ಫೇಸ್‌ ಬುಕ್‌ ಕಾಟಕ್ಕೆ ಮತ್ತೊಬ್ಬ ಬಾಲಕಿ ಬಲಿ

Mumbai Facebook stalker incident - Teen girl commits suicide
ಮುಂಬೈ, ನ.21: ಸಾಮಾಜಿಕ ಜಾಲತಾಣ ಫೇಸ್‌ ಬುಕ್‌ ಕಾಟಕ್ಕೆ ಬಾಲಕಿಯೊಬ್ಬಳು ತುತ್ತಾಗಿದ್ದಾಳೆ. ಇನ್ನು, ಈ ಬಾಲಕಿಗೆ ಕಿರುಕುಳಕೊಟ್ಟವನೂ ಅಪ್ರಾಪ್ತವಯಸ್ಕ.

ಯಾವನೋ ತಲೆಮಾಸಿದವನೊಬ್ಬ ಫೇಸ್‌ ಬುಕ್ ನಲ್ಲಿ ಅಶ್ಲೀಲ ಸಂದೇಶ ಕಳುಳಿಸಿದ್ದಾನೆಂದು ಆತಂಕಗೊಂಡ ಹದಿಹರೆಯದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮುಂಬಯಿ ಹೊರವಲಯದ ಕಾಂಡಿವಿಲಿ ನಿವಾಸಿ, 9ನೇ ತರಗತಿಯ ಬಾಲಕಿ ಮಂಗಳವಾರ ರಾತ್ರಿ ತನ್ನ ಬೆಡ್‌ ರೂಂನಲ್ಲಿ ನೇಣು ಹಾಕಿಕೊಂಡಿದ್ದಾಳೆ.

ಆ ದುರುಳನೋ ಒಂದಲ್ಲಾ/ ಎರಡು ಬಾರಿಯಲ್ಲ. ಸತತವಾಗಿ ಸಂದೇಶಗಳನ್ನು ಕಳುಹಿಸಿ 14 ವರ್ಷದ ಬಾಲಕಿಯನ್ನು ಕಾಡಿದ್ದಾನೆ. ನತದೃಷ್ಟ ಬಾಲಕಿಯ ಫೇಸ್‌ ಬುಕ್ ಪೇಜಿಗೆ ಅಶ್ಲೀಲ ಸಂದೇಶ ತುರುಕಿದ್ದಾನೆ. 'ಆದ್ದರಿಂದ ಮಾನಸಿಕವಾಗಿ ಆಘಾತಗೊಂಡ ನಮ್ಮ ಮಗು ಆತ್ಮಹತ್ಯೆಗೆ ಶರಣಾಗಿದ್ದಾಳೆ' ಎಂದು ಪೋಷಕರು ಆರೋಪಿಸಿದ್ದಾರೆ. (ಬೆಂಗಳೂರು: ಫೇಸ್‌ಬುಕ್ ಪ್ರೇಮ-ಕಾಮಕ್ಕೆ ಬಾಲಕಿ ಬಲಿ)

'ಮಗಳು ಕೊಠಡಿಯಲ್ಲಿ ಓದಿಕೊಳ್ಳುತ್ತಿದ್ದಾಳೆ ಎಂದೇ ಭಾವಿಸಿದ್ದೆವು. ಆದರೆ ರಾತ್ರಿ ಸುಮಾರು ಹೊತ್ತಾದರೂ ಹೊರಗೆ ಬಂದಿರಲಿಲ್ಲ. ಅನುಮಾನಗೊಂಡು ಬಾಗಿಲು ತಟ್ಟಿದರೂ ಪ್ರತಿಕ್ರಿಯೆ ಬರಲಿಲ್ಲ. ಅವರ ತಂದೆ ಬಾಗಿಲು ಮುರಿದು ನೋಡಿದಾಗ ಆಕೆ ನೇಣು ಹಾಕಿಕೊಂಡಿರುವುದು ಕಂಡುಬಂದಿತು' ಎಂದು ಹುಡುಗಿಯ ತಾಯಿ ಕಂಬನಿ ಸುರಿಸುತ್ತಾರೆ.

ನಾಲ್ಕು ದಿನಗಳ ಹಿಂದಷ್ಟೇ ಈಕೆ ತನ್ನ ತಂದೆಯೊಂದಿಗೆ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಯುವಕನ ಬಗ್ಗೆ ದೂರು ನೀಡಿದ್ದಾಳೆ. ಆದರೆ ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ಆಕೆ ಆತ್ಮಹತ್ಯೆಗೆ ಮುಂದಾದಳು ಎಂದು ಅವರು ಆರೋಪಿಸಿದ್ದಾರೆ.

ಪೋಷಕರು ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಈಗ ಬಾಲಕಿ ಮತ್ತು ಆರೋಪಿ ಯುವಕನ ಫೇಸ್‌ ಬುಕ್ ಅಕೌಂಟ್ ತೆರೆದು ಪರಿಶೀಲನೆ ಮಾಡುತ್ತಿದ್ದಾರೆ. ಕಾಟ ಕೊಟ್ಟ ಹುಡುಗನ ಪತ್ತೆ ಹಚ್ಚಲಾಗಿದ್ದು, IPC Section 305 ಅನುಸಾರ ಅವನನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು Kandivali ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+