Mohammed Shami: ಕ್ರಿಕೆಟಿಗ ಮೊಹಮ್ಮದ್ ಶಮಿ ಬಂಧಿಸುವಂತೆ ಸುಪ್ರೀಂಕೋರ್ಟ್‌ ಮೊರೆ ಹೋದ ಪತ್ನಿ

ತಮ್ಮ ಪತಿ ಮೊಹಮ್ಮದ್ ಶಮಿಯನ್ನು ಬಂಧಿಸಬೇಕು ಎಂದು ಹಸಿನ್ ಜಹಾನ್ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ವರದಕ್ಷಿಣೆ ಕಿರುಕುಳ ಮತ್ತು ಅನೈತಿಕ ಸಂಬಂಧ ಆರೋಪಕ್ಕೆ ಸಂಬಂಧಪಟ್ಟಂತೆ ಶಮಿಯನ್ನು ಬಂಧಿಸಬೇಕು ಎಂದು ಶಮಿ ವಿರುದ್ಧ ಹೊರಡಿಸಿದ್ದ ಬಂಧನ ವಾರೆಂಟ್‌ಗೆ ಪಶ್ಚಿಮ ಬಂಗಾಳದ ಸೆಷನ್ಸ್ ನ್ಯಾಯಾಲಯ ತಡೆ ನೀಡಿತ್ತು.

ಬಂಗಾಳ ಸೆಷನ್ಸ್ ನ್ಯಾಯಾಲಯ ತಡೆ ನೀಡಿದ್ದನ್ನು ಶಮಿ ಪತ್ನಿ ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದರು, ಕೂಡಲೇ ತಡೆ ಆದೇಶವನ್ನು ರದ್ದುಗೊಳಿಸಲು ಮನವಿ ಮಾಡಿದ್ದರು. ಆದರೆ ಕೋಲ್ಕತ್ತಾ ಹೈಕೋರ್ಟ್, ಸೆಷನ್ಸ್ ನ್ಯಾಯಾಲದ ಆದೇಶವನ್ನು ಎತ್ತಿ ಹಿಡಿಯುವ ಮೂಲಕ ಹಸಿನಾ ಅವರ ಮನವಿ ತಿರಸ್ಕರಿಸಿತ್ತು.

 Mohammed Shamis Wife Moves Supreme Court Against Calcutta High Courts Order On Arrest Warrant

ಹೈಕೋರ್ಟ್‌ನಲ್ಲಿ ಹಿನ್ನಡೆಯಾದ ಬಳಿಕ ಅವರು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಶಮಿ ವಿರುದ್ಧ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು "ಕಳೆದ 4 ವರ್ಷಗಳಿಂದ ಯಾವುದೇ ನ್ಯಾಯಯುತ ಸಂದರ್ಭಗಳಿಲ್ಲದೆ ತಪ್ಪಾಗಿ ತಡೆಹಿಡಿಯಲಾಗಿದೆ" ಎಂದು ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ತಂಡದ ಜೊತೆ ಪ್ರವಾಸ ಮಾಡುವಾಗ ಕೂಡ ಮೊಹಮ್ಮದ್ ಶಮಿ ವೇಶ್ಯೆಯರ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಪತ್ನಿ ಆರೋಪಗಳು ಸಾಬೀತಾದರೆ ಕ್ಷಮೆ ಕೇಳುತ್ತೇನೆ ಎಂದು ಶಮಿ ತಿಳಿಸಿದ್ದರು. 2023ರ ಆರಂಭದಲ್ಲಿ ಹಸೀನ್ ಜಹಾನ್‌ಗೆ ಮಾಸಿಕ 50 ಸಾವಿರ ರುಪಾಯಿ ಜೀವನಾಂಶ ನೀಡುವಂತೆ ಕೋಲ್ಕತ್ತಾ ನ್ಯಾಯಾಲಯ ಮೊಹಮ್ಮದ್ ಶಮಿಗೆ ಆದೇಶ ನೀಡಿತ್ತು. ಹಸೀನ್ ಜಹಾನ್ ಈ ಜೀವನಾಂಶದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದರು. 2018ರಲ್ಲಿ ಅವರು ತಿಂಗಳಿಗೆ 10 ಲಕ್ಷ ರುಪಾಯಿ ಜೀವನಾಂಶ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದರಲ್ಲಿ ಮೂರು ಲಕ್ಷ ಮಗಳಿಗೆ ಉಳಿದ ಏಳು ಲಕ್ಷ ತಮ್ಮ ಜೀವನ ನಿರ್ವಹಣೆಗೆ ಎಂದು ಅವರು ತಿಳಿಸಿದ್ದರು.

ಶಮಿ ಬಂಧನಕ್ಕೆ ತಡೆ ನೀಡಿದ್ದ ಕೋರ್ಟ್

ಹಸಿನ್ ಜಹಾನ್, ಮೊಹಮ್ಮದ್ ಶಮಿ ವಿರುದ್ಧ 2018 ರಲ್ಲಿ ಜಾದವ್‌ಪುರದಲ್ಲಿ ಪೊಲೀಸ್ ದೂರು ದಾಖಲಿಸಿದ್ದರು. ಕೌಟುಂಬಿಕ ದೌರ್ಜನ್ಯ ಮತ್ತು ವಿವಾಹೇತರ ಸಂಬಂಧದ ಆರೋಪ ಮಾಡಿದ್ದರು. ಮೊಹಮ್ಮದ್ ಶಮಿ ಪತ್ನಿಯ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು.

ಮೊಹಮ್ಮದ್ ಶಮಿ ಮತ್ತು ಅವರ ಅಣ್ಣ ಹಸೀಬ್ ಅಹ್ಮದ್‌ರನ್ನು 2018ರಲ್ಲಿ ಕೋಲ್ಕತ್ತಾ ಪೊಲೀಸರ ಮಹಿಳಾ ಕುಂದುಕೊರತೆ ಕೋಶವು ಪ್ರಶ್ನಿಸಿತ್ತು ಮತ್ತು ಅಲಿಪೋರ್ ನ್ಯಾಯಾಲಯವು ಭಾರತೀಯ ಕ್ರಿಕೆಟಿಗನ ವಿರುದ್ಧ ಬಂಧನ ವಾರಂಟ್ ಹೊರಡಿಸಿತು. ಆದರೆ, ನಂತರ ಬಂಧನ ವಾರಂಟ್‌ಗೆ ತಡೆ ನೀಡಲಾಯಿತು.

ಶಮಿ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ಕೂಡ ಹಸಿನ್ ಜಹಾನ್ ಆರೋಪಸಿದ್ದರು, ಆದರೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಭ್ರಷ್ಟಾಚಾರ ನಿಗ್ರಹ ಘಟಕ ಮೊಹಮ್ಮದ್ ಶಮಿಗೆ ಕ್ಲೀನ್ ಚಿಟ್ ನೀಡಿದೆ. ಸದ್ಯ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್ ಟೈಟಾನ್ಸ್ ಪರವಾಗಿ ಆಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+