Get Updates
Get notified of breaking news, exclusive insights, and must-see stories!

ಬಣ್ಣದ ಹಬ್ಬ ಹೋಳಿ ಹಬ್ಬಕ್ಕೆ ಶುಭ ಹಾರೈಸಿದ ಮೋದಿ, ಕೋವಿಂದ್

Recommended Video

      ಹೋಳ ಹಬ್ಬದ ಶುಭ ಹಾರೈಸಿದ ಮೋದಿ, ಕೋವಿಂದ್ | Oneindia Kannada

      ನವದೆಹಲಿ, ಮಾರ್ಚ್ 02: ದೇಶದಾದ್ಯಂತ ಹೋಳಿ ಹಬ್ಬದ ಸಡಗರ ತುಂಬಿ ತುಳಿಕಾಡುತ್ತಿದೆ. ಎಲ್ಲೆಡೆಯೂ ಸಂಭ್ರಮದ ಓಕುಳಿ ಹರಿಯುತ್ತಿದೆ. ಹೋಳಿ ಸಂಭ್ರಮದಲ್ಲಿ ಭಾರತೀಯರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವಿಟ್ಟರ್ ಮೂಲಕ ಶುಭ ಹಾರೈಸಿದ್ದಾರೆ.

      'ಎಲ್ಲ ದೇಶ ಬಂಧುಗಳಿಗೂ ಹೋಳಿ ಹಬ್ಬದ ಶುಭಾಶಯಗಳು' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

      ಪ್ರಧಾನಿಯವರು ಒಂದೇ ವಾಕ್ಯದಲ್ಲಿ ಶುಭಾಶಯ ಹೇಳಿ ಮುಗಿಸಿದ್ದರೆ, ರಾಷ್ಟ್ರಪತಿ ಕೋವಿಂದ್ ಮತ್ತಷ್ಟು ಆತ್ಮೀಯವಾಗಿ ಶುಭ ಕೋರಿದ್ದಾರೆ.

      ಹೋಳಿ ಹಬ್ಬಕ್ಕೆ ಎಲ್ಲಾ ನಾಗರಿಕರಿಗೂ ಹಾರ್ದಿಕ ಶುಭ ಹಾರೈಕೆಗಳು. ಬಣ್ಣಗಳ ಹಬ್ಬ ಹೋಳಿ ಸಮಾಜದಲ್ಲಿ ಸಾಮರಸ್ಯ ಸೃಷ್ಟಿಸಲಿ. ಈ ಹಬ್ಬ ಎಲ್ಲೆಲ್ಲೂ ಶಾಂತಿ, ಸಂತೋಷ, ಸಮೃದ್ಧಿ ತರಲಿ ಎಂದು ಹಾರೈಸಿದ್ದಾರೆ ಕೋವಿಂದ್.

      ದೇಶದೆಲ್ಲೆಡೆ ಇಂದು ಕಾಮನ ಹಬ್ಬ ಹೋಳಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಪಾಲ್ಗುಣ ಮಾಸದ ಹುಣ್ಣಿಮೆಯಂದು ಆಚರಣೆಗೊಳ್ಳುವ ಈ ಹಬ್ಬವನ್ನು ಈ ವರ್ಷ, ಕೆಲವೆಡೆ ಮಾರ್ಚ್ 1 ರಂದೂ ಆಚರಿಸಲಾಗಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+