Delhi Fire: ದೆಹಲಿಯ ಕೋಚಿಂಗ್ ಸೆಂಟರ್‌ನಲ್ಲಿ ಬೆಂಕಿ, ಕಿಟಕಿಯಿಂದ ಜಿಗಿದ ವಿದ್ಯಾರ್ಥಿಗಳು
ದೆಹಲಿ ಜೂನ್ 15: ದೆಹಲಿಯ ಮುಖರ್ಜಿ ನಗರದಲ್ಲಿರುವ ಕೋಚಿಂಗ್ ಸೆಂಟರ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಹಗ್ಗದ ಸಹಾಯದಿಂದ ವಿದ್ಯಾರ್ಥಿಗಳನ್ನು ಹೊರತೆಗೆಯಲಾಗುತ್ತಿದೆ. ಹಲವು ವಿದ್ಯಾರ್ಥಿಗಳು ಒಳಗೆ ಸಿಲುಕಿರುವ ಆತಂಕವಿದ್ದು, 11 ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆಯನ್ನು ನಡೆಸಿವೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಜನರಲ್ಲಿ ಆತಂಕ ಮನೆ ಮಾಡಿದೆ.
#WATCH | People escape using wires as fire breaks out in a building located in Delhi's Mukherjee Nagar; 11 fire tenders rushed to the site, rescue operation underway
— ANI (@ANI) June 15, 2023
(Source: Delhi Fire Department) pic.twitter.com/1AYVRojvxI
ಕೆಲ ವಿದ್ಯಾರ್ಥಿಗಳು ಗಾಯಗೊಂಡಿರುವ ಸುದ್ದಿಯೂ ಮುನ್ನೆಲೆಗೆ ಬರುತ್ತಿದೆ. ಬಾತ್ರಾ ಚಿತ್ರಮಂದಿರದ ಬಳಿಯ ಜ್ಞಾನ ಬಿಲ್ಡಿಂಗ್ ಬಳಿ ಈ ಘಟನೆ ನಡೆದಿದೆ. ಮೂರನೇ ಮಹಡಿಯಿಂದ ಕೆಳಗಿಳಿಯುವಾಗ ಕೆಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ವೈರಲ್ ಆಗಿರುವ ವೀಡಿಯೊದಲ್ಲಿ, ಶಿಕ್ಷಣ ಸಂಸ್ಥೆಯಲ್ಲಿ ಬೆಂಕಿಯಿಂದ ಆವರಿಸಿದ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಜೊತೆಗೆ ವಿದ್ಯಾರ್ಥಿಗಳು ಹಗ್ಗಗಳನ್ನು ಬಳಸಿ ಕಟ್ಟದದಿಂದ ಇಳಿಯುವುದನ್ನು ಕಾಣಬಹುದು. ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಧ್ಯಾಹ್ನ 12.27 ಕ್ಕೆ ಬೆಂಕಿಯ ಬಗ್ಗೆ ಕರೆ ಬಂದಿದ್ದು, ಒಟ್ಟು 11 ಅಗ್ನಿಶಾಮಕ ಟೆಂಡರ್‌ಗಳನ್ನು ಸೇವೆಗೆ ಕಳುಹಿಸಲಾಗಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಯ ನಿರ್ದೇಶಕ ಅತುಲ್ ಗಾರ್ಗ್ ತಿಳಿಸಿದ್ದಾರೆ.
"ವಿದ್ಯುತ್ ಮೀಟರ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಮತ್ತು ಈಗ ಅದನ್ನು ನಂದಿಸಲಾಗಿದೆ. ಘಟನೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಬೆಂಕಿಯು ಅಷ್ಟು ದೊಡ್ಡದಾಗಿರಲಿಲ್ಲ" ಎಂದು ಅಗ್ನಿಶಾಮಕ ನಿರ್ದೇಶಕ ಅತುಲ್ ಗಾರ್ಗ್ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
"ಇಂದು ಬೆಂಕಿ ಹೊತ್ತಿಕೊಂಡ ಕಟ್ಟಡದಿಂದ ತಪ್ಪಿಸಿಕೊಳ್ಳುವಾಗ ಕೆಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಯಾವುದೇ ವ್ಯಕ್ತಿ ಕಟ್ಟಡದಲ್ಲಿ ಸಿಲುಕಿಕೊಂಡಿಲ್ಲ. ಕಟ್ಟಡದ ವಿದ್ಯುತ್ ಮೀಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೊಗೆ ಹೆಚ್ಚಾಗಿದ್ದರಿಂದ ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ" ದೆಹಲಿ ಪೊಲೀಸರು ANI ಗೆ ತಿಳಿಸಿದ್ದಾರೆ.












Click it and Unblock the Notifications