ಆಸ್ತಿ ಕೈತಪ್ಪುತ್ತದೆಂದು ಮಗಳನ್ನೇ ಹತ್ಯೆಗೈದಳೆ ಇಂದ್ರಾಣಿ?

ಮುಂಬೈ, ನವೆಂಬರ್. 21: ಶೀನಾ ಬೋರಾ ಹತ್ಯೆ ಪ್ರಕರಣ ದಿನಕ್ಕೊಂದು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪೊಲೀಸರ ವಶದಲ್ಲಿರುವವರು ನೀಡುತ್ತಿರುವ ಹೇಳಿಕೆಗಳು ತನಿಖೆಯ ದಿಕ್ಕನ್ನೇ ಬದಲಾಯಿಸುವಂತೆ ತೋರುತ್ತಿದೆ. ಆಸ್ತಿ ಕೈ ತಪ್ಪಿ ಹೋಗುತ್ತದೆ ಎಂಬ ಆತಂಕದಲ್ಲಿ ಇಂದ್ರಾಣಿ ಮುಖರ್ಜಿ ಮಗಳು ಶೀನಾ ಬೋರಾ ಳನ್ನು ಹತ್ಯೆ ಮಾಡಿದಳೆ ಎಂಬ ಸಂಗತಿಗೂ ಅನೇಕ ಆಧಾರಗಳು ಸಿಗಲಾರಂಭಿಸಿವೆ.

ಶೀನಾ ಬೋರಾ ಮದುವೆಯಾದರೆ ಆಸ್ತಿ ಸಂಪೂರ್ಣವಾಗಿ ಅವಳಿಗೆ ಸೇರುತ್ತದೆ. ಪೀಟರ್ ಮುಖರ್ಜಿ ಪುತ್ರ ರಾಹುಲ್ ನನ್ನು ಆಕೆ ಮದುವೆಯಾದರೆ ತಾನು ಬೀದಿಗೆ ಬರಬೇಕಾಗುತ್ತದೆ ಎಂಬ ಆತಂಕದಲ್ಲಿ ಮಗಳ ಹತ್ಯೆಗೆ ಸಂಚು ರೂಪಿಸಿದಳು ಎಂಬ ಅಂಶವನ್ನು ಚಾರ್ಜ್ ಶೀಟ್ ಬಿಚ್ಚಿಡುತ್ತಿದೆ.[ಶೀನಾ ಬೋರಾ ಹತ್ಯೆ ಪೀಟರ್ ಬಂಧನ, ಕೋರ್ಟಿಗೆ ಹಾಜರು]

ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮ ಉದ್ಯಮಿ ಪೀಟರ್ ಮುಖರ್ಜಿ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಇದಕ್ಕೂ ಮುನ್ನ ಶೀನಾ ಬೋರಾ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ಪ್ರಕರಣದ ಇತ್ತೀಚಿನ ಬೆಳವಣಿಗೆ ಇಲ್ಲಿದೆ...

1000 ಪುಟಗಳ ಚಾರ್ಜ್ ಶೀಟ್

1000 ಪುಟಗಳ ಚಾರ್ಜ್ ಶೀಟ್

ಸಿಬಿಐ 1000 ಪುಟಗಳ ಚಾರ್ಜ್‌ಶೀಟನ್ನು ಮುಂಬೈನ ಇಸ್‌ಪ್ಲಾನಡೆ ಕೋರ್ಟ್‌ಗೆ ಸಲ್ಲಿಸಿದೆ. ಚಾರ್ಜ್ ಶೀಟ್ ನಲ್ಲಿ ಶೀನಾ ಬೋರಾ ತಾಯಿ ಇಂದ್ರಾಣಿ ಮುಖರ್ಜಿ ಹಾಗೂ ಆಕೆಯ ಮಾಜಿ ಪತಿ ಸಂಜೀವ್ ಖನ್ನಾ, ಚಾಲಕ ಶ್ಯಾಮ್ ರೈನನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.

ಚಾರ್ಜ್ ಶೀಟ್ ನಲ್ಲಿ ಏನಿದೆ?

ಚಾರ್ಜ್ ಶೀಟ್ ನಲ್ಲಿ ಏನಿದೆ?

ಶೀನಾ ಮತ್ತು ರಾಹುಲ್ ನಡುವಿನ ಸಂಬಂಧವೇ ಕೊಲೆಗೆ ಪ್ರಮುಖ ಕಾರಣ. ತಾಯಿ ಮತ್ತು ಮಗಳ ನಡುವೆ ಆಸ್ತಿಗೆ ಸಂಬಂಧಿಸಿ ಎದ್ದಿದ್ದ ಆಂತರಿಕ ಸಂಘರ್ಷವೇ ಕೊಲೆಯಲ್ಲಿ ಅಂತ್ಯವಾಯಿತು.

ಶೀನಾ ಅವರೊಂದಿಗೆ ಅಫೇರ್ ಇತ್ತು

ಶೀನಾ ಅವರೊಂದಿಗೆ ಅಫೇರ್ ಇತ್ತು

ಶೀನಾ ಬೋರಾ ಜೊತೆ ನನಗೆ ಅಫೈರ್ ಇತ್ತು ಎಂದು ಹೇಳುವ ಮೂಲಕ ಪೀಟರ್ ಮುಖರ್ಜಿ ಪುತ್ರ ರಾಹುಲ್ ಹೇಳಿಕೆ ನೀಡಿದ್ದು ಪ್ರಕರಣವನ್ನು ಮತ್ತಷ್ಟು ಕಗ್ಗಂಟಾಗಿಸುವಂತೆ ಮಾಡಿದೆ.

 ಪೀಟರ್ ಮುಖರ್ಜಿ ಬಂಧನ

ಪೀಟರ್ ಮುಖರ್ಜಿ ಬಂಧನ

ತಿಂಗಳುಗಳ ವಿಚಾರಣೆ ನಂತರ ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ಉದ್ಯಮಿ ಪೀಟರ್ ಮುಖರ್ಜಿ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಶೀನಾ ತಾಯಿ ಇಂದ್ರಾಣಿ ಮುಖರ್ಜಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+