₹5,00,000 ವರದಕ್ಷಿಣೆ ನೀಡದಿದ್ದಕ್ಕೆ ಸೊಸೆಗೇ ಹಾವು ಕಚ್ಚಿಸಿದ ಕ್ರೂರಿ ಅತ್ತೆ-ಮಾವ: ಮುಂದೇನಾಯ್ತು?
ಕಾಲ ಬದಲಾದಂತೆ ಜನರು ಕೂಡ ಬದಲಾಗುತ್ತರೆ ಎನ್ನುವ ರೀತಿಯಲ್ಲಿ ವರದಕ್ಷಿಣೆ ನೀಡುವ ಪದ್ಧತಿ ಕೂಡ ಕೊನೆಗೊಂಡಿದೆ. ಆದರೂ, ಅಲ್ಲೊಂದು ಇಲ್ಲೊಂದು ಇಂತಹ ಪ್ರಕರಣಗಳು ದಾಖಲಾಗುತ್ತಿವೆ. ಈ ನಡುವೆಯೇ ಇದೀಗ ವಿಚಿತ್ರ ಎಂಬಂತೆ ಇದೇ ವಿಚಾರಕ್ಕೆ ತಂದೆ-ತಾಯಿ ಸ್ಥಾನದಲ್ಲಿರಬೇಕಾದ ಅತ್ತೆ-ಮಾವ ಸೊಸೆಗೆ ಹಾವು ಕಚ್ಚಿಸಿದ ಕ್ರೂರ ಘಟನೆ ನಡೆದಿದೆ. ಹಾಗಾದ್ರೆ ಎಲ್ಲಿ ಹಾಗೂ ಎಷ್ಟು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾನ್ಯವಾಗಿ ವರದಕ್ಷಿಣೆ-ವಧುದಕ್ಷಿಣೆ ಎರಡು ಕೂಡ ಕಾನೂನಿನ ಪ್ರಕಾರ ತಪ್ಪು, ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ. ಆದರೂ ಕೆಲವೆಡೆ ಕಾನೂನು ಉಲ್ಲಂಘಟನೆ ಮಾಡಿ ಇವೆರಡನ್ನೂ ಕೂಡ ಮುಂದುವರೆಸಿದ್ದು, ಇದನ್ನೇ ಬಂಡವಾಳ ಮಾಡಿಕೊಂಡುಬಿಟ್ಟಿದ್ದಾರೆ. ಇದೀಗ ವರದಕ್ಷಿಣೆಗಾಗಗಿ ಅತ್ತೆ-ಮಾವ ಸೇರಿ ಸೊಸೆಗೆ ಹಾವು ಕಚ್ಚಿಸಿದ ವಿಚಿತ್ರ ಘಟನೆ ನಡೆದಿದೆ.

ವರದಕ್ಷಿಣೆ ನೀಡದ ಕಾರಣ ಇಟ್ಟುಕೊಂಡು ಸೊಸೆಯನ್ನು ಕೂಡಿಹಾಕಿ ಹಾವಿನಿಂದ ಕಚ್ಚಿಸಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ವರದಕ್ಷಿಣೆ ನೀಡದ ಹಿನ್ನೆಲೆ ಕೋಪಗೊಂಡ ಅತ್ತೆ, ಮಾವ ನವವಿವಾಹಿತ ಮಹಿಳೆಯನ್ನು ಕೋಣೆಯೊಳಗೆ ಕೂಡಿಹಾಕಿದ್ದಾರೆ. ಬಳಿಕ ಅಲ್ಲಿ ಅವರು ಹಾವು ಬಿಟ್ಟಿದ್ದು, ಅದು ಕಚ್ಚಿದ ನಂತರ ಸೊನೆಯ ಸ್ಥಿತಿ ಗಂಭೀರ ಆಗಿತ್ತು. ಆದರೆ, ಆ ಕುಟುಂಬವು ಅವಳನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನವನ್ನು ಕೂಡ ಮಾಡಲಿಲ್ಲ. ಈ ಮೂಲಕ ತಮ್ಮ ಕ್ರೂರತೆ ಮೆರೆದರು.
ಆಕೆಯ ಸಹೋದರಿ ಮಧ್ಯಪ್ರವೇಶಿಸಿದ ನಂತರ ಆಕೆಯನ್ನು ಕೊನೆಗೆ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು. ಈ ಘಟನೆ ಸೆಪ್ಟೆಂಬರ್ 18ರಂದು ಕಾನ್ಪುರ ನಗರದ ಕರ್ನಲ್ ಗಂಜ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ರೇಷ್ಮಾ ಎಂಬಾಕೆ ಹಾವು ಕಚ್ಚಿಕೊಂಡ ಮಹಿಳೆ. ರೇಷ್ಮಾಳನ್ನು ಕೋಣೆಯಲ್ಲಿ ಕೂಡಿಹಾಕಿ ತಡರಾತ್ರಿ ಹಾವನ್ನು ತಂದು ಬಿಡಲಾಯಿತು. ಈ ವೇಳೆ ಹಾವು ರೇಷ್ಮಾಳ ಕಾಲಿಗೆ ಕಚ್ಚಿತು ಎಂದು ಮಹಿಳೆಯ ಸಹೋದರಿ ರಿಜ್ವಾನಾ ಹೇಳಿದ್ದಾರೆ ಎಂದು ವರದಿಯಾಗಿದೆ.
ಹಾವು ಕಡಿದ ತಕ್ಷಣವೇ ರೇಷ್ಮಾ ರಿಜ್ವಾನಾಳನ್ನು ಫೋನ್ ಮೂಲಕ ಸಂಪರ್ಕಿಸುವಲ್ಲಿ ಯಶಸ್ವಿ ಆದರು. ಆಗ ರಿಜ್ವಾನಾ ಅವರು ಸ್ಥಳಕ್ಕೆ ತಲುಪಿದಾಗ ರೇಷ್ಮಾ ಅವರು ಗಂಭೀರ ಸ್ಥಿತಿಯಲ್ಲಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ದಾಖಲು ಮಾಡಲಾಯಿತು ಎಂದು ವರದಿಯಾಗಿದೆ.
ಮಾರ್ಚ್ 19, 2021ರಂದು ಶಹನವಾಜ್ ಅವರನ್ನು ರೇಷ್ಮಾ ವಿವಾಹವಾದ ಸ್ವಲ್ಪ ಸಮಯದ ಬಳಿಕ ಸಮಸ್ಯೆಗಳು ಪ್ರಾರಂಭ ಆದವು ಎಂದು ರಿಜ್ವಾನಾ ಹೇಳಿದರು. ಮದುವೆ ಆದಾಗಿನಿಂದಲೂ ಅತ್ತೆ-ಮಾವಂದಿರು ವರದಕ್ಷಿಣೆಗಾಗಿ ಅವಳನ್ನು ನಿಂದಿಸಲು ಮತ್ತು ಕಿರುಕುಳ ನೀಡಲು ಪ್ರಾರಂಭಿಸಿದರು. ಸ್ವಲ್ಪ ಸಮಯದ ಹಿಂದೆ, ಮಹಿಳೆಯ ಕುಟುಂಬವು 1.5 ಲಕ್ಷ ರೂಪಾಯಿಗಳನ್ನು ನೀಡಿತ್ತು.
ಆದರೆ ಹೆಚ್ಚುವರಿ 5,00,000 ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿತ್ತು. ಈ ಬೇಡಿಕೆ ಈಡೇರದ ಕಾರಣ ಹೀಗೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ರಿಜ್ವಾನಾ ಅವರ ದೂರಿನ ಆಧಾರದ ಮೇಲೆ ಪೊಲೀಸರು ಶಹನವಾಜ್, ಅವರ ಪೋಷಕರು, ಅಣ್ಣ, ಸಹೋದರಿ ಮತ್ತು ಇತರ ಮೂವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇಂತಹ ಪ್ರಕರಣಗಳು ಇದೇ ಮೊದಲೇನಲ್ಲ, ಈ ಹಿಂದೆಯೂ ಸಹ ನಡೆದಿರುವ ಉದಾಹರಣೆಗಳಿವೆ. ಆದರೆ, ಹೀಗೆ ಮಾಡುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಲಿದೆ. ಹೆಣ್ಣು ತನ್ನ ಕುಟುಂಬವನ್ನೆಲ್ಲಾ ತ್ಯಜಿಸಿ ಗಂಡನ ಮನೆಗೆ ಬಂದಿರುತ್ತಾಳೆ. ಅವಳನ್ನು ಮಗಳಂತೆ ಕಾಣುವುದು ಅತ್ತೆ-ಮಾವಂದಿರ ಜವಾಬ್ದಾರಿಯಾಗಿರುತ್ತದೆ. ಆದರೆ, ಕೆಲವರು ಇದನ್ನು ಮರೆತು ಮೃಗರಂತೆ ವರ್ತನೆ ಮಾಡುತ್ತಿರುವುದು ನಿಜಕ್ಕೂ ಅಸಹ್ಯವೇ ಸರಿ.












Click it and Unblock the Notifications