ಭಾರತದ ಮೊದಲ ಹೈಸ್ಪೀಡ್‌ ರೈಲು; ಪ್ರಸ್ತುತ ಸ್ಥಿತಿ ಮಾಹಿತಿ ಕೊಟ್ಟ ಸಚಿವರು

ನವದೆಹಲಿ, ಏಪ್ರಿಲ್ 08; ಭಾರತದ ಮೊದಲ ಹೈಸ್ಪೀಡ್ ರೈಲು ಯೋಜನೆ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ಅದರಲ್ಲೂ ಕೋವಿಡ್ ಪರಿಸ್ಥಿತಿ ಬಳಿಕ ಯೋಜನೆ ಇನ್ನೂ ನಿಧಾನವಾಗಿ ಸಾಗುತ್ತಿದೆ. ರೈಲ್ವೆ ಸಚಿವ ಅಶ್ವಿನ್ ವೈಷ್ಣವ್‌ ಯೋಜನೆ ಬಗ್ಗೆ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು (ಎಂಎಹೆಚ್ಎಸ್ಆರ್) ಯೋಜನಾ ವೆಚ್ಚ 2015ರಂತೆ 1,08,000 ಕೋಟಿ. ಮಹಾರಾಷ್ಟ್ರದಲ್ಲಿ ಭೂ ಸ್ವಾಧೀನ ವಿಳಂಬವಾದ ಕಾರಣ ಯೋಜನೆ ಸಹ ವಿಳಂಬವಾಗುತ್ತಿದೆ ಎಂದು ಸಚಿವರು ಹೇಳಿದರು.

ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದೇ ಗುತ್ತಿಗೆ ಅಂತಿಮಗೊಳಿಸುವುದು ವಿಳಂಬವಾಯಿತು. ಕೋವಿಡ್ ಸಮಯದಲ್ಲಿನ ಪರಿಣಾಮವೂ ಯೋಜನೆ ವಿಳಂಬವಾಗಲು ಕಾರಣವಾಯಿತು ಎಂದು ಸಚಿವರು ಲೋಕಸಭೆಗೆ ವಿವರಣೆ ನೀಡಿದರು.

Mumbai Ahmedabad High Speed Rail Project Current Status

ಹೈಸ್ಪೀಡ್ ರೈಲು ಯೋಜನೆಗೆ 1248 ಹೆಕ್ಟೇರ್ ಭೂಮಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಇವುಗಳಲ್ಲಿ 1396 ಹೆಕ್ಟೇರ್ ಭೂಮಿ ಸ್ವಾಧೀನಗೊಂಡಿದೆ. ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಯೋಜನೆಯ ವೆಚ್ಚವು ಸಮಯಕ್ಕೆ ತಕ್ಕಂತೆ ಬದಲಾಗುವ ನಿರೀಕ್ಷೆ ಇದೆ.

ಎಲ್ಲಾ ಅನುಮತಿ ಪಡೆಯಲಾಗಿದೆ; ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಲೋಕಸಭೆಗೆ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಿದ್ದು, "ಯೋಜನೆಗೆ ಅಗತ್ಯವಿರುವ ಪರಿಸರ, ವನ್ಯಜೀವಿ, ಸಿಆರ್‌ಝೆಡ್ ಅನುಮತಿಯನ್ನು ನೀಡಲಾಗಿದೆ" ಎಂದು ಹೇಳಿದ್ದಾರೆ.

2015ರ ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರ ಭಾರತದ ಮೊದಲ ಹೈಸ್ಪೀಡ್ ರೈಲು ಯೋಜನೆ ಘೋಷಣೆ ಮಾಡಿತ್ತು. ಈ ಯೋಜನೆ ಜಪಾನ್‌ನ ತಾಂತ್ರಿಕ ಮತ್ತು ಹಣಕಾಸು ನೆರವು ಇದೆ. ಭಾರತ-ಜಪಾನ್ ನಡುವಿನ ಒಪ್ಪಂದಂತೆ ಜಪಾನ್ ಯೋಜನೆಯ ಶೇ 81ರಷ್ಟು ವೆಚ್ಚವನ್ನು ಭರಿಸಲಿದೆ.

ಯೋಜನೆಗೆ ಅಗತ್ಯವಿರುವ ಭೂಮಿಯಲ್ಲಿ ಮಹಾರಾಷ್ಟ್ರದಲ್ಲಿ 297.81 ಹೆಕ್ಟೇರ್ ಪಯಕಿ ಶೇ 68.65ರಷ್ಟು ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಗುಜರಾತ್‌ ರಾಜ್ಯದಲ್ಲಿ 954.28 ಹೆಕ್ಟೇರ್ ಭೂಮಿ ಅಗತ್ಯವಿದೆ ಇದರಲ್ಲಿ ಶೇ 98.76ರಷ್ಟು ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ.

ರಾಷ್ಟ್ರೀಯ ಹೈಸ್ಪೀಡ್ ರೈಲು ಕಾರ್ಪೊರೇಷನ್ 2019ರ ನವೆಂಬರ್‌ನಲ್ಲಿ ಹೈಸ್ಪೀಡ್ ರೈಲು ಯೋಜನೆಗೆ ಕರೆದಿದ್ದ ಟೆಂಡರ್ ರದ್ದುಗೊಳಿಸಿತ್ತು. ಮಹಾರಾಷ್ಟ್ರ ಸರ್ಕಾರ ನಿಗದಿತ ಅವಧಿಯಲ್ಲಿ ಭೂಮಿಯನ್ನು ನೀಡಲು ವಿಫಲವಾದ ಬಳಿಕ ಟೆಂಡರ್ ರದ್ದುಗೊಂಡಿತ್ತು.

ಭಾರತದ ಮೊದಲ ಹೈಸ್ಪೀಡ್ ರೈಲು ಯೋಜನೆ ಘೋಷಣೆಯಾಗಿ ಹಲವಾರು ವರ್ಷಗಳು ಕಳೆಯುತ್ತಾ ಬಂದರೂ ಕುಟುಂತ್ತಾ ಸಾಗಿದೆ. ಈ ಯೋಜನೆಯಲ್ಲಿ ರೈಲು 320 ಕಿ. ಮೀ. ವೇಗದಲ್ಲಿ ಸಂಚಾರ ನಡೆಸಲಿದೆ ಎಂದು ಅಂದಾಜಿಸಲಾಗಿದೆ.

508 ಕಿ. ಮೀ. ಸಂಚಾರ ನಡೆಸಲು 2 ಗಂಟೆಗಳ ಸಮಯ ಬೇಕು ಎಂದು ಅಂದಾಜಿಸಲಾಗಿದೆ. 2026ರಲ್ಲಿ ಯೋಜನೆ ಪೂರ್ಣಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಮೊದಲ ಹಂತದಲ್ಲಿ 63 ಕಿ. ಮೀ. ರೈಲು ಸಂಚಾರ ನಡೆಸಿ ಪರೀಕ್ಷಿಸಲಾಗುತ್ತದೆ.

ಮೊದಲ ಹಂತದ ಯೋಜನೆ ಪೂರ್ಣಗೊಳ್ಳುವ ಮೊದಲೇ ಕೇಂದ್ರ ಸರ್ಕಾರ ದೇಶದಲ್ಲಿ ಇನ್ನೂ ಕೆಲವು ಹೈ ಸ್ಪೀಡ್ ರೈಲು ಯೋಜನೆ ಆರಂಭಿಸಲು ತೀರ್ಮಾನಿಸಿದೆ. ಇದರಲ್ಲಿ ದೆಹಲಿ-ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆ ಸೇರಿದೆ.

ಈ ಯೋಜನೆ ಪೂರ್ಣಗೊಂಡರೆ ರಾಷ್ಟ್ರ ರಾಜಧಾನಿ ದೆಹಲಿಯಿಂದ ಗುಜರಾತ್ ರಾಜಧಾನಿ ಅಹಮದಾಬಾದ್‌ಗೆ ಸಂಚಾರ ನಡೆಸಲು 4 ಗಂಟೆಗಳ ಅವಧಿ ಬೇಕು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಉಭಯ ನಗರಗಳ ನಡುವಿನ ಸಂಚಾರದ ಅವಧಿ 14 ಗಂಟೆಗಳು.

ದೆಹಲಿ-ಅಹಮದಾಬಾದ್ ಬುಲೆಟ್ ರೈಲು ಯೋಜನೆ 875 ಕಿ. ಮೀ. ದೂರವನ್ನು ಒಳಗೊಂಡಿದೆ. ಇದರಲ್ಲಿ ರಾಜಸ್ಥಾನ ಶೇ 75ರಷ್ಟು ಹಳಿಯನ್ನು ಹಾಕಲಿದೆ. ಈ ರೈಲು ಮಾರ್ಗ 5 ನದಿಗಳ ಮೂಲಕ ಸಾಗಲಿದೆ.

ಯಾವ-ಯಾವ ಮಾರ್ಗದ ಸಮೀಕ್ಷೆ; ದೇಶದಲ್ಲಿ ವಾರಣಾಸಿ-ಹೌರಾ, ಮುಂಬೈ-ನಾಗ್ಪುರ, ದೆಹಲಿ-ಅಹಮದಾಬಾದ್‌, ಚೆನ್ನೈ-ಮೈಸೂರು, ದೆಹಲಿ-ಅಮೃತಸರ, ಮುಂಬೈ-ಹೈದರಾಬಾದ್ ಮಾರ್ಗದಲ್ಲಿ ಹೈಸ್ಪೀಡ್ ರೈಲು ಯೋಜನೆ ಜಾರಿಗೊಳಿಸಲು ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಸಮೀಕ್ಷೆ ಬಳಿಕ ಯೋಜನೆ ಡಿಪಿಆರ್ ತಯಾರು ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+