Mumbai Air Quality: ವಾಯು ಮಾಲಿನ್ಯದಲ್ಲಿ 'ದೆಹಲಿ' ಮೀರಿಸಿದ 'ಮುಂಬೈ': 3ಕಡೆ 'ಕಳಪೆ' ಗಾಳಿ ದಾಖಲು
ಬೆಂಗಳೂರು, ಅಕ್ಟೋಬರ್ 18: ರಾಷ್ಟ್ರ ರಾಜಧಾನಿ ನವದೆಹಲಿಯು ಸದಾ ವಾಯು ಮಾಲಿನ್ಯದಿಂದ ಮತ್ತು ಅದರ ನಿಯಂತ್ರಣದ ಕ್ರಮಗಳಿಂದ ಸದಾ ಸುದ್ದಿಯಲ್ಲಿರುತ್ತದೆ. ಆದರೆ ಈ ಬಾರಿ ವಾಯು ಮಾಲಿನ್ಯ ಹದಗೆಡುವ ವಿಚಾರದಲ್ಲಿ ದೆಹಲಿಯನ್ನು ಮುಂಬೈ ನಗರ ಮೀರಿಸಿದೆ. ಮುಂಬೈ ಮಹಾನಗರದ ಕೆಲವು ಪ್ರದೇಶಗಳಲ್ಲಿ ಮಿತಿ ಮೀರಿದ ಅತ್ಯಧಿಕ ಕಳಪೆಯ ವಾಯುಗುಣಮಟ್ಟ (Air Quality Index- AQI) ದಾಖಲಾಗಿದೆ.
ಈ ಮೂಲಕ ವಾಯುಮಾಲಿನ್ಯ ವಿಚಾರದಲ್ಲಿ ದೆಹಲಿ vs ಮುಂಬೈ ಎಂಬಂತಹ ವಾತಾವರಣ ನಿರ್ಮಾಣವಾಗುತ್ತಿದೆ.
ಮುಂಬೈನ ಕೆಲವು ಪ್ರದೇಶಗಳಲ್ಲಿ AQI 300 ಕ್ಕಿಂತ ಹೆಚ್ಚು ದಾಖಲಾಗಿದೆ. ಬುಧವಾರ ಬೆಳಗ್ಗೆ 9 ಗಂಟೆಗೆ ಮುಂಬೈನ ಮೂರು ಪ್ರದೇಶಗಳಲ್ಲಿ ಗಾಲಿ ಗುಣಮಟ್ಟ ಅತ್ಯಂತ ಕಳಪೆ ಎಂದು ಗಾಳಿಯ ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆಯ ವ್ಯವಸ್ಥೆ (SAFAR) ವರದಿ ಮಾಡಿದೆ.

ಮುಂಬೈನಲ್ಲಿನ ಒಟ್ಟು ಗಾಳಿಯ ಗುಣಮಟ್ಟ ಮಧ್ಯಮ ವಿಭಾಗದಲ್ಲಿ ಅಂದರೆ ಸರಾಸರಿ 113ರ ವಾಯು ಗುಣಮಟ್ಟ ಸೂಚ್ಯಂಕ ದಾಖಲಾಗಿದೆ. ಇದೇ ವೇಳೆ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು SAFAR ಪ್ರಕಾರ ಒಟ್ಟು ಸರಾಡರಿ AQI 83 ಇದ್ದು, ಇದು ತೃಪ್ತಿದಾಯವಾಗಿದೆ.
ಮುಂಬೈ ವಾಯು ಗುಣಮಟ್ಟ ವಿವರ
SAFAR ವರದಿ ಪ್ರಕಾರ, ಮುಂಬೈನ ಬಾಂದ್ರಾ ಕುರ್ಲಾ ಪ್ರದೇಶದ ಕಲಾನಗರದಲ್ಲಿ ಗಾಳಿಯ ಗುಣಮಟ್ಟವು 178 ತಲುಪಿದೆ. ವರ್ಲಿಯಲ್ಲಿ 139, ಭಾಂಡಪ್ 131 ಮತ್ತು ಬೊರಿವಲಿಯಂತಹ ಪ್ರದೇಶಗಳಲ್ಲಿ AQI 135 ಮುಟ್ಟಿದೆ. ಇದು ಗುಣಮಟ್ಟದಲ್ಲಿ ಮಧ್ಯಮದ ಹಂತದಲ್ಲಿದೆ ಎಂದು ಹೇಳಲಾಗುತ್ತದೆ.
#WATCH | Maharashtra: Visuals from Mumbai's Chhatrapati Shivaji Terminus (CST) area as the Air Quality Index dips to 'Very Poor' category. pic.twitter.com/78VjD0N220
— ANI (@ANI) October 18, 2023
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಮಾಹಿತಿಗಳ ಪ್ರಕಾರ, ಡಿಯೋನಾರ್ ಪ್ರದೇಶ 216 ಮತ್ತು ಚೆಂಬೂರ್ ನಲ್ಲಿ 213 AQI ದಾಖಲಾಗಿದೆ. ಇಷ್ಟು ಕಳಪೆ ಹಂತದ ಗಾಳಿ ಎಂದು ತಿಳಿಸಲಾಗಿದೆ. ಮುಂಬೈನಲ್ಲಿನ ಒಟ್ಟಾರೆ ಗಾಳಿಯ ಗುಣಮಟ್ಟವು 'ಮಧ್ಯಮ'ವಾಗಿದ್ದರೂ ಕೆಲವು ಪ್ರದೇಶಗಳಲ್ಲಿ 'ಅತ್ಯಂತ ಕಳಪೆ' ಹಂತ ತಲುಪಿದೆ.
ಇನ್ನು ಮಹಾನಗರದ ಬೆಳಗ್ಗೆ ಅಂಧೇರಿಯಲ್ಲಿ 346 AQI ತಲುಪಿದೆ. ನವಿ ಮುಂಬೈನಲ್ಲಿ AQI 311, ಮಜಗಾಂವ್ 307 AQI ಮುಟ್ಟಿದೆ ಎಂದು SAFAR ವರದಿ ವಿವರಿಸಿದೆ. ಇತ್ತರ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು ವೈಲ್ ಪಾರ್ಲೆ ವೆಸ್ಟ್ ನಂತಹ ಪ್ರದೇಶಗಳಲ್ಲಿ 331 AQI, ಚಕಲಾ ಅಂಧೇರಿ ಪೂರ್ವದಲ್ಲಿ 343 AQI ದಾಖಲಾಗಿದೆ ಎಂದು ತಿಳಿಸಿದೆ.

ರಾಷ್ಟ್ರ ರಾಜಧಾನಿ ದೆಹಲಿ ವಾಯುಗುಣಮಟ್ಟ ಹೀಗಿದೆ
ಸೋಮವಾರ ರಾತ್ರಿ ದೆಹಲಿಯಲ್ಲಿ ಮಳೆ ಆಗಿದೆ. ಈ ಸಂಬಂಧ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತುಸು ಸುಧಾರಿಸಿದೆ ಎನ್ನಲಾಗುತ್ತಿದೆ. ಇಂದು ಬೆಳಗ್ಗೆ 9 ಗಂಟೆಗೆ ಲೋಧಿ ರಸ್ತೆಯಲ್ಲಿ AQI 63 ರಷ್ಟು ಇತ್ತು. ದೆಹಲಿ ವಿಮಾನ ನಿಲ್ದಾಣ (T3) AQI 56 ದಾಖಲಿಸಿದರೆ, ದೆಹಲಿ ಐಐಟಿಯಲ್ಲಿ 45 AQI ಕಂಡು ಬಂದಿದೆ. ಇನ್ನೂ ನೋಯ್ಡಾ 37, ಮಥುರಾ ರಸ್ತೆ 27 AQI ನಲ್ಲಿರುವ ಕಾರಣ ಇಲ್ಲಿನ ಗಾಳಿಯನ್ನು 'ಉತ್ತಮ' ಗಾಳಿ ಕಂಡು ಬಂದಿದೆ. ಈ ಮೂಲಕ ದೆಹಲಿ ನಿವಾಸಿಗಳು ನಿಟ್ಟುಸಿರುವ ಬಿಡುವಂತಾಗಿದೆ.
ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ, ವಾಯುಮಾಲಿನ್ಯ ಕೆಡುವ ಹಾಟ್‌ಸ್ಪಾಟ್ ಪ್ರದೇಶಗಳಾದ ವಜೀರ್‌ಪುರ್, ಆರ್‌ಕೆ ಪುರಂ, ಜಹಾಂಗೀರ್‌ಪುರಿ, ರೋಹಿಣಿ ಪ್ರದೇಶಗಳಲ್ಲಿ ಕ್ರಮವಾಗಿ 155, 184, 171, 135 AQI ದಾಖಲಿಸುವ ಮೂಲಕ ಮಧ್ಯಮ ಗುಣಮಟ್ಟ ಗಾಳಿ ದಾಖಲಾಗಿದೆ.
ವಾಯು ಗುಣಮಟ್ಟ ಸೂಚ್ಯಂಕ ಮಾಪನ
ವಾಯು ಗುಣಮಟ್ಟ ಸೂಚ್ಯಂಕ (AQI) ಪ್ರಕಾರ '0 ಮತ್ತು 50 ರ ನಡುವಿನ ಗಾಳಿಯ ಗುಣಮಟ್ಟ ದಾಖಲಾಗಿದ್ದರೆ ಅದನ್ನು "ಉತ್ತಮ" ಎಂದು ಪರಿಗಣಿಸಲಾಗುತ್ತದೆ. ಇದು ಆರೋಗ್ಯಕರವಾದ ಗಾಳಿ ಎನ್ನಬಹುದು. ನಂತರ 51-100 ಎಕ್ಯೂಐ ಗಾಳಿಯನ್ನು "ತೃಪ್ತಿದಾಯಕ", 101-200 ಎಕ್ಯೂಐ ಗಾಳಿ "ಮಧ್ಯಮ", 201ರಿಂದ 300ವರೆಗಿನ ಎಕ್ಯೂಐ ಅನ್ನು 'ಕಳಪೆ' ಮತ್ತು 301ರಿಂದ 400 'ಅತ್ಯಂತ ಕಳಪೆ' ಹಾಗೂ 401ರಿಂದ 450 AQI 450 ಮೀರಿದಾಗ ತೀವ್ರ ಕಳಪೆ ವಾಯು ಗುಣಮಟ್ಟ ಎಂದು ಪರಿಗಣಿಸಲಾಗಿದೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ












Click it and Unblock the Notifications