ಉತ್ತರಾಖಂಡ್: ಸೈನಿಕರ ಜೊತೆ ಪ್ರಧಾನಿ ಮೋದಿ ದೀಪಾವಳಿ
ಹರ್ಸಿಲ್ (ಉತ್ತರಖಾಂಡ), ನವೆಂಬರ್ 07: ಕಳೆದ ನಾಲ್ಕು ವರ್ಷದಂತೆ ಈ ಬಾರಿಯೂ ಸಹ ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿ ಹಬ್ಬವನ್ನು ಸೈನಿಕರೊಂದಿಗೆ ಆಚರಣೆ ಮಾಡಿದರು.
ಉತ್ತರಖಾಂಡದ ಹರ್ಸಿಲ್‌ನಲ್ಲಿ ಭಾರತೀಯ ಸಶಸ್ತ್ರ ಪಡೆಯ ಸೈನಿಕರನ್ನು ಭೇಟಿ ಮಾಡಿದ ನರೇಂದ್ರ ಮೋದಿ ಅವರು, ಸೈನಿಕರಿಗೆ ಸಿಹಿ ತಿನ್ನಿಸಿ ದೀಪಾವಳಿಯ ಶುಭಾಶಯ ಕೋರಿದರು. ಆ ನಂತರ ಸೈನಿಕರನ್ನು ಉದ್ದೇಶಿಸಿ ಮೋದಿ ಮಾತನಾಡಿದರು.
'ನೀವು ನಿಮ್ಮ ದೇಹಕ್ಕೆ ಕಷ್ಟ ಕೊಟ್ಟುಕೊಂಡು ದೇಶಕ್ಕೆ ಅಭಯದ ಬೆಳಕು ಹರಿಸುತ್ತೀರಿ, ಇದು ನಿಮಗೆ ಕರ್ತವ್ಯ ಆಗಿರಬಹುದು ಆದರೆ ನಿಜವಾಗಿ ನೀವು ಮಾಡುತ್ತಿರುವುದು ದೇಶಕ್ಕೆ ಸೇವೆ ಎಂದು ಮೋದಿ ಹೇಳಿದರು.

ಭಾಷಣದುದ್ದಕ್ಕೂ ಸೈನಿಕರ ತ್ಯಾಗ, ಬಲಿದಾನಗಳನ್ನು ಹಾಡಿ ಹೊಗಳಿದ ಮೋದಿ ಅವರು ಸೈನಿಕರು ನಮ್ಮ ದೇಶದ ಹೆಮ್ಮೆ ಕೇವಲ ದೇಶ ಕಾಯುವುದು ಮಾತ್ರವಲ್ಲದೆ, ದೇಶ ಪ್ರಕೃತಿಕ ವಿಕೋಪಕ್ಕೆ ಒಳಗಾದಾಗಲೂ ಸೈನಿಕರು ನೆರವಾಗಿದ್ದಾರೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.

ಕನಿಷ್ಠ ತಾಪಮಾನದಲ್ಲಿ ಸಹ ಅತ್ಯಂತ ಎತ್ತರ ಪ್ರದೇಶದಲ್ಲಿ ಸೈನಿಕರು ದೇಶಕ್ಕೆ ಶಕ್ತಿ ತುಂಬುವ ಕಾರ್ಯವನ್ನು ನೀವು ಮಾಡುತ್ತೀರಿ, ಸೈನಿಕರು ದೇಶದ 125 ಕೋಟಿ ಜನರ ಭವಿಷ್ಯವನ್ನು ಸುರಕ್ಷೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಮೋದಿ ಹೇಳಿದರು.












Click it and Unblock the Notifications