ಬಿಹಾರ ಹಣೆಬರಹ ಬದಲಿಸಲು ಮೋದಿ ಪ್ಯಾಕೇಜ್

ಪಾಟ್ನಾ, ಆಗಸ್ಟ್. 18: ಬಿಹಾರದಲ್ಲಿ ವಿಧಾನಸಭಾ ಚುನಾವಣಾ ಕಾವು ಈಗಲೇ ಆರಂಭವಾದಂತಿದೆ. ಬಿಹಾರದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ 1.25 ಲಕ್ಷ ಕೋಟಿ ರುಪಾಯಿ ವಿಶೇಷ ನೆರವು ಘೋಷಿಸಿದ್ದಾರೆ.

ಬಿಹಾರದ ಹಣೆಬರಹ ಬದಲಿಸಲು ಬಿಜೆಪಿಯನ್ನು ಆಶೀರ್ವದಿಸಿ. ನಮ್ಮನ್ನು ಅಧಿಕಾರಕ್ಕೆ ತಂದರೆ ಎಲ್ಲವನ್ನು ಸರಿ ಮಾಡುತ್ತೇವೆ. ಬಿಹಾರಕ್ಕೆ ಹಿಡಿದ ಗ್ರಹಣ ಬಿಡಿಸುತ್ತೇವೆ ಎಂದು ಹೇಳಿದ್ದಾರೆ.

Narendra Modi announces 1.25 lakh cr. package for Bihar

ಈಗ ನೀಡಿರುವ ವಿಶೇಷ ನೆರವಿಗೂ ಹಿಂದೆ ಘೋಷಿಸಿದ್ದ 40,657 ಕೋಟಿ ರು. ಯಾವುದೇ ಸಂಬಂಧವಿಲ್ಲ ಎಂದು ಪ್ರಧಾನಿ ಹೇಳಿದರು. ನಿತೀಶ್ ಕುಮಾರ್ ಅಧಿಕಾರದಲ್ಲಿ ಬಿಹಾರ ದಾರಿ ತಪ್ಪಿದೆ ಎಂದು ಆರೋಪಿಸಿದರು. ಇದೇ ಸಂದರ್ಭದಲ್ಲಿ ಮೋದಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.

ಕೆಲದ ದಿನಗಳ ಹಿಂದೆ ನಿತೀಶ್ ಕುಮಾರ್ ಮತ್ತು ಆರ್ ಜೆಡಿ ಲಾಲೂ ಪ್ರಸಾದ್ ಯಾದವ್ ಬಿಹಾರದಲ್ಲಿ ಸೀಟು ಹೊಂದಾಣಿಕೆ ಮಾಡಿಕೊಂಡು ಬಿಜೆಪಿಗೆ ಸೆಡ್ಡು ಹೊಡೆದಿದ್ದರು. ಇದೀಗ ಸ್ವತಃ ಪ್ರಧಾನಿಯೇ ಬಿಹಾರಕ್ಕೆ ವಿಶೇಷ ಪ್ಯಾಕೇಜ್ ನೀಡಿದ್ದು ಮುಂದಿನ ವಿಧಾಸಭಾ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಯಲು ಸರ್ವ ಸಿದ್ಧತೆ ಮಾಡಿಕೊಂಡಂತೆ ಕಾಣುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+