ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ ಸಂಸತ್ ಮುಂಗಾರು ಅಧಿವೇಶನ
ನವದೆಹಲಿ, ಆಗಸ್ಟ್ 17 : ಕೋವಿಡ್ ಸೋಂಕಿನ ಭೀತಿಯ ನಡುವೆಯೇ ಸಂಸತ್‌ನ ಮಳೆಗಾಲದ ಅಧಿವೇಶನ ಆರಂಭವಾಗಲಿದೆ. ಸಂಸದರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಇದೇ ಮೊದಲ ಬಾರಿಗೆ ಅಧಿವೇಶನದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗುತ್ತಿದೆ.
ಆಗಸ್ಟ್ ಕೊನೆಯ ವಾರ ಅಥವ ಸೆಪ್ಟೆಂಬರ್ ಮೊದಲ ವಾರದಲ್ಲಿ ಸಂಸತ್ ಅಧಿವೇಶನ ಆರಂಭವಾಗಲಿದೆ. ರಾಜ್ಯಸಭೆಯ ಸದಸ್ಯರು ಇದೇ ಮೊದಲ ಬಾರಿಗೆ ಸಾಮಾಜಿಕ ಅಂತರವನ್ನು ಕಾಪಾಡಲು ಛೇಂಬರ್ ಮತ್ತು ಗ್ಯಾಲರಿಯಲ್ಲಿ ಕುಳಿತುಕೊಳ್ಳಲಿದ್ದಾರೆ.
1952ರ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರಿಗೆ ಈ ರೀತಿಯ ಆಸನದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ರಾಜ್ಯಸಭೆಯ 60 ಸದಸ್ಯರಲ್ಲಿ ಕೆಲವರು ಛೇಂಬರ್, ಕೆಲವರು ಗ್ಯಾಲರಿಯಲ್ಲಿ ಕುಳಿತುಕೊಂಡು ಕಲಾಪದಲ್ಲಿ ಪಾಲ್ಗೊಳ್ಳಲಿದ್ದಾರೆ.
ಲೋಕಸಭೆಯಲ್ಲೂ ಇದೇ ಮಾದರಿ ಅನುಸರಿಸಲಾಗುತ್ತಿದೆ. ರಾಜ್ಯಸಭೆ ಮತ್ತು ಲೋಕಸಭೆ ಗ್ಯಾಲರಿಯಲ್ಲಿ ದೊಡ್ಡ ಎಲ್‌ಇಡಿ ಪರದೆಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಲೋಕಸಭೆ ಮತ್ತು ರಾಜ್ಯಸಭೆ ಸಿಬ್ಬಂದಿಗಳಿಗೂ ಹಲವು ನಿರ್ದೇಶನಗಳನ್ನು ನೀಡಲಾಗಿದೆ.

ಸ್ಪೀಕರ್ ಜೊತೆ ಸಭೆಗಳು
ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಜುಲೈ 17ರಂದು ಸಭೆ ನಡೆಸಿ ಅಧಿವೇಶನ ನಡೆಸುವ ಕುರಿತು ವಿವರವಾಗಿ ಚರ್ಚೆ ನಡೆಸಿದ್ದಾರೆ. ಗ್ಯಾಲರಿ, ಛೇಂಬರ್‌ಗಳನ್ನು ಬಳಕೆ ಮಾಡಿಕೊಳ್ಳುವ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಸಿಬ್ಬಂದಿಗಳಿಗೆ ಸೂಚನೆ
ವೆಂಕಯ್ಯ ನಾಯ್ಡು ಆಗಸ್ಟ್ ಕೊನೆಯ ವಾರದಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ರಾಜ್ಯಸಭೆ ಸಿಬ್ಬಂದಿಗೆ ಸೂಚನೆ ಕೊಟ್ಟಿದ್ದಾರೆ. ಹಲವು ಕಚೇರಿಗಳ ಸಿಬ್ಬಂದಿಗಳು ಇದಕ್ಕಾಗಿಯೇ ಹೆಚ್ಚುವರಿ ಕೆಲಸಗಳನ್ನು ಮಾಡುತ್ತಿದ್ದಾರೆ. ಇನ್ನೊಮ್ಮೆ ಸಿದ್ಧತೆಗಳ ಪರಿಶೀಲನೆ ನಡೆಸಿದ ಬಳಿಕ ದಿನಾಂಕ ನಿಗದಿಯಾಗಲಿದೆ.

ಇದೇ ಮೊದಲ ಬಾರಿ ಇಂತಹ ವ್ಯವಸ್ಥೆ
ಸಾಮಾನ್ಯವಾಗಿ ರಾಜ್ಯಸಭೆ ಮತ್ತು ಲೋಕಸಭೆ ಕಲಾಪ ಒಟ್ಟಿಗೆ ನಡೆಯುತ್ತಿದೆ. ಆದರೆ, ಇದೇ ಮೊದಲ ಬಾರಿಗೆ ಬೆಳಗ್ಗೆ ಒಂದು, ಮಧ್ಯಾಹ್ನದ ನಂತರ ಮತ್ತೊಂದು ಕಲಾಪಗಳು ನಡೆಯಲಿವೆ. ಕೋವಿಡ್ ಪರಿಸ್ಥಿತಿಯಲ್ಲಿ ಎಲ್ಲರಿಗೂ ಒಟ್ಟಿಗೆ ಸ್ಥಳಾವಕಾಶ ನೀಡಲು ಸಾಧ್ಯವಿಲ್ಲ

ಬಜೆಟ್ ಅಧಿವೇಶನ ಮೊಟಕು
ಕೋವಿಡ್ ಕಾರಣದಿಂದಾಗಿ ಮಾರ್ಚ್ 23ರಂದು ಲೋಕಸಭೆ ಬಜೆಟ್ ಅಧಿವೇಶನವ ಮೊಟಕುಗೊಳಿಸಲಾಯಿತು. ನಿಯಮಗಳ ಪ್ರಕಾರ ಅಧಿವೇಶನ ಮೊಟಕುಗೊಳಿಸಿದ 6 ತಿಂಗಳ ಒಳಗೆ ಪುನಃ ಅಧಿವೇಶನ ಸೇರಬೇಕಿದೆ.












Click it and Unblock the Notifications