ಅಮೃತಸರ: ನಿಗೂಢವಾಗಿ ತಾಯಿ ಮಗಳು ಸಜೀವ ದಹನ
ಅಮೃತಸರ, ಫೆಬ್ರವರಿ 08: ತಾಯಿ ಮತ್ತು ಮಗಳು ತಮ್ಮ ಮನೆಯಲ್ಲಿ ಸಜೀವವಾಗಿ ಬೆಂಕಿಗೆ ಆಹುತಿಯಾದ ಘಟನೆ ಪಂಜಾಬಿನ ಅಮೃತಸರದ ದರ್ಶನ್ ಅವೆನ್ಯೂವಿನಲ್ಲಿ ನಡೆದಿದೆ.
ತಾಯಿ ಮತ್ತು ಮಗಳ ದೇಹವನ್ನು ಅವರ ಮನೆಯಿಂದ ಹೊರತೆಗೆಯಲಾಗಿದ್ದು, ಘಟನೆಗೆ ಕಾರಣ ತಿಳಿದುಬಂದಿಲ್ಲ. ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡು ಅನುಮಾನ ಬಂದ ನೆರೆ ಹೊರೆಯವರು ಮನೆಯೊಳಗೆ ಬಂದು ನೋಡಿದಾಗ , ಮನೆಯಲ್ಲಿದ್ದ ತಾಯಿ-ಮಗಳು ಇಬ್ಬರೂ ಮೃತರಾಗಿದ್ದರು.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಇದು ಸಿಲಿಂಡರ್ ಸ್ಫೋಟದಿಂದಾಗಿದ್ದರೆ ಕಡೇಪಕ್ಷ ಅಕ್ಕಪಕ್ಕದ ಮನೆಯವರಿಗಾದರೂ ತಿಳಿಯುತ್ತಿತ್ತು. ಆದರೆ ಯಾರ ಗಮನಕ್ಕೂ ಬಾರದೆ, ಇಬ್ಬರೂ ಸಜೀವ ದಹನವಾಗಿರುವುದು ಅಚ್ಚರಿ ಮೂಡಿಸಿದೆ.












Click it and Unblock the Notifications