22 ವೈಯಕ್ತಿಕ ಫೀಚರ್ ಗಳ ಬಳಕೆಗೆ ಅನುಮತಿ ಕೇಳುತ್ತಿದೆ 'ನಮೋ ಆ್ಯಪ್'
ನವದೆಹಲಿ, ಮಾರ್ಚ್ 26: ಡಾಟಾ ಲೀಕ್ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ 'ನಮೋ ಆ್ಯಪ್' ಸುದ್ದಿ ಕೇಂದ್ರದಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಉಂಟಾಗಿರುವ ಖಾಸಗಿ ಮಾಹಿತಿಗಳ ಮೇಲಿನ ಚರ್ಚೆ ನಡುವೆ 'ನಮೋ ಆ್ಯಪ್' ಕೂಡ ಚರ್ಚೆಗೆ ಗುರಿಯಾಗಿದೆ.
ನಮೋ ಆ್ಯಪ್ 22 ಪರ್ಸನಲ್ ಫೀಚರ್ ಗಳಿಗೆ ಆಕ್ಸೆಸ್ ಕೇಳುತ್ತದೆ ಎಂಬುದು ತಿಳಿದು ಬಂದಿದೆ. ಲೊಕೇಶನ್, ಫೋಟೋಗ್ರಫಿ, ಕಾಂಟ್ಯಾಕ್ಟ್, ಮೈಕ್ಟೋಫೋನ್, ಕ್ಯಾಮೆರಾಗೂ ಆ್ಯಪ್ ಆಕ್ಸೆಸ್ ಕೇಳುತ್ತದೆ.
ವಿಶೇಷ ಎಂದರೆ ನಮೋ ಆ್ಯಪ್ ಕೇಳುವ ಆಕ್ಸೆಸ್ ಗಳು ಬಳಕೆಯಲ್ಲಿರುವ ಹಲವು ಜನಪ್ರಿಯ ಆ್ಯಪ್ ಗಳಿಗಿಂತ ಹೆಚ್ಚಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಚೇರಿಯ ಅಧಿಕೃತ ಆ್ಯಪ್, 'ಪಿಎಂಒ ಇಂಡಿಯಾ ಆ್ಯಪ್' 14 ಫೀಚರ್ ಗಳಿಗೆ ಮಾತ್ರ ಆಕ್ಸೆಸ್ ಕೇಳುತ್ತದೆ.

ಇದೇ ವೇಳೆ 'ಅಮೆಜಾನ್ ಇಂಡಿಯಾ' ಆ್ಯಪ್ 17 ಫೀಚರ್ ಗಳ ಬಳಕೆಗೆ ಅನುಮತಿ ಕೇಳುತ್ತದೆ. ಇನ್ನು ಪೇಟಿಎಂ 23 ಫೀಚರ್ಸ್ ಮತ್ತು ದೆಹಲಿ ಪೊಲೀಸರ ಆ್ಯಪ್ 25 ಫೀಚರ್ ಗಳ ಆಕ್ಸೆಸ್ ಕೇಳುತ್ತದೆಯಾದರೂ ಇವುಗಳು ಹೆಚ್ಚಿನ ಸೇವೆಯನ್ನು ಜನರಿಗೆ ನೀಡುತ್ತಿವೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.
ಫ್ರಾನ್ಸ್ ನ ಭದ್ರತಾ ತಜ್ಞರಾದ ರಾಬರ್ಟ್ ಬಾಪ್ಟಿಸ್ಟ್, ನರೇಂದ್ರ ಮೋದಿ ಆ್ಯಪ್ ಅಮೆರಿಕಾ ಮೂಲದ ಕ್ಲೆವರ್ ಟ್ಯಾಪ್ ಎನ್ನುವ ಕಂಪನಿಗೆ ಬಳಕೆದಾರರ ಮಾಹಿತಿಗಳನ್ನು ನೀಡುತ್ತದೆ. ಬಳಕೆದಾರರ ಅನುಮತಿ ಪಡೆಯದೆ ಈ ಮಾಹಿತಿಗಳನ್ನು ನೀಡುತ್ತದೆ ಎಂದು ಹೇಳಿದ್ದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಈ ಆರೋಪ ಕೇಳಿ ಬಂದ ಬಳಿಕ ನರೇಂದ್ರ ಮೋದಿ ಡಾಟ್ ಇನ್ (narendramodi.in) ನಲ್ಲಿರುವ ಖಾಸಗಿ ನೀತಿಯಲ್ಲಿ ಬದಲಾವಣೆ ಮಾಡಲಾಗಿದೆ. ಕೆಲವು ಮಾಹಿತಿಗಳನ್ನು ಮೂರನೇ ವ್ಯಕ್ತಿಗೆ ನೀಡಲಾಗುತ್ತದೆ ಎಂದು ಇದರಲ್ಲಿ ಹೇಳಲಾಗಿದೆ.
ಹೆಸರು, ಇಮೇಲ್, ಮೊಬೈಲ್ ಸಂಖ್ಯೆ, ಡಿವೈಸ್ ಮಾಹಿತಿ, ಲೊಕೇಶನ್ ಮತ್ತು ನೆಟ್ವರ್ಕ್ ಮಾಹಿತಿಯನ್ನು ಮೂರನೇ ವ್ಯಕ್ತಿಗೆ ನೀಡುತ್ತೇವೆ ಎಂದು ಇದರಲ್ಲಿ ವಿವರಿಸಲಾಗಿದೆ.
ಇನ್ನು ಸಮಾಜವಾದಿ ಪಕ್ಷಗಳು ಮತ್ತು ಕಾಂಗ್ರೆಸ್ ಕೂಡ ಆ್ಯಪ್ ಹೊಂದಿವೆ. ಇದರಲ್ಲಿ ಸಮಾಜವಾದಿ ಪಕ್ಷ ಮೂರು ಆಕ್ಸೆಸ್ ಗಳನ್ನು ಕೇಳಿದರೆ, ಕಾಂಗ್ರೆಸ್ 10 ಫೀಚರ್ ಗಳ ಆಕ್ಸೆಸ್ ಕೇಳುತ್ತದೆ.












Click it and Unblock the Notifications