Morbi bridge : ಗುಜರಾತ್‌ ಮೊರ್ಬಿ ಸೇತುವೆ ದುರಂತ: 60 ಸಾವು, 100ಕ್ಕೂ ಹೆಚ್ಚು ಜನ ನೀರುಪಾಲು?

ಮೊರ್ಬಿ, ಅಕ್ಟೋಬರ್ 30: ಗುಜರಾತ್‌ನ ಮೊರ್ಬಿ ತೂಗು ಸೇತುವೆ ಕುಸಿದ ಪರಿಣಾಮ ಆಗಿರುವ ಸಾವುನೋವುಗಳ ಸಂಖ್ಯೆ ಹೊರಬರುತ್ತಿದ್ದು, ಸದ್ಯಕ್ಕೆ 60 ಮಂದಿ ಮೃತಪಟ್ಟಿದ್ದಾರೆ ಮತ್ತು ನೂರಕ್ಕೂ ಹೆಚ್ಚು ಜನ ನೀರಿನಲ್ಲಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ನಡೆದಾಗ ಸೇತುವೆ ಮೇಲೆ ಸುಮಾರು 500 ಮಂದಿ ಇದ್ದರು ಎಂದು ತಿಳಿದುಬಂದಿದೆ.

ಮೊರ್ಬಿ ಪಟ್ಟಣದಲ್ಲಿ ಕಂಗೊಳಿಸುತ್ತಿದ್ದ ಕೇಬಲ್ ಬ್ರಿಡ್ಜ್ ಬಹುತೇಕ ಮುಳುಗಿದೆ. ನೂರಾರು ಮಂದಿ ನೀರಿನಲ್ಲಿ ಮುಳಗಿ ಹೋಗಿದ್ದಾರೆ. ಕೆಲವರು ಬ್ರಿಡ್ಜ್ ಕೇಬಲ್ ಹಿಡಿದು ಬದುಕಲು ಪ್ರಯತ್ನಿಸುತ್ತಿರುವ ಮನಕಲಕುವ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ನೀರುಪಾಲಾದ ಜನರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ.

ಈ ಮೊರ್ಬಿ ಸೇತುವೆ 2001ರಿಂದ ಸಾಕಷ್ಟು ಹಾಳಾಗಿತ್ತು ಎನ್ನಲಾಗಿದೆ. ಸ್ಥಳೀಯ ನಾಗರಿಕ ಸಂಸ್ಥೆಗಳು ಆಗಾಗ ಸೇತುವೆಯನ್ನು ದುರಸ್ತಿ ಮಾಡುತ್ತಲೇ ಬಂದಿತ್ತು. ಇದರಿಂದಾಗಿ ಸೇತುವೆಯನ್ನು ದುರಸ್ತಿ ಮಾಡಿ ಐದು ದಿನಗಳ ಹಿಂದಷ್ಟೆ ಉದ್ಘಾಟನೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇದನ್ನು ನೋಡಲು ಹೆಚ್ಚಿನ ಜನ ಸೇರಿದ್ದರು ಎಂದು ಗೊತ್ತಾಗಿದೆ.

Morbi bridge collapse in Gujarat: 35 dead 100 Feared Trapped suspected

ಘಟನೆ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ನೀರಿಗೆ ಬಿದ್ದವರ ರಕ್ಷಣೆಗೆ ಕೂಡಲೇ ರಕ್ಷಣಾ ತಂಡಗಳನ್ನು ರವಾನಿಸುವಂತೆ ಗುಜರಾತ್ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಅಧಿಕಾರಿಗಳ ಜತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಇತ್ತ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ರಕ್ಷಣಾ ತಂಡ ಕಳಿಸಲು ಅಧಿಕಾರಿಗಳಿಗೆ ಸೂಚಿಸುವ ಜೊತೆಗೆ ಗಾಯಗೊಂಡವರಿಗೆ ತಕ್ಷಣವೇ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದ್ದಾರೆ. ಘಟನೆಯನ್ನು ಮೇಲ್ವೀಚಾರಣೆ ಮಾಡುವಂತೆ ಪಟೇಲ್‌ ಅವರಿಗೆ ಪ್ರಧಾನಿ ನಿರ್ದೇಶಿಸಿದ್ದಾರೆ.

ಎನ್‌ಡಿಆರ್‌ಎಫ್‌ ತಂಡಗಳು:

ಗುಜರಾತಿನ ಮೊರ್ಬಿ ನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ ತೂಗುಸೇತುವೆ ಕುಸಿದು ಹಲವರು ಮಚ್ಚು ನದಿಗೆ ಬಿದ್ದ ನಂತರ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ಗಾಂಧಿನಗರದಿಂದ ಎರಡು ಮತ್ತು ಬರೋಡಾದಿಂದ 3 ಎನ್‌ಡಿಆರ್‌ಎಫ್ ತಂಡಗಳನ್ನು ಈಗಾಗಲೇ ರವಾನಿಸಲಾಗಿದೆ ಎಂದು ಎನ್‌ಡಿಆರ್‌ಎಫ್ ಡಿಜಿ ಅತುಲ್ ಕರ್ವಾಲ್ ಹೇಳಿಕೆ ನೀಡಿದ್ದಾರೆ.

ಮೃತ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ

"ಮೋರ್ಬಿ ಕೇಬಲ್ ಸೇತುವೆ ಕುಸಿತ ದುರಂತದಲ್ಲಿ ಪ್ರಾಣ ಕಳೆದುಕೊಂಡ ನಾಗರಿಕರ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ರಾಜ್ಯ ಸರ್ಕಾರವು ಮೃತರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿಗಳನ್ನು ನೀಡಲಿದೆ," ಎಂದು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಟ್ವೀಟ್ ಮಾಡಿದ್ದಾರೆ.

ಈ ಮಧ್ಯೆ ಘಟನೆ ಕುರಿತು ಪ್ರತಿಕ್ರಿಯಿಸಿರುವ ಗುಜರಾತ್ ಗೃಹ ಸಚಿವ ಹರ್ಷ ಸಂಘವಿ, "ಮೊರ್ಬಿ ಕೇಬಲ್ ಸೇತುವೆ ಕುಸಿತ ಪ್ರಕರಣದಲ್ಲಿ 7 ಮಂದಿ ಮಾತ್ರ ಮೃತಪಟ್ಟಿರುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ," ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+