ಸಮೀಕ್ಷೆ: ಪ್ರಧಾನಿ ಮೋದಿ ಜನಪ್ರಿಯತೆ ಭಾರೀ ಇಳಿಮುಖ

ಅಚ್ಚೇ ದಿನ್ ಆನೇವಾಲಾಹೇ ಎಂದು ಅಧಿಕಾರಕ್ಕೇರಿದ್ದ ಪ್ರಧಾನಿ ನರೇಂದ್ರ ಮೋದಿಯವರ ಒಂದು ವರ್ಷದ ಅವಧಿಯಲ್ಲಿನ ಆಡಳಿತ ಜನತೆಗೆ ತೃಪ್ತಿ ತಂದಿದೆಯೇ, ಮೋದಿ ಜನಪ್ರಿಯತೆ ಇಳಿಮುಖವಾಗುತ್ತಿದೆಯೇ? ಈ ಬಗ್ಗೆ ಸಿವೋಟರ್ - ಇಂಡಿಯಾ ಟಿವಿ ಜಂಟಿ ಸಮೀಕ್ಷೆ ನಡೆಸಿದೆ.

ಸೋಮವಾರ (ಮೇ 12) ಪ್ರಕಟವಾದ ಸಮೀಕ್ಷೆಯ ಪ್ರಕಾರ ಮೋದಿ ಜನಪ್ರಿಯತೆ ದಿನದಿಂದ ದಿನಕ್ಕೆ ಭಾರೀ ಇಳಿಮುಖವಾಗುತ್ತಿದೆ. ಪ್ರಮುಖವಾಗಿ ಭೂಸ್ವಾಧೀನ ಮಸೂದೆ NDA ಸರಕಾರಕ್ಕೆ ಮತ್ತು ವೈಯಕ್ತಿಕವಾಗಿ ಮೋದಿ ವರ್ಚಸ್ಸಿಗೂ ಕುಂದು ತರುತ್ತಿದೆ. (ಸನ್ಯಾಸಿಯಾಗ ಬೇಕಿದ್ದ ಮೋದಿಯನ್ನು ತಡೆದವರಾರು)

ಈ ಜಂಟಿ ಸರ್ವೇಯಲ್ಲಿ ಮೋದಿ ಸರಕಾರದ ಒಂದು ವರ್ಷದ ಆಡಳಿತ, ಸರಕಾರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಮಂತ್ರಿಗಳು ಮತ್ತು ವಿವಿಧ ವಿಷಯಗಳ ಮೇಲೆ ಜನಾಭಿಪ್ರಾಯ ಸಂಗ್ರಹಿಸಲಾಗಿದೆ.

ಸಮೀಕ್ಷೆಯಲ್ಲಿ ಶೇ. 78ರಷ್ಟು ಜನ ಭೂಸ್ವಾಧೀನ ಮಸೂದೆಯ ವಿರುದ್ದ ಕೈಯೆತ್ತಿದ್ದಾರೆ ಅಲ್ಲದೇ ಈ ಕೂಡಲೇ ಬಿಲ್ ಅನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದ್ದಾರೆ. ಮೋದಿ ಜನಪ್ರಿಯತೆ ಕುಗ್ಗಲು ಈ ಬಿಲ್ಲೇ ಕಾರಣ ಎನ್ನುವುದು ಹೆಚ್ಚಿನ ಜನರ ಅಭಿಪ್ರಾಯವಾಗಿದೆ.

ಮೋದಿ ಸರಕಾರದ ಒಂದು ವರ್ಷದ ಆಡಳಿತದ ಪರವಾಗಿ ಅತಿಹೆಚ್ಚು ಜನಾಭಿಪ್ರಾಯ ವ್ಯಕ್ತವಾಗಿದ್ದು ಪೂರ್ವ ಭಾರತದಲ್ಲಿ ಮತ್ತು ಸರಕಾರದ ಆಡಳಿತದ ವಿರುದ್ದ ಜನಾಭಿಪ್ರಾಯ ವ್ಯಕ್ತವಾಗಿದ್ದು ಉತ್ತರ ಭಾರತದಲ್ಲಿ ಹೆಚ್ಚು ಎನ್ನುವುದು ಸರ್ವೇಯಲ್ಲಿನ ಪ್ರಮುಖ ಅಂಶ.

ಸರ್ವೇ ಪ್ರಕಾರ ಮೋದಿ ಸರಕಾರದ ಉತ್ತಮ ಸಚಿವರಾರು? ಮುಂದೆ ಓದಿ...

ಮೋದಿ ಬಡವರ ವಿರೋಧಿ

ಮೋದಿ ಬಡವರ ವಿರೋಧಿ

ವಿವಾದೀತ ಭೂಸ್ವಾಧೀನ ಮಸೂದೆಯ ವಿರುದ್ದ ಜನಾಭಿಪ್ರಾಯ ವ್ಯಕ್ತವಾಗಿದ್ದು, ಮೋದಿ ಜನಪ್ರಿಯತೆ ಕುಗ್ಗಲು ಇದೇ ಪ್ರಮುಖ ಅಂಶ ಎಂದು ಶೇ. 63ರಷ್ಟು ಮಂದಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ, ಮೋದಿ ಬಡವರ ಮತ್ತು ರೈತರ ವಿರೋಧಿ ಎನ್ನುವ ಭಾವನೆ ಜನರಲ್ಲಿ ಮೂಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಮೋದಿ ಜನಪ್ರಿಯತೆ - ಶೇಕಡಾವಾರು

ಮೋದಿ ಜನಪ್ರಿಯತೆ - ಶೇಕಡಾವಾರು

ಮೋದಿ ಜನಪ್ರಿಯತೆ ಕುಗ್ಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತ ಪಡೆಸಿದ ಜನತೆಯ ಶೇಕಡಾವಾರು ಲೆಕ್ಕ ಇಂತಿದೆ:
ಉತ್ತರ ಭಾರತ : ಶೇ. 65
ಪೂರ್ವ ಭಾರತ: ಶೇ. 34
ದಕ್ಷಿಣ ಭಾರತ : ಶೇ. 38
ಪಶ್ಚಿಮ ಭಾರತ: ಶೇ. 52

ಒಟ್ಟಾರೆ ಮೋದಿ ಆಡಳಿತ ಹೇಗೆ?

ಒಟ್ಟಾರೆ ಮೋದಿ ಆಡಳಿತ ಹೇಗೆ?

ಶೇ.59ರಷ್ಟು ಜನ ಮೋದಿ ಆಡಳಿತ ಉತ್ತಮವಾಗಿದೆ ಎಂದಿದ್ದರೆ, ಶೇ.41ರಷ್ಟು ಮೋದಿ ಸರಕಾರದ್ದು ಕಳಪೆ ಆಡಳಿತ ಎಂದಿದ್ದಾರೆ. ಮೋದಿ ಸರಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಪ್ರಾಂತ್ಯಾವಾರು - ಬ್ರೇಕ್ ಅಪ್.
ಉತ್ತರ ಭಾರತ : ಶೇ. 44
ಪೂರ್ವ ಭಾರತ: ಶೇ. 82
ದಕ್ಷಿಣ ಭಾರತ : ಶೇ. 59
ಪಶ್ಚಿಮ ಭಾರತ: ಶೇ. 57

ಹಣದುಬ್ಬರ, ಭ್ರಷ್ಟಾಚಾರ ಮತ್ತು ಕಪ್ಪುಹಣ

ಹಣದುಬ್ಬರ, ಭ್ರಷ್ಟಾಚಾರ ಮತ್ತು ಕಪ್ಪುಹಣ

ಹಣದುಬ್ಬರ, ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿಚಾರದಲ್ಲಿ ಕೇಳಲಾದ ಪ್ರಶ್ನೆಗೆ ಶೇ.64ರಷ್ಟು ಜನ ಹಣದುಬ್ಬರ ನಿಯಂತ್ರಣಕ್ಕೆ ಬಂದಿಲ್ಲಾ ಎಂದರೆ, ಶೇ.51ರಷ್ಟು ಜನ ಕಳೆದ ಒಂದು ವರ್ಷದಲ್ಲಿ ಭ್ರಷ್ಟಾಚಾರ ಕಮ್ಮಿಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಶೇ.64ರಷ್ಟು ಜನ ಕಪ್ಪುಹಣ ವಾಪಸ್ ತರುವಲ್ಲಿ ಮೋದಿ ಸರಕಾರದ ಕ್ರಮವನ್ನು ಶ್ಲಾಘಿಸಿದ್ದಾರೆ.

ಮೋದಿ ಸರಕಾರದ ಒಳ್ಳೆ ಯೋಜನೆ ಯಾವುದು?

ಮೋದಿ ಸರಕಾರದ ಒಳ್ಳೆ ಯೋಜನೆ ಯಾವುದು?

ಸ್ವಚ್ಚ ಭಾರತ್ - ಶೇ. 46
ಜನ್ ಧನ್ ಯೋಜನೆ - ಶೇ. 19
ಮೇಕ್ ಇನ್ ಇಂಡಿಯಾ - ಶೇ. 18
ಸಂಸದರ ಆದರ್ಶ ಗ್ರಾಮ ಯೋಜನೆ - ಶೇ. 11

ಯಾರು ಉತ್ತಮ ಸಚಿವರು?

ಯಾರು ಉತ್ತಮ ಸಚಿವರು?

ವಿದೇಶಾಂಗ ವ್ಯವಹಾರಗಳ ಖಾತೆಯ ಸಚಿವೆ - ಸುಷ್ಮಾ ಸ್ವರಾಜ್ (ಶೇಕಡಾವಾರು : ಉತ್ತಮ 59, ಸಾಧಾರಣ 31, ಕಳಪೆ 13)
ಗೃಹ ಸಚಿವ ರಾಜನಾಥ್ ಸಿಂಗ್ - (ಶೇಕಡಾವಾರು : ಉತ್ತಮ 50, ಸಾಧಾರಣ 36, ಕಳಪೆ 14)
ವಿತ್ತ ಸಚಿವ ಅರುಣ್ ಜೆಟ್ಲೆ - (ಶೇಕಡಾವಾರು : ಉತ್ತಮ 49, ಸಾಧಾರಣ 28, ಕಳಪೆ 23)
ಮಾನವ ಸಂಪನ್ಮೂಲ ಖಾತೆಯ ಸಚಿವೆ ಸ್ಮೃತಿ ಇರಾನಿ - (ಶೇಕಡಾವಾರು : ಉತ್ತಮ 44, ಸಾಧಾರಣ 35, ಕಳಪೆ 21)
ಭೂಸಾರಿಗೆ ಸಚಿವ ನಿತಿನ್ ಗಡ್ಕರಿ - (ಶೇಕಡಾವಾರು : ಉತ್ತಮ 40, ಸಾಧಾರಣ 38, ಕಳಪೆ 22)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+