ಮೋದಿಯ ಅರಸಿ ಬಂತು ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿ
Recommended Video
ನವದೆಹಲಿ, ಆಗಸ್ಟ್ 02: ಕೆಲವು ದಿನಗಳ ಹಿಂದೆಯಷ್ಟೆ ಸೌದಿಯ ಅತ್ಯುತ್ತಮ ನಾಗರೀಕ ಪ್ರಶಸ್ತಿಯನ್ನು ಪಡೆದುಕೊಂಡ ನರೇಂದ್ರ ಮೋದಿ ಅವರನ್ನು ಈಗ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿ ಹುಡುಕಿ ಬಂದಿದೆ.
ಬಿಲ್ ಗೇಟ್ಸ್ ಅವರ ಫೌಂಡೇಶನ್ ಈ ಬಾರಿ ನರೇಂದ್ರ ಮೋದಿ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಸ್ವಚ್ಛ ಭಾರತ ಅಭಿಯಾನಕ್ಕಾಗಿ ಮೋದಿ ಅವರಿಗೆ ಈ ಪ್ರಶಸ್ತಿ ದೊರೆಯಲಿದೆ.
ಬಿಲ್ ಆಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ಈ ಪ್ರಶಸ್ತಿಯನ್ನು ನೀಡುತ್ತಿದ್ದು, ಪ್ರಧಾನಿ ಕಾರ್ಯಾಲಯದ ಉನ್ನತ ಅಧಿಕಾರಿ ಜಿತೇಂದ್ರ ಸಿಂಗ್ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಮೋದಿ ಅವರು ಮುಂದಿನ ಬಾರಿ ಅಮೆರಿಕಕ್ಕೆ ಹೋದಾಗ ಬಿಲ್ ಆಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ ಪ್ರಶಸ್ತಿಯನ್ನು ಮೋದಿ ಅವರಿಗೆ ನೀಡಲಾಗುತ್ತದೆ.
ಮೋದಿ ಅವರು ಸ್ವಚ್ಛ ಭಾರತ ಅಭಿಯಾನವನ್ನು 2014 ರಲ್ಲಿ ಮಹಾತ್ಮಾ ಗಾಂಧಿ ಅವರ ಜಯಂತಿಯಂತೆ ಪ್ರಾರಂಭಿಸಿದ್ದರು. ದೇಶವನ್ನು ಸ್ವಚ್ಛವಾಗಿ ಮಾಡುವ ಅದ್ಭುತ ಕಲ್ಪನೆ ಇದರ ಹಿಂದೆ ಇತ್ತು.
ಕೆಲವು ದಿನಗಳ ಹಿಂದೆ ಅರಬ್ ದೇಶಗಳಿಗೆ ಭೇಟಿ ನೀಡಿದ್ದ ಮೋದಿ ಅವರನ್ನು ಯುಎಇಯು ಅರಬ್ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ, 'ಆರ್ಡರ್ ಆಫ್ ಜಯೇದ್' ಅನ್ನು ನೀಡಿ ಗೌರವಿಸಿತು.












Click it and Unblock the Notifications