಯಲ್ಲಿ ಶೇಕಡಾ 70 ರಷ್ಟು ಭಾಗ ಸಮುದ್ರವಾಗಿರುವುದರಿಂದ, ಇದು ಸಾಗರದಲ್ಲೇ ಬೀಳುವ ಸಾಧ್ಯತೆ ಅತಿ ಹೆಚ್ಚು. ಹೀಗಾಗಿ ಇದರಿಂದ ಜನರಿಗೆ ಅಥವಾ ಆಸ್ತಿಪಾಸ್ತಿಗೆ ಹಾನಿಯಾಗುವ ಸಾಧ್ಯತೆ ತೀರಾ ವಿರಳ ಎನ್ನಲಾಗಿದೆ.

22 ವರ್ಷಗಳ ಐತಿಹಾಸಿಕ ಸಾಧನೆ

ಆರಂಭದಲ್ಲಿ 'ಸ್ವಿಫ್ಟ್ ಗಾಮ-ರೇ ಬರ್ಸ್ಟ್ ಎಕ್ಸ್‌ಪ್ಲೋರರ್' ಎಂದು ಕರೆಯಲ್ಪಡುತ್ತಿದ್ದ ಈ ಟೆಲಿಸ್ಕೋಪ್ ಅನ್ನಾ ಕೇವಲ ಎರಡು ವರ್ಷಗಳ ಅವಧಿಗೆ ಮಾತ್ರ ವಿನ್ಯಾಸಗೊಳಿಸಲಾಗಿತ್ತು. ಆದರೆ, ನಿರೀಕ್ಷೆಗೂ ಮೀರಿ ಬರೋಬ್ಬರಿ 22 ವರ್ಷಗಳ ಕಾಲ ಅದ್ಭುತವಾಗಿ ಕಾರ್ಯನಿರ್ವಹಿಸಿದೆ.

ತನ್ನ ಸುದೀರ್ಘ ಪಯಣದಲ್ಲಿ 2,000ಕ್ಕೂ ಹೆಚ್ಚು ಗಾಮ-ರೇ ಸ್ಫೋಟಗಳು ಮತ್ತು 1,400 ಸೂಪರ್‌ನೋವಾಗಳನ್ನ ವೀಕ್ಷಿಸಿ ಬಾಹ್ಯಾಕಾಶ ವಿಜ್ಞಾನಕ್ಕೆ ಅಪಾರ ಕೊಡುಗೆ ನೀಡಿದೆ. ಕುಸಿಯುತ್ತಿರುವ ಈ ಟೆಲಿಸ್ಕೋಪ್ ಅನ್ನು ಉಳಿಸಲು ನಾಸಾ ಮಾಡಿದ ಪ್ರಯತ್ನಗಳು ವಿಫಲವಾಗಿದ್ದು, ಇದೀಗ ಅದರ ಐತಿಹಾಸಿಕ ಪಯಣ ಅಂತ್ಯಗೊಳ್ಳುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+