ಆತ್ಮಹತ್ಯೆ ಪತ್ರದಲ್ಲಿ ಹೆಸರು: ನಟಿ ವೈಶಾಲಿ ಟಕ್ಕರ್ ಮಾಜಿ ಪ್ರಿಯಕರ ಬಂಧನ
ಭೋಪಾಲ್, ಅಕ್ಟೋಬರ್ 19: ಟಿವಿ ನಟಿ ವೈಶಾಲಿ ಟಕ್ಕರ್ ಅವರು ಆತ್ಮಹತ್ಯೆ ಪತ್ರದಲ್ಲಿ ಹೆಸರಿಸಿರುವ ಮಾಜಿ ಗೆಳೆಯನನ್ನು ಮಧ್ಯಪ್ರದೇಶ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಟಿವಿ ನಟಿ ವೈಶಾಲಿ ಟಕ್ಕರ್ ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಖ್ಯಾತಿಯ ನಟಿ ರವಿವಾರ ಇಂದೋರ್‌ನ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು.
ಆಕೆಯ ಮನೆಯಿಂದ ವಶಪಡಿಸಿಕೊಂಡ ಡೆತ್ ನೋಟ್ ಅವಳು ಒತ್ತಡಕ್ಕೊಳಗಾಗಿದ್ದಳು ಎನ್ನುವುದನ್ನು ಬಹಿರಂಗಪಡಿಸಿವೆ. ಜೊತೆಗೆ ಆಕೆ ಮಾಜಿ ಗೆಳೆಯನಿಂದ ಕಿರುಕುಳಕ್ಕೊಳಗಾಗಿದ್ದಳು ಎಂದು ಸೂಚಿಸುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಟಿಯ ನೆರೆಹೊರೆಯ ಮತ್ತು ಮಾಜಿ ಗೆಳೆಯನಾದ ರಾಹುಲ್ ನವಲಾನಿ ಮತ್ತು ಅವರ ಪತ್ನಿ ದಿಶಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆಯ ಪ್ರಕರಣವನ್ನು ದಾಖಲಿಸಲಾಗಿದೆ. ಇದೀಗ ರಾಹುಲ್ ನವಲಾನಿ ಅವರನ್ನು ಬಂಧಿಸಲಾಗಿದ್ದು ಆತನ ಪತ್ನಿ ಇನ್ನೂ ತಲೆಮರಿಸಿಕೊಂಡಿದ್ದಾಳೆ.

"ಆರೋಪಿ ದಿಶಾ ನೆರೆಹೊರೆಯವರಾಗಿದ್ದರಿಂದ ನಡೆಯುತ್ತಿರುವ ಘಟನೆಯನ್ನು ತಿಳಿದುಕೊಂಡು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಪತ್ತೆಗಾಗಿ ವಿವಿಧ ರಾಜ್ಯಗಳಿಗೆ ತಂಡಗಳನ್ನು ಕಳುಹಿಸಲಾಗಿದೆ. ಜೊತೆಗೆ ಬಹುಮಾನವನ್ನೂ ಸಹ ಘೋಷಿಸಲಾಗಿದೆ. ಲುಕ್‌ಔಟ್ ಸುತ್ತೋಲೆ ಕೂಡ ಹೊರಡಿಸಲಾಗಿದೆ. ರಾಹುಲ್ ನವಲಾನಿ ಅವರನ್ನು ವಿಚಾರಣೆ ಕೂಡ ನಡೆಸಲಾಗುತ್ತಿದೆ" ಎಂದು ಇಂದೋರ್ ಪೊಲೀಸ್ ಕಮಿಷನರ್ ಹರಿನಾರಾಯಣ ಚಾರಿ ಮಿಶ್ರಾ ತಿಳಿಸಿದ್ದಾರೆ. ಆರೋಪಿಗಳ ಬಳಿಯಿರುವ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಮಿಶ್ರಾ ತಿಳಿಸಿದ್ದಾರೆ.
ರಾಹುಲ್ ನವಲಾನಿ, ನಟಿ ವೈಶಾಲಿ ಟಕ್ಕರ್ ಮದುವೆಯ ಯೋಜನೆ ಬಗ್ಗೆ ತಿಳಿದಾಗಿನಿಂದ ಆಕೆಗೆ ಕಿರುಕುಳ ನೀಡುತ್ತಿದ್ದರು ಎಂದು ನಟಿ ವೈಶಾಲಿ ಟಕ್ಕರ್ ಕುಟುಂಬ ಆರೋಪಿಸಿದೆ. ಟಕ್ಕರ್ ಮತ್ತು ನವಲಾನಿ ಅವರ ತಂದೆ ವ್ಯಾಪಾರ ಪಾಲುದಾರರಾಗಿದ್ದಾರೆ. ಹೀಗಾಗಿ ಅವರು ಪರಸ್ಪರ ಬಹಳ ಹಿಂದಿನಿಂದಲೂ ತಿಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈಶಾಲಿ ಟಕ್ಕರ್ ಅವರು 2015 ರಲ್ಲಿ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಮೂಲಕ ತಮ್ಮ ಕಿರುತೆರೆ ಜರ್ನಿಯನ್ನು ಪ್ರಾರಂಭಿಸಿದರು.
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.












Click it and Unblock the Notifications