ಪಾರದರ್ಶಕ ಆಡಳಿತಕ್ಕೆ ಕೇಂದ್ರ ಇಂಧನ ಇಲಾಖೆಯಿಂದ 'ತರಂಗ್' ಆ್ಯಪ್
ನವದೆಹಲಿ, ಆಗಸ್ಟ್ 14: ಆರ್.ಟಿ.ಐ ಗಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕೇಂದ್ರ ಇಂಧನ, ಕಲ್ಲಿದ್ದಲು, ನವ ಮತ್ತು ಮರು ಬಳಕೆಯ ಇಂಧನ ಮತ್ತು ಗಣಿ ಇಲಾಖೆ ಹೊಸ ಆ್ಯಪ್ 'ತರಂಗ್' ಬಿಡುಗಡೆ ಮಾಡಿದೆ.
ಆರ್.ಟಿ.ಐ ಮೂಲಕ ಮಾಹಿತಿ ಪಡೆಯುವ ಪ್ರಕ್ರಿಯೆ ಸಾಮಾನ್ಯ ಜನರಿಗೆ ಅರಿವಿಲ್ಲದೆ ಇರಬಹುದು. ಅಂಥವರು ಸರಕಾರಿ ಕಾರ್ಯಕ್ರಮಗಳ ಬಗ್ಗೆ, ಅವುಗಳ ಅನುಷ್ಠಾನದಲ್ಲಾಗುತ್ತಿರುವ ಪ್ರಗತಿಯ ಬಗ್ಗೆ ನೇರವಾಗಿ ಈ ಆ್ಯಪ್ ನಲ್ಲೇ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನದ ಮೇರೆಗೆ ಈ ಆ್ಯಪ್ ನ್ನು ಹೊರ ತರಲಾಗಿದೆ. ಈ ಕುರಿತು ಕೇಂದ್ರ ಇಂಧನ ಸಚಿವರಾದ ಪಿಯೂಷ್ ಗೋಯಲ್ ಪತ್ರವೊಂದನ್ನು ಬರೆದಿದ್ದಾರೆ. ಆ ಪತ್ರವನ್ನು ಇಲ್ಲಿ ಓದಬಹುದು.
ಆ್ಯಪ್ ಡೌನ್ಲೋಡ್ ಮಾಡಲು ಈ ಇ-ಮೇಲ್ ಗೆ ಮನವಿ ಸಲ್ಲಿಸಬಹುದು. ಅಥವಾ ಈ ಲಿಂಕ್ ನಿಂದ ಪಡೆಯಬಹುದು. ಇದಲ್ಲದೆ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಲು 1800 200 3004, 9220036666 ಸಂಖ್ಯೆಗೆ ಮಿಸ್ ಕಾಲ್ ಕೂಡ ನೀಡಬಹುದು.












Click it and Unblock the Notifications