ಆರ್ಥಿಕ ಹಿನ್ನಡೆ: ಸೆ. 23ರಂದು ಮೋದಿಯಿಂದ ಪ್ಯಾಕೇಜ್ ಘೋಷಣೆ ನಿರೀಕ್ಷೆ
ನವದೆಹಲಿ, ಸೆಪ್ಟೆಂಬರ್ 23: ನೋಟು ಅಮಾನ್ಯೀಕರಣದಿಂದಾಗಿ ಉಂಟಾಗಿರುವ ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ, ಸೋಮವಾರ (ಸೆ. 25) ಪ್ರಧಾನಿ ನರೇಂದ್ರ ಮೋದಿ ಅವರು ಕೆಲವಾರು ವಲಯಗಳಿಗೆ ಆರ್ಥಿಕ ಪ್ಯಾಕೇಜ್ ಘೋಷಿಸುವ ಸಾಧ್ಯತೆಗಳಿವೆ.
2017-18ರ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕ ವರದಿಯನ್ವಯ ದೇಶದ ಆರ್ಥಿಕತೆ ಶೇ. 5.7ರಷ್ಟಿದೆ. ಇದು ಕಳೆದ ಮೂರು ವರ್ಷಗಳಲ್ಲೇ ಅತ್ಯಂತ ಕಳಪೆ ಸಾಧನೆ ಎಂದು ಹೇಳಲಾಗಿದೆ.

ಈ ಸಮಸ್ಯೆಯಿಂದ ಹೊರಬರುವ ಉದ್ದೇಶದಿಂದ ಈ ಆರ್ಥಿಕ ಪರಿಹಾರದ ಪ್ಯಾಕೇಜ್ ಗಳನ್ನು ಘೋಷಿಸಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.
ಪ್ಯಾಕೇಜ್ ಘೋಷಣೆ ವೇಳೆ ಇಂಧನ, ವಸತಿ, ಸಮಾಜ ಕಲ್ಯಾಣ ವಲಯಗಳಿಗೆ ಪ್ರಮುಖ ಆದ್ಯತೆ ನೀಡಲಾಗಿದೆ ಎಂದು ಹೇಳಲಾಗಿದೆ. ಈ ಬಾರಿಯ ಒಟ್ಟಾರೆ ಪ್ಯಾಕೇಜ್ ನ ಮೊತ್ತ ಸುಮಾರು 40 ಸಾವಿರ ಕೋಟಿ ರು.ಗಳಿಂದ 50 ಸಾವಿರ ಕೋಟಿ ರು.ಗಳವರೆಗೆ ಇರಲಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications