Mumbai-Ahmedabad Bullet Train: ಶೀಘ್ರದಲ್ಲೇ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಆರಂಭ: ಸಮಯ ಕಡಿತ
Mumbai-Ahmedabad Bullet Train: ದೇಶದಲ್ಲಿ ರೈಲ್ವೆ ವಿಭಾಗದಲ್ಲಿ ದೊಡ್ಡ ಮಟ್ಟದ ಕ್ರಾಂತಿಯೇ ಆಗುತ್ತಿದೆ. ಹಾಗೆಯೇ ಇದೀಗ ಇದೀಗ ಭಾರತದ ಮೊದಲ ಬುಲೆಟ್ ರೈಲು ಸೇವೆ ಶೀಘ್ರದಲ್ಲೇ ಆರಂಭ ಆಗಲಿದ್ದು, ಮುಂಬೈ-ಅಹಮದಾಬಾದ್ ನಡುವಿನ ಪ್ರಯಾಣ ಅವಧಿ 2 ಗಂಟೆ 7 ನಿಮಿಷಕ್ಕೆ ಕಡಿಮೆಯಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇಂದು (ಆಗಸ್ಟ್ 3) ಹೇಳಿದರು.
ಭಾವನಗರ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಅವರು ಅಯೋಧ್ಯಾ ಎಕ್ಸ್‌ಪ್ರೆಸ್‌ಗೆ ವರ್ಚುವಲ್ ಆಗಿ ಚಾಲನೆ ನೀಡಿ ಮಾತನಾಡಿದರು. ಇದೇ ವೇಳೆ ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಅವರು ರೇವಾ-ಪುಣೆ ಎಕ್ಸ್‌ಪ್ರೆಸ್ ಮತ್ತು ಛತ್ತೀಸ್‌ಗಡ ಸಿಎಂ ವಿಷ್ಣುದೇವ ಸಾಯಿ ಅವರು ಜಬಲ್ಪುರ-ರಾಯಪುರ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದರು.

ಬಳಿಕ ಮಾತನಾಡಿದ ಅಶ್ವಿವಿ ವೈಷ್ಣವ್ ಅವರು, ಮುಂಬೈ-ಅಹಮದಾಬಾದ್‌ಗೆ ಮೊದಲ ಬುಲೆಟ್ ರೈಲು ಶೀಘ್ರದಲ್ಲೇ ಆರಂಭ ಆಗಲಿದೆ. ಈ ಯೋಜನೆಯ ಕಾರ್ಯವು ವೇಗವಾಗಿ ನಡೆಯುತ್ತದೆ. ರೈಲು ಚಾಲನೆ ಪ್ರಾರಂಭ ಆದಾಗ ಎರಡೂ ನಗರಗಳ ಪ್ರಯಾಣದ ಅವಧಿ ಕೇವಲ 2 ಗಂಟೆ 7 ನಿಮಿಷ ಆಗಲಿದೆ ಎಂದು ತಿಳಿಸಿದರು.
ಈ ರೈಲು ಏನೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ?: ಬುಲೆಟ್ ರೈಲು, ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಿಂದ ಆರಂಭವಾಗಿ ಗುಜರಾತ್‌ನ ವಾಪಿ, ಸೂರತ್, ಆನಂದ್, ವಡೋದರಾ ಮಾರ್ಗವಾಗಿ ಸಂಚರಿಸಿ ಅಹಮದಾಬಾದ್ ಸಂಪರ್ಕಿಸುತ್ತದೆ. ಈ ಮಾರ್ಗವಾಗಿ 508 ಕಿಲೋ ಮೀಟರ್ ಸಂಚರಿಸುವ ಈ ರೈಲು ಪ್ರತಿ ಗಂಟೆಗೆ ಗರಿಷ್ಠ 320 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.
ಪೋರಬಂದರ್-ರಾಜಕೋಟ್ ನಡುವೆ ನೂತನ ರೈಲು ಸಂಚಾರ, ರಾಣಾವಾವ್ ನಿಲ್ದಾಣದಲ್ಲಿ 135 ಕೋಟಿ ರೂಪಾಯಿ ವೆಚ್ಚದ ಕೋಚ್ ನಿರ್ವಹಣೆ ಸೌಲಭ್ಯ, ಪೋರಬಂದರ್ ನಗರದಲ್ಲಿ ರೈಲ್ವೆ ಫ್ಲೈಓವರ್ ನಿರ್ಮಾಣ, ಎರಡು ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳು ಮತ್ತು ಭಾವನಗರದಲ್ಲಿ ತಲೆಯೆತ್ತಲಿರುವ ಬಂದರಿನಲ್ಲಿ ಕಂಟೇನರ್ ಟರ್ಮಿನಲ್ ಸೇರಿದಂತೆ ಗುಜರಾತ್‌ನಲ್ಲಿ ಮಂಬರುವ ರೈಲ್ವೆ ಯೋಜನೆಗಳ ಕುರಿತು ವಿವರಿಸಿದರು.
ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡಗಳಲ್ಲಿಯೂ ಹಲವು ನೂತನ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇವೆರಡೂ ರಾಜ್ಯಗಳಲ್ಲಿನ ಡಬಲ್-ಇಂಜಿನ್ ಸರ್ಕಾರಗಳಿ ಯೋಜನೆಗಳ ತ್ವರಿತ ಪ್ರಗತಿಯನ್ನು ಸಾಧ್ಯ ಆಗಿಸಿವೆ ಎಂದರು. ನರೇಂದ್ರ ಮೋದಿ ಸರ್ಕಾರದ 11 ವರ್ಷಗಳಲ್ಲಿ 34,000 ಕಿಲೋ ಮೀಟರ್ ನೂತನ ರೈಲ್ವೆ ಮಾರ್ಗಗಳು ಮತ್ತು ದೇಶದಲ್ಲಿ ಪ್ರತಿ ದಿನ 12 ಕಿ.ಮೀ. ಹೊಸ ರೈಲು ಮಾರ್ಗಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನು ದೇಶದಲ್ಲಿ 1,300 ರೈಲು ನಿಲ್ದಾಣಗಳನ್ನು ಪುನರ್‌ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಹೇಳಿದರು.
ಹೀಗೆ ದೇಶದಲ್ಲಿ ರೈಲ್ವೆಯಲ್ಲಿ ದೊಟ್ಟ ಮಟ್ಟದ ಕ್ರಾಂತಿ ಆಗುತ್ತಿದೆ. ಇದೀಗ ಬುಲೆಟ್ ರೈಲು ಆರಂಭ ಆದರೆ, ಮತ್ತಷ್ಟು ಅಭಿವೃದ್ಧಿಗಳು ಆಗಲಿವೆ. ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ಹಲವು ಅಭಿವೃದ್ಧಿ ಯೋಜನೆಗಳು ಸಹ ಆಗಲಿದ್ದು, ಭೂಮಿ ಬೆಲೆ ಗಗನಕ್ಕೇರುವುದರಲ್ಲಿ ಎರಡು ಮಾತಿಲ್ಲ. ಆರ್ಥಿಕತೆ, ಪ್ರವಾಸೋದ್ಯ ಕ್ಷೇತ್ರದಿಂದ ಹಿಡಿದು ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಕ್ರಾಂತಿಯಾಗಲಿದೆ.












Click it and Unblock the Notifications