ಭೂ ಹಗರಣ : ವಾದ್ರಾ ವಿರುದ್ಧ ಸಿಬಿಐನಿಂದ 18 ಎಫ್‌ಐಆರ್

ಜೈಪುರ, ಆಗಸ್ಟ್ 31 : ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ವಿರುದ್ಧ ಸಿಬಿಐ 18 ಎಫ್‌ಐಆರ್ ದಾಖಲು ಮಾಡಿದೆ. ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೊದಲು ರಾಜಸ್ಥಾನ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದರು.

ವಾದ್ರಾ ಒಡೆತನದ ಕಂಪನಿಯಿಂದ ರಾಜಸ್ಥಾನದ ಬಿಕನೇರ್‌ನಲ್ಲಿ ಅಕ್ರಮ ಭೂ ಸ್ವಾಧೀನ ಹಾಗೂ ಪರಭಾರೆಗೆ ಸಂಬಂಧಿಸಿದಂತೆ ಬುಧವಾರ 18 ಎಫ್‌ಐಆರ್ ದಾಖಲು ಮಾಡಲಾಗಿದೆ. ಮೊದಲು ಈ ಪ್ರಕರಣದ ತನಿಖೆಯನ್ನು ರಾಜಸ್ಥಾನ ಪೊಲೀಸರು ನಡೆಸುತ್ತಿದ್ದರು. ನಂತರ ಸಿಬಿಐಗೆ ಹಸ್ತಾಂತರ ಮಾಡಲಾಗಿದೆ.

robert vadra

ರಾಜಸ್ಥಾನ ಗೃಹ ಸಚಿವ ಗುಲಾಬ್ ಚಂದ್ ಕಠಾರಿಯಾ ಅವರು ಈ ಕುರಿತು ಹೇಳಿಕೆ ನೀಡಿದ್ದು, '4 ಎಫ್ಐಆರ್‌ಗಳನ್ನು ಸ್ಕೈ ಲೈಟ್ ಹಾಸ್ಪೆಲಿಟಿ ಮೇಲೆ ದಾಖಲು ಮಾಡಲಾಗಿದೆ. ಈ ನಾಲ್ಕು ಎಫ್‌ಐಆರ್‌ ಗಳು 275 ಎಕರೆ ಭುಮಿಯನ್ನು ಅಕ್ರಮವಾಗಿ ಖರೀದಿ ಮಾಡಿದ ಆರೋಪಕ್ಕೆ ಸಂಬಂಧಿಸಿದವು' ಎಂದು ಹೇಳಿದ್ದಾರೆ.

1,400 ಎಕರೆ ಭೂಮಿಯನ್ನು ನಕಲಿ ಹೆಸರಿನಲ್ಲಿ ಖರೀದಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆಯೂ ಉಳಿದ ಎಫ್‌ಐಆರ್ ದಾಖಲಾಗಿದೆ. ಮೂರನೇ ವ್ಯಕ್ತಿಯಾಗಿ ವಾದ್ರಾ 275 ಎಕರೆ ಭೂಮಿಯನ್ನು 2010ರಲ್ಲಿ ಖರೀದಿ ಮಾಡಿದ್ದರು. 2012ರಲ್ಲಿ ಅಕ್ರಮವಾಗಿ ಅದನ್ನು ಮಾರಾಟ ಮಾಡಿದ್ದಾರೆ ಎಂಬುದು ಆರೋಪವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+