ನರೇಂದ್ರ ಮೋದಿ ಸರಕಾರ ಮತ್ತು 16 ಮಹಿಳಾ ಶಕ್ತಿಗಳು
ಜುಲೈ ಏಳರಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೊಡ್ಡ ಪ್ರಮಾಣದಲ್ಲಿ ಸಂಪುಟಕ್ಕೆ ಸರ್ಜರಿಯನ್ನು ಮಾಡಿದೆ. ಹಲವು ಹಾಲೀ ಸಚಿವರು ರಾಜೀನಾಮೆ ನೀಡಿದ್ದಾರೆ. ಸದಾನಂದ ಗೌಡ ಸೇರಿ ಹನ್ನೆರಡು ಮಂದಿ ಪದತ್ಯಾಗ ಮಾಡಿದ್ದಾರೆ.
ಯುವಶಕ್ತಿ, ಸಾಮಾಜಿಕ ನ್ಯಾಯ ಮತ್ತು ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೂತನ ಸಂಪುಟದಲ್ಲಿ ಆದ್ಯತೆಯನ್ನು ನೀಡಲಾಗಿದೆ. ರಾಜ್ಯದಿಂದ ಶೋಭಾ ಕರಂದ್ಲಾಜೆ ಸೇರಿದಂತೆ ನಾಲ್ವರಿಗೆ ನೂತನ ಸಚಿವ ಸ್ಥಾನದ ಭಾಗ್ಯ ಸಿಕ್ಕಿದೆ.
ಐವತ್ತು ವರ್ಷದೊಳಗಿನ ಒಟ್ಟು ಹದಿನಾಲ್ಕು ಸಚಿವರು ಹಾಲೀ ಸಂಪುಟದಲ್ಲಿದ್ದಾರೆ. ರಾಜೀನಾಮೆ ನೀದಿದ ಹನ್ನೆರಡು ಸಚಿವರಲ್ಲಿ ಕೆಲವೊಂದು ಅತ್ಯಂತ ಅನಿರೀಕ್ಷಿತ ಹೆಸರುಗಳಾಗಿದ್ದವು.
ಸಂಪುಟ ಸರ್ಜರಿಯ ನಂತರ ನರೇಂದ್ರ ಮೋದಿ ಸರಕಾರದಲ್ಲಿ ಹನ್ನೊಂದು ಮಹಿಳೆಯರು ಸಚಿವರಾಗಿದ್ದರೆ. ಜೊತೆಗೆ, ದೇಶದಲ್ಲಿ ಇವರ ಅವಧಿಯಲ್ಲಿ ಈಗ 5 ಮಹಿಳೆಯರು ರಾಜ್ಯಪಾಲರು/ಲೆಫ್ಟಿನೆಂಟ್ ಗವರ್ನರ್ ಆಗಿದ್ದಾರೆ. ಆ ಪಟ್ಟಿ ಹೀಗಿದೆ:

ದೇಶದ ಮಹಿಳಾ ರಾಜ್ಯಪಾಲರ ಪಟ್ಟಿ - 1
ನಜ್ಮಾ ಹೆಪ್ತುಲ್ಲಾ
ರಾಜ್ಯಪಾಲರು - ಮಣಿಪುರ
ಆನಂದಿಬೆನ್ ಪಟೇಲ್
ರಾಜ್ಯಪಾಲರು - ಉತ್ತರಪ್ರದೇಶ
ಬೇಬಿ ರಾಣಿ ಮೌರ್ಯ
ರಾಜ್ಯಪಾಲರು - ಉತ್ತರಾಖಂಡ

ದೇಶದ ಮಹಿಳಾ ರಾಜ್ಯಪಾಲರ ಪಟ್ಟಿ - 2 ಮತ್ತು ಕೇಂದ್ರ ಹಣಕಾಸು ಸಚಿವೆ
ಅನಸೂಯಾ ಊಕೆ
ರಾಜ್ಯಪಾಲರು - ಛತ್ತೀಸಗಢ
ತಮಿಳ್ ಸಾಯಿ ಸೌಂದರರಾಜನ್
ರಾಜ್ಯಪಾಲರು - ತೆಲಂಗಾಣ
ಲೆ.ಗವರ್ನರ್ -ಪುದುಚೇರಿ
ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ

ನರೇಂದ್ರ ಮೋದಿ ಸರಕಾರದ ಮಹಿಳಾ ಸಚಿವರುಗಳ ಪಟ್ಟಿ - 1
ಸ್ಮೃತಿ ಇರಾನಿ
ಕೇಂದ್ರ ಮಹಿಳಾ, ಮಕ್ಕಳ ಅಭಿವೃದ್ದಿ ಖಾತೆ
ಮೀನಾಕ್ಷಿ ಲೇಖಿ
ಕೇಂದ್ರ ವಿದೇಶಾಂಗ ವ್ಯವಹಾರ (ಸಹಾಯಕ)
ರೇಣುಕಾ ಸಿಂಗ್
ಕೇಂದ್ರ ಬುಡಕಟ್ಟು ವ್ಯವಹಾರಗಳ ಇಲಾಖೆ (ಸಹಾಯಕ)

ನರೇಂದ್ರ ಮೋದಿ ಸರಕಾರದ ಮಹಿಳಾ ಸಚಿವರುಗಳ ಪಟ್ಟಿ - 2
ಸಾಧ್ವಿ ನಿರಂಜನ್ ಜ್ಯೋತಿ
ಕೇಂದ್ರ ಗ್ರಾಮೀಣಾಭಿವೃದ್ದಿ ಇಲಾಖೆ (ಸಹಾಯಕ)
ಡಾ.ಭಾರತಿ ಪ್ರವೀಣ್ ಪವಾರ್
ಕೇಂದ್ರ ಆರೋಗ್ಯ ಇಲಾಖೆ (ಸಹಾಯಕ)
ದರ್ಶನಾ ವಿಕ್ರಂ ಜರ್ದೋಶ್
ಕೇಂದ್ರ ಜವಳಿ, ರೈಲ್ವೆ ಇಲಾಖೆ (ಸಹಾಯಕ)

ನರೇಂದ್ರ ಮೋದಿ ಸರಕಾರದ ಮಹಿಳಾ ಸಚಿವರುಗಳ ಪಟ್ಟಿ - 3
ಶೋಭಾ ಕರಂದ್ಲಾಜೆ
ಕೇಂದ್ರ ಕೃಷಿ, ರೈತರ ಕಲ್ಯಾಣ (ಸಹಾಯಕ)
ಅನ್ನಪೂರ್ಣ ದೇವಿ
ಕೇಂದ್ರ ಶಿಕ್ಷಣ ಇಲಾಖೆ (ಸಹಾಯಕ)
ಪ್ರತಿಮಾ ಭೌಮಿಕ್
ಕೇಂದ್ರ ಸಾಮಾಜಿಕ ನ್ಯಾಯ (ಸಹಾಯಕ)
ಅನುಪ್ರಿಯಾ ಸಿಂಗ್ ಪಟೇಲ್
ಕೇಂದ್ರ ವಾಣಿಜ್ಯ ಇಲಾಖೆ (ಸಹಾಯಕ)












Click it and Unblock the Notifications