ಖರೆ ಅಂದ್ರೆ ನಾನೇ ಛಾಯ್ ವಾಲಾ, ಮೋದಿ ಅಲ್ಲ!

ಪಾಟ್ನಾ, ಫೆ.13- ಚಹಾ ಮಾರಾಟಗಾರ, ಬಿಜೆಪಿಯ ಪ್ರಧಾನಿ ಆಕಾಂಕ್ಷಿ ನರೇಂದ್ರ ಮೋದಿಗೆ ಪ್ರತಿಸ್ಪರ್ಧಿಯೊಬ್ಬರು ಹುಟ್ಟುಕೊಂಡಿದ್ದಾರೆ. ಪ್ರಧಾನಿ ಆಕಾಂಕ್ಷಿಯಾಗಿ ಅಲ್ಲ; ಬದಲಿಗೆ ಚಹಾ ಮಾರಾಟಗಾರನಾಗಿ. ಅಷ್ಟೇ ಅಲ್ಲ. ಅಸಲಿ ಚಹಾ ಮಾರಾಟಗಾರ ನಾನೇ ಎಂದೂ ಅವರು ಘೋಷಿಸಿಕೊಂಡಿದ್ದಾರೆ.

ಹೀಗೆ ಹೇಳಿರುವುದು ಬೇರೆ ಯಾರೂ ಅಲ್ಲ. ಅಂದೊಮ್ಮೆ 'ಜಬ್ ತಕ್ ರಹೇಗಾ ಸಮೋಸೆ ಮೆ ಆಲೂ ತಬ್ ತಕ್ ರಹೇಗಾ ಪಾಲಿಟಿಕ್ಸ್ ಮೆ ಲಾಲು' ಎಂದಿದ್ದ jail-returned ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

 Lok Sabha polls - Modi must have been selling blood I am real chai wala says Lalu

I am real chai wala: 'ಖರೆ ಅಂದ್ರೆ ನಾನೇ ಛಾಯ್ ವಾಲಾ. ಅವರೇನಿದ್ದರೂ (ಮೋದಿ) ರಕ್ತ/ಕೋಮು ಗಲಭೆಗಳ ಮಾರಾಟಗಾರ' ಎಂದು ಲಾಲು ಹೇಳಿದ್ದಾರೆ. ಇದು ಮೋದಿಯ chai pe charcha ಪ್ರಚಾರಕ್ಕೆ ಲಾಲು ತಿರುಗೇಟು.

ಮೋದಿ ಚಹಾ ಮಾಡುತ್ತಿದ್ದರು ಅಂದರೆ ನಂಬಿಕಯೇ ಬರುತ್ತಿಲ್ಲ. ನಿಜಕ್ಕೂ ನಾನು ಚಿಕ್ಕವನಿದ್ದಾಗ ಪಾಟ್ನಾದ ಗಲ್ಲಿಗಳಲ್ಲಿ ಚಹಾ ಮಾರುತ್ತಿದೆ ಎಂದು ಮೊದಲ ಬಾರಿಗೆ ತಮ್ಮ ಚಹಾ ಮಾರಾಟ ಇತಿಹಾಸವನ್ನು ಲಾಲು ಬಹಿರಂಗಪಡಿಸಿದ್ದಾರೆ.

'ಇಲ್ಲೇ ಪಶುವೈದ್ಯಕೀಯ ಕಾಲೇಜು ಇದೆಯಲ್ಲಾ. ಅಲ್ಲಿ ಪೊಲೀಸ್ ಕ್ವಾರ್ಟರ್ಸ್ ಇದೆ. ಅಲ್ಲಿರುವ ಛಾಯ್ ಶಾಪಿನಲ್ಲಿ ನಾನು ನನ್ನ ಅಣ್ಣಂದಿರ ಜತೆಗೂಡಿ ಚಹಾ ಮಾರುತ್ತಿದೆ. ನನ್ನ ಶಾಲಾ ದಿನಗಳಲ್ಲಿ ಚಹಾ ಜತೆಗೆ ಬಿಸ್ಕತ್ ಮಾರುತ್ತಿದ್ದೆ' ಎಂದು ಲಾಲು ತಮ್ಮ ಬಾಲ್ಯವನ್ನು ಬಹಿರಂಗಪಡಿಸಿದ್ದಾರೆ.

ವೋ ಕಹಾ ಛಾಯ್ ಬೇಚೇಗಾ? ವೋ ತೊ ಖೂನ್ ಬೆಚ್ತಾ ಹೋಗಾ ಯಾ ದಂಗಾ ಬೇಚ್ತಾ ಹೋಗಾ ( ಅವರಾ? ಅವರೆಲ್ಲಿಂದ ಚಹಾ ಮಾರುತ್ತಾರೆ. ಅವರು ರಕ್ತ ಅಥವಾ ದಂಗೆಗಳನ್ನು ಮಾರುತ್ತಿದ್ದಿರಬಹುದು) ಎಂದು ಆರ್ ಜೆಡಿ ಸ್ಥಾಪಿತ ನಾಯಕ ಮೋದಿ ಬಾಲ್ಯದಲ್ಲಿ ಚಹಾ ಮಾರುತ್ತಿದ್ದುದ್ದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+