ಕಿಡ್ನಿ ಸಮಸ್ಯೆಯಿಂದ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಆಸ್ಪತ್ರೆಗೆ ದಾಖಲು!
ಪ್ರಧಾನಿ ನರೇಂದ್ರ ಮೋದಿ ಅವರ ಕಿರಿಯ ಸಹೋದರ ಪ್ರಹ್ಲಾದ್ ಮೋದಿ ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೆನ್ನೈ ಫೆಬ್ರವರಿ 28: ಪ್ರಧಾನಿ ನರೇಂದ್ರ ಮೋದಿ ಅವರ ಕಿರಿಯ ಸಹೋದರ ಪ್ರಹ್ಲಾದ್ ಮೋದಿ ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಕಿಡ್ನಿ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ದಾಮೋದರದಾಸ್ ಮುಲ್‌ಚಂದ್ ಮೋದಿ ಮತ್ತು ಅವರ ಪತ್ನಿ ಹೀರಾಬೆನ್‌ಗೆ ಜನಿಸಿದ ಐದು ಮಕ್ಕಳಲ್ಲಿ ಪ್ರಹ್ಲಾದ್ ಮೋದಿ ನಾಲ್ಕನೆಯವರು. ಅವರು ಗುಜರಾತ್‌ನ ಅಹಮದಾಬಾದ್‌ನಲ್ಲಿ ಕಿರಾಣಿ ಅಂಗಡಿ ಮತ್ತು ಟೈರ್ ಶೋರೂಮ್ ಹೊಂದಿದ್ದಾರೆ.

ಕಳೆದ ವರ್ಷ ಡಿಸೆಂಬರ್ 27 ರಂದು ಕರ್ನಾಟಕದ ಮೈಸೂರು ಬಳಿ ಪ್ರಹ್ಲಾದ್ ಮೋದಿ ಅಪಘಾತಕ್ಕೀಡಾಗಿದ್ದರು. ಅವರು ಕುಟುಂಬ ಸಮೇತ ಬಂಡೀಪುರದಿಂದ ಮೈಸೂರಿಗೆ ತೆರಳುತ್ತಿದ್ದ ವೇಳೆ ಅವರ ಕಾರು ಅಪಘಾತಕ್ಕೀಡಾಗಿತ್ತು.

ಆಗಸ್ಟ್ 2, 2022 ರಂದು ಪ್ರಹ್ಲಾದ್ ಮೋದಿ ಅವರು ಅಖಿಲ ಭಾರತ ನ್ಯಾಯಬೆಲೆ ಅಂಗಡಿ ವಿತರಕರ ಒಕ್ಕೂಟದ (AIFPSDF) ಹಲವಾರು ಸದಸ್ಯರೊಂದಿಗೆ ಸಂಘಟನೆಯ ವಿವಿಧ ಬೇಡಿಕೆಗಳೊಂದಿಗೆ ನವದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸಿದರು.












Click it and Unblock the Notifications