Nagaland Election 2023: ನಾಗಾಲ್ಯಾಂಡ್ ಇತಿಹಾಸದಲ್ಲಿ ಮೊದಲ ಬಾರಿಗೆ ಇಬ್ಬರು ಮಹಿಳಾ ಅಭ್ಯರ್ಥಿಗಳು ವಿಧಾನಸಭೆಗೆ ಆಯ್ಕೆ
ನಾಗಾಲ್ಯಾಂಡ್ ಇತಿಹಾಸದಲ್ಲಿ ಮೊದಲ ಬಾರಿಗೆ ಇಬ್ಬರು ಮಹಿಳಾ ಅಭ್ಯರ್ಥಿಗಳು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ನಾಗಾಲ್ಯಾಂಡ್‌ನಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಪ್ರಮುಖಾಂಶಗಳನ್ನು ತಿಳಿಯಿರಿ.
ನವದೆಹಲಿ, ಮಾರ್ಚ್ 02: ನಾಗಾಲ್ಯಾಂಡ್ ಇತಿಹಾಸದಲ್ಲಿ ಮೊದಲ ಬಾರಿಗೆ ಇಬ್ಬರು ಮಹಿಳಾ ಅಭ್ಯರ್ಥಿಗಳು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ನಾಗಾಲ್ಯಾಂಡ್‌ನಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಪಶ್ಚಿಮ ಅಂಗಮಿ ಎಸಿ ಮತ್ತು ದಿಮಾಪುರ್-III ಕ್ಷೇತ್ರಗಳಿಂದ ಕ್ರಮವಾಗಿ ಸಲ್ಹೌಟುವೊನುವೊ ಕ್ರೂಸ್ ಮತ್ತು ಹೆಕಾನಿ ಜಖಾಲು ಎಂಬ ಮಹಿಳೆಯರು ಜಯ ಗಳಿಸಿದ್ದಾರೆ.
ಚುನಾವಣಾ ಫಲಿತಾಂಶದ ಪ್ರಮುಖಾಂಶಗಳನ್ನು ತಿಳಿಯಿರಿ
- 60 ಸದಸ್ಯ ಬಲದ ನಾಗಾಲ್ಯಾಂಡ್ ವಿಧಾನಸಭೆಯಲ್ಲಿ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟ 36 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ.

- ಬಿಜೆಪಿಯ ಪಿ. ಬಶಾಂಗ್ಮೊಂಗ್ಬಾ ಚಾಂಗ್ ಅವರು ಎನ್‌ಸಿಪಿಯ ಟೊಯಾಂಗ್ ಚಾಂಗ್ ವಿರುದ್ಧ 5644 ಮತಗಳ ಅಂತರದಿಂದ ತುಯೆನ್ಸಾಂಗ್ ಸದರ್-1 ಸ್ಥಾನವನ್ನು ಗೆದ್ದಿದ್ದಾರೆ.
- ನಾಗಾಲ್ಯಾಂಡ್‌ನಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಾಲೆ) ಮತ್ತು ನ್ಯಾಷನಲ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ ಗೆಲುವು ದಾಖಲಿಸಿವೆ. ಎಸ್ ಕೆಯೋಶು ಯಿಮ್ಚುಂಗರ್ ಅವರು 2295 ಮತಗಳ ಅಂತರದಿಂದ ಶಮಟೋರ್ ಚೆಸ್ಸೋರ್ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದಾರೆ. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಾಲೆ) ಅನ್ನು ಪ್ರತಿನಿಧಿಸುವ ಇಮ್ತಿಚೋಬಾ ಅವರು ತುಯೆನ್ಸಾಂಗ್ ಸದರ್-II ಕ್ಷೇತ್ರದಲ್ಲಿ 400 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
- ಈಶಾನ್ಯ ರಾಜ್ಯ ನಾಗಾಲ್ಯಾಂಡ್‌ನಲ್ಲಿ ಬಿಜೆಪಿ-ಎನ್‌ಡಿಪಿಪಿ ಮೈತ್ರಿಕೂಟ ಅಧಿಕಾರಕ್ಕೆ ಹಿಡಿಯುವ ಎಲ್ಲ ಸಾಧ್ಯತೆಗಳೂ ಇವೆ.

- ನಾಗಾಲ್ಯಾಂಡ್ ವಿಧಾನಸಭೆಯ ಹಿಂದಿನ ಸುತ್ತಿನ ಮತ ಎಣಿಕೆಯಲ್ಲಿ ಹಿನ್ನೆಡೆ ಹೊಂದಿದ ನಂತರ, ಬಿಜೆಪಿಯ ನಾಗಾಲ್ಯಾಂಡ್ ಅಧ್ಯಕ್ಷ ತೆಮ್ಜೆನ್ ಇಮ್ನಾ ಅಲಾಂಗ್ ತಮ್ಮ ಕ್ಷೇತ್ರವಾದ ಅಲೋಂಗ್ಟಾಕಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ.
- ಭಾರತೀಯ ಚುನಾವಣಾ ಆಯೋಗವು ಮಧ್ಯಾಹ್ನ 12.15 ಕ್ಕೆ ಹಂಚಿಕೊಂಡ ಇತ್ತೀಚಿನ ಮತ ಎಣಿಕೆ ಅಂಕಿಅಂಶಗಳ ಪ್ರಕಾರ, ಬಿಜೆಪಿ ನಾಗಾಲ್ಯಾಂಡ್ ಅಧ್ಯಕ್ಷರು ಜನತಾ ದಳ (ಯುನೈಟೆಡ್) ಅಭ್ಯರ್ಥಿ ಜೆ ಲಾನು ಲಾಂಗ್‌ಚಾರ್ ಅವರಿಗಿಂತ 1,202 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
- ಎಲ್‌ಜೆಪಿ 3 ಸ್ಥಾನಗಳಲ್ಲಿ ಮತ್ತು ಆರ್‌ಐಪಿ ಎರಡರಲ್ಲಿ ಮುನ್ನಡೆಯನ್ನು ಸಾಧಿಸಿದೆ. ಅಘುನಾಟೊ, ದಿಮಾಪುರ್ III ಮತ್ತು ಪುಗೊಬೊಟೊದಲ್ಲಿ ಎಲ್‌ಜೆಪಿ ಮುನ್ನಡೆ ಗಳಿಸಿದೆ. ನೊಕ್ಸೆನ್ ಮತ್ತು ಟ್ಯುನ್‌ಸಂಘ್ ಸಾದರ್‌ನಲ್ಲಿ ಆರ್‌ಐಪಿ ಮುನ್ನೆಡೆ ಸಾಧಿಸಿದೆ. ಈ ಎರಡೂ ಪಕ್ಷಗಳು ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಪ್ರವೇಶಿಸಲಿವೆ.
- ಈ ಪಕ್ಷಗಳ ಮುನ್ನಡೆಗಳು ಸಹ ಮಹತ್ವದ್ದಾಗಿವೆ. ಬಿಜೆಪಿಯು ಎನ್‌ಡಿಪಿಪಿಯೊಂದಿಗೆ ಔಪಚಾರಿಕ ಚುನಾವಣಾ ಪೂರ್ವ ಮೈತ್ರಿಯಲ್ಲಿದೆ. ಈ ಎರಡೂ ಪಕ್ಷಗಳು ಈ ಮೈತ್ರಿಕೂಟಕ್ಕೆ ತಮ್ಮ ಬೆಂಬಲವನ್ನು ಘೋಷಿಸಿವೆ.












Click it and Unblock the Notifications