Monalisa:ಕೇರಳದಲ್ಲಿ ಮಹಾಕುಂಭದ ಮೊನಾಲಿಸಾ ನೃತ್ಯ: ಪ್ರೇಮಿಗಳ ದಿನ ರೆಡ್‌ ಡ್ರೆಸ್‌ನಲ್ಲಿ ಮಿಂಚಿದ ವೈರಲ್ ಹುಡುಗಿ

2025ರ ಮಹಾಕುಂಭದಲ್ಲಿ ಹಾರಗಳನ್ನು ಮಾರಾಟ ಮಾಡುವ ಮೊನಾಲಿಸಾ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದ್ದಾರೆ. ಆಕೆಯ ಸೌಂದರ್ಯ ನೋಡಿ ಎಲ್ಲರೂ ಅವಳ ಅಭಿಮಾನಿಗಳಾಗಿದ್ದಾರೆ. ಮೊನಾಲಿಸಾ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದಾಗಿನಿಂದ ಅವರಿಗೆ ಚಲನಚಿತ್ರಗಳಿಂದ ಸಾಕಷ್ಟು ಆಫರ್‌ಗಳು ಬರಲು ಪ್ರಾರಂಭವಾಗಿವೆ. ಇದೀಗ ಆಕೆ ಪ್ರೇಮಿಗಳ ದಿನ ರೆಡ್‌ ಡ್ರೆಸ್‌ನಲ್ಲಿ ಕೇರಳದ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡಿದ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಹೌದು.. ಮೊನಾಲಿಸಾ ಕೇರಳದ ಆಭರಣ ಸಮಾರಂಭದಲ್ಲಿ ಭಾಗವಹಿಸಿದರು. ಈ ಸಮಯದಲ್ಲಿ ಮೊನಾಲಿಸ ಸುಂದರವಾದ ಕೆಂಪು ಬಣ್ಣದ ಲೆಹೆಂಗಾದಲ್ಲಿ ಮಿಂಚಿದ್ದಾರೆ. ಅಲ್ಲದೆ ತುಂಬಾ ಉತ್ಸಾಹದಿಂದ ನೃತ್ಯ ಕೂಡ ಮಾಡಿದ್ದಾರೆ. ಅಲ್ಲಿದ್ದ ಜನರು ಸಹ ಅವರಿಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ. ಈಗ ಮೊನಾಲಿಸಾ ಅವರ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

monalisa dance in kerala viral girl shines in red dress on valentine s day

ಮೊನಾಲಿಸಾ ಅವರ ಈ ವಿಡಿಯೋ ನೋಡಿದ ನಂತರ, ಅಭಿಮಾನಿಗಳು ಅವರನ್ನು ಹೊಗಳುವುದರಲ್ಲಿ ಸುಸ್ತಾಗುತ್ತಿಲ್ಲ. ಒಬ್ಬ ಬಳಕೆದಾರರು, 'ನೀವು ತುಂಬಾ ಸುಂದರವಾಗಿದ್ದೀರಿ' ಎಂದು ಬರೆದಿದ್ದಾರೆ. ಮತ್ತೊಬ್ಬರು 'ಅವಳ ಕಣ್ಣುಗಳು ತುಂಬಾ ಮುದ್ದಾಗಿವೆ' ಎಂದಿದ್ದಾರೆ. ಇನ್ನೊಬ್ಬರು, 'ವಿಧಿ ನಮ್ಮನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದೊಯ್ಯುತ್ತದೆ' ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಮೊನಾಲಿಸಾ ಐಶ್ವರ್ಯಾ ರೈ ಅವರನ್ನು ಸಹ ಹಿಂದಾಕುತ್ತಾರೆ' ಎಂದು ಬರೆದಿದ್ದಾರೆ. ಈ ರೀತಿಯಾಗಿ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಮೊನಾಲಿಸಾ ಮೇಲೆ ಪ್ರೀತಿಯನ್ನು ಸುರಿಸುತ್ತಿದ್ದಾರೆ.

ಮಹಾ ಕುಂಭ ಮೇಳದ ನಂತರ ಅನೇಕ ನಿರ್ದೇಶಕರು ಮೊನಾಲಿಸಾಗೆ ಸಿನಿಮಾ ಆಫರ್‌ಗಳನ್ನು ನೀಡಿದ್ದರು. ಸನೋಜ್ ಮಿಶ್ರಾ ನಿರ್ದೇಶನ ಮಾಡುತ್ತಿರುವ ದಿ ಡೈರಿ ಆಫ್ ಮಣಿಪುರ್ ಚಿತ್ರಕ್ಕೂ ಅವರಿಗೆ ಆಫರ್ ಸಿಕ್ಕಿತು. ಮೊನಾಲಿಸಾ ಶೀಘ್ರದಲ್ಲೇ ನಟಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಅಭಿಮಾನಿಗಳು ಅವರನ್ನು ಎಷ್ಟರ ಮಟ್ಟಿಗೆ ಇಷ್ಟಪಡುತ್ತಾರೋ ಕಾದು ನೋಡಬೇಕು.

ತನ್ನ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲೇ, ಮೊನಾಲಿಸಾ ಸುದ್ದಿಯಲ್ಲಿದ್ದಾರೆ. ಮೊನಾಲಿಸಾ ಅವರ ವೀಡಿಯೊಗಳು ಪ್ರತಿದಿನ ವೈರಲ್ ಆಗುತ್ತಲೇ ಇವೆ. ಈ ನೃತ್ಯ ವೀಡಿಯೊಗೂ ಮೊದಲು ಅವರು ಅಧ್ಯಯನ ಮಾಡುತ್ತಿರುವ ವೀಡಿಯೊ ಕಾಣಿಸಿಕೊಂಡಿತ್ತು. ಇದನ್ನು ಸನೋಜ್ ಮಿಶ್ರಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಈ ವೀಡಿಯೊದ ಜೊತೆಗೆ ಅವರು "ಭೂಮಿಯ ಮೇಲೆ ಜನಿಸಿದ ನಂತರ, ಮನುಷ್ಯನು ಎಲ್ಲವನ್ನೂ ಕಲಿಯುತ್ತಲೇ ಇರುತ್ತಾನೆ, ಇಂದಿನ ಸಮಾಜಕ್ಕೆ ಶಿಕ್ಷಣ ಬಹಳ ಮುಖ್ಯ" ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ.

ಒಟ್ಟಿನಲ್ಲಿ ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಹುಡುಗಿ ಮೊನಾಲಿಸಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದಾರೆ. ಅವರ ಜೇನು ಬಣ್ಣದ ಕಣ್ಣಿಗೆ ಜನ ಮಾರು ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಮೊನಾಲಿಸಾ ಸಿನಿಮಾ ಮಾಡಲು ತಯಾರಿ ನಡೆಸಿದ್ದು, ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೆ ಜನ ಯಾವ ರೀತಿ ರಿಯಾಕ್ಟ್ ಮಾಡುತ್ತಾರೆ ಅನ್ನೋದನ್ನು ಕಾದು ನೊಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+