ಸಂಸದರ ವೇತನ ಶೇ 100ರಷ್ಟು ಹೆಚ್ಚಳಕ್ಕೆ ತೀರ್ಮಾನ!

ನವದೆಹಲಿ, ನವೆಂಬರ್ 2: ಸಂಸದರಿಗೆ ಶೀಘ್ರದಲ್ಲೇ ಶೇ ನೂರರಷ್ಟು ವೇತನ ಹೆಚ್ಚಳವಾಗಲಿದೆ. ಎಲ್ಲ ಸಂಸದರಿಗೂ ಶೇ ನೂರರಷ್ಟು ವೇತನ ಹೆಚ್ಚಳ ಮಾಡಾಲು ಕೇಂದ್ರ ತೀರ್ಮಾನಿಸಿದೆ. ಆ ಮೂಲಕ ಸಂಸದರ ಮೂಲ ವೇತನವು ಐವತ್ತು ಸಾವಿರದಿಂದ ಒಂದು ಲಕ್ಷಕ್ಕೆ ಏರುತ್ತದೆ.

ಬಿಜೆಪಿ ನಾಯಕ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ರಚಿಸಿದ್ದ ಜಂಟಿ ಸಮಿತಿಯು ಮಾಡಿದ ಸಂಸದರ ವೇತನ ಹೆಚ್ಚಳದ ಶಿಫಾರಸಿಗೆ ಪ್ರಧಾನಮಂತ್ರಿ ಕಚೇರಿ ಒಪ್ಪಿಗೆ ಸೂಚಿಸಿದೆ. ಇದೇ ವೇಳೆ ಇತರ ಭತ್ಯೆಗಳ ಪರಿಷ್ಕರಣೆಗೆ ಒಪ್ಪಿಗೆ ಸಿಕ್ಕಿದೆ. ಸರಕಾರವು ರಾಷ್ಟ್ರಪತಿಗಳ ವೇತನ ಹೆಚ್ಚಳದ ಪ್ರಸ್ತಾವವನ್ನು ಮಾಡಿದೆ. ಆ ಮೂಲಕ ರಾಷ್ಟ್ರಪತಿಗಳ ವೇತನವು ತಿಂಗಳಿಗೆ 1.5 ಲಕ್ಷ ರುಪಾಯಿಯಿಂದ 5 ಲಕ್ಷಕ್ಕೆ ಏರಿಕೆಯಾಗಲಿದೆ.[ರಾಷ್ಟ್ರಪತಿ ವೇತನ ಮೂರು ಪಟ್ಟು ಹೆಚ್ಚಿಸಲು ಪ್ರಸ್ತಾವ]

MPs to get 100 pre cent hike in salary

ಇನ್ನು ಉಪರಾಷ್ಟ್ರಪತಿಗೆ ಸದ್ಯ 1.25 ಲಕ್ಷ ವೇತನ ಇದ್ದು, 3.5 ಲಕ್ಷಕ್ಕೆ ಹೆಚ್ಚಿಸಲಾಗುವುದು. ರಾಜ್ಯಪಾಲರ ವೇತನ ಕೂಡ 1.10 ಲಕ್ಷದಿಂದ 2.5 ಲಕ್ಷಕ್ಕೆ ಹೆಚ್ಚಳವಾಗಲಿದೆ. ಸಂಪುಟದ ಒಪ್ಪಿಗೆ ಪಡೆದ ನಂತರ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಕರಡು ಮಂಡನೆ ಮಾಡಲಾಗುತ್ತದೆ. 2008ರಲ್ಲಿ ರಾಷ್ಟ್ರಪತಿ, ಉಪ ರಾಷ್ಟ್ರಪತಿ ವೇತನ ಹೆಚ್ಚಳ ಮಾಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+